ETV Bharat / international

ಹಮಾಸ್​ ವಶದಲ್ಲಿದ್ದ 4 ಒತ್ತೆಯಾಳುಗಳ ಸಾವು: ಇಸ್ರೇಲ್ ಹೇಳಿಕೆ - Israel Hamas War - ISRAEL HAMAS WAR

ಹಮಾಸ್​ ವಶದಲ್ಲಿದ್ದ ತನ್ನ ಮತ್ತೆ ನಾಲ್ವರು ಒತ್ತೆಯಾಳುಗಳು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಐಡಿಎಫ್ ವಕ್ತಾರ ಡೇನಿಯಲ್ ಹಗರಿ
ಐಡಿಎಫ್ ವಕ್ತಾರ ಡೇನಿಯಲ್ ಹಗರಿ (IANS image)
author img

By ETV Bharat Karnataka Team

Published : Jun 4, 2024, 9:57 AM IST

ಜೆರುಸಲೇಂ : 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಗಾಜಾ ಪಟ್ಟಿಗೆ ಅಪಹರಿಸಿಕೊಂಡು ಹೋಗಿದ್ದ ಒತ್ತೆಯಾಳುಗಳ ಪೈಕಿ ಮತ್ತೆ ನಾಲ್ಕು ಜನ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ದೃಢಪಡಿಸಿವೆ. ಗಾಜಾದಲ್ಲಿ ಆಡಳಿತ ನಡೆಸುತ್ತಿದ್ದ ಗುಂಪುಗಳ ಬಳಿ ಈ ಮೃತರ ಶವಗಳಿವೆ ಎಂದು ಅದು ಹೇಳಿದೆ.

ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ ಐಡಿಎಫ್ ವಕ್ತಾರ ಡೇನಿಯಲ್ ಹಗರಿ, "ಹಲವಾರು ತಿಂಗಳ ಹಿಂದೆ ಖಾನ್ ಯೂನಿಸ್ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ನಾಲ್ವರು ಒಟ್ಟಿಗೆ ಕೊಲ್ಲಲ್ಪಟ್ಟಿದ್ದಾರೆ" ಎಂದು ಇಸ್ರೇಲ್ ಪಡೆಗಳು ಅಂದಾಜಿಸಿವೆ ಎಂದು ಹೇಳಿದರು.

ಗುಪ್ತಚರ ಮಾಹಿತಿಯನ್ನು ಆಧರಿಸಿ ಈ ಸಾವುಗಳನ್ನು ದೃಢೀಕರಿಸಲಾಗಿದೆ ಮತ್ತು ಈ ಮಾಹಿತಿಗಳನ್ನು ಆರೋಗ್ಯ ಸಚಿವಾಲಯದ ತಜ್ಞರ ಸಮಿತಿಯು ಅನುಮೋದಿಸಿದೆ. ಈ ನಾಲ್ವರು ಯಾವ ಸಂದರ್ಭಗಳಲ್ಲಿ ಸಾವಿಗೀಡಾದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಮೃತಪಟ್ಟ ನಾಲ್ವರನ್ನು ಅಮಿರಾಮ್ ಕೂಪರ್, ಚೈಮ್ ಪೆರಿ, ಯೊರಾಮ್ ಮೆಟ್ಜರ್ ಮತ್ತು ನಾಡವ್ ಪಾಪ್ಲೆವೆಲ್ ಎಂದು ಗುರುತಿಸಲಾಗಿದೆ. 80ರ ಹರೆಯದ ಕೂಪರ್, ಪೆರಿ ಮತ್ತು ಮೆಟ್ಜರ್ ಗಾಜಾ ಪಟ್ಟಿಯ ಗಡಿಯ ಬಳಿಯ ನಿರ್ ಓಜ್ ನಿವಾಸಿಗಳಾಗಿದ್ದು, ಡಿಸೆಂಬರ್​ನಲ್ಲಿ ಹಮಾಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಜೀವಂತವಾಗಿ ಕಾಣಿಸಿಕೊಂಡಿದ್ದರು. 51 ವರ್ಷದ ಪಾಪ್ಲೆವೆಲ್ ನಿರ್ ಓಜ್ ಬಳಿಯ ನಿರಿಮ್ ಗ್ರಾಮದವರು. ಮೇ ಆರಂಭದಲ್ಲಿ ಹಮಾಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಅವರು ಕೊನೆಯ ಬಾರಿಗೆ ಜೀವಂತವಾಗಿ ಕಾಣಿಸಿಕೊಂಡಿದ್ದರು.

ಇದಕ್ಕೂ ಮುನ್ನ ಸೋಮವಾರ, ಐಡಿಎಫ್ ನಿರ್ ಓಜ್​ ಗ್ರಾಮದಲ್ಲಿ 36 ವರ್ಷದ ವೈದ್ಯ ಡೊಲೆವ್ ಯೆಹುದ್ ಅವರ ಶವವನ್ನು ಪತ್ತೆಹಚ್ಚಿದೆ. ಸೋಮವಾರದವರೆಗೆ ಒತ್ತೆಯಾಳುಗಳೆಂದು ಪರಿಗಣಿಸಲ್ಪಟ್ಟಿದ್ದ ಯೆಹುದ್ ಅವರನ್ನು ಅಕ್ಟೋಬರ್ 7 ರಂದು ಹಮಾಸ್ ಕೊಂದಿದೆ ಎಂದು ಸೇನೆ ತಿಳಿಸಿದೆ. ಒಟ್ಟು 124 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್​ ಉಗ್ರರು ಹಿಡಿದಿಟ್ಟುಕೊಂಡಿದ್ದರು ಮತ್ತು ಅವರಲ್ಲಿ 43 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಘೋಷಿಸಿದೆ.

ಇಸ್ರೇಲ್ ಮೇಲೆ ಹೌತಿಗಳ ಕ್ಷಿಪಣಿ ದಾಳಿ: ದಕ್ಷಿಣ ಇಸ್ರೇಲ್​ನ ಬಂದರು ನಗರ ಐಲಾತ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮೆನ್​ನ ಹೌತಿ ಗುಂಪು ಹೇಳಿದೆ ಎಂದು ಯೆಮೆನ್ ನ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಸೋಮವಾರ, ಐಲಾಟ್​ನಲ್ಲಿ ಇಸ್ರೇಲಿ ಪಡೆಗಳು ಕೆಂಪು ಸಮುದ್ರದ ದಿಕ್ಕಿನಿಂದ ಬರುತ್ತಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆದಿವೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಕ್ಯಾಲಿಫೋರ್ನಿಯಾದಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿನಿ ನಾಪತ್ತೆ - Indian Student Missing in US

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.