ETV Bharat / international

ಬೊಕೊ ಹರಾಮ್​ ಉಗ್ರರ ಬಳಿ ಒತ್ತೆಯಾಳಾಗಿದ್ದ 209 ಮಕ್ಕಳು ಸೇರಿ 350 ಜನರ ರಕ್ಷಣೆ - Boko Haram - BOKO HARAM

ನೈಜೀರಿಯಾದ ಬೊಕೊ ಹರಾಮ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದ 350 ಜನರನ್ನು ರಕ್ಷಿಸಲಾಗಿದೆ.

ಬೊಕೊ ಹರಾಮ್​ ಉಗ್ರರ ಬಳಿ ಒತ್ತೆಯಾಳಾಗಿದ್ದ 209 ಮಕ್ಕಳು ಸೇರಿ 350 ಜನರ ರಕ್ಷಣೆ
ಬೊಕೊ ಹರಾಮ್​ ಉಗ್ರರ ಬಳಿ ಒತ್ತೆಯಾಳಾಗಿದ್ದ 209 ಮಕ್ಕಳು ಸೇರಿ 350 ಜನರ ರಕ್ಷಣೆ (ians)
author img

By PTI

Published : May 21, 2024, 4:44 PM IST

ಮೈದುಗುರಿ (ನೈಜೀರಿಯಾ): ಈಶಾನ್ಯ ನೈಜೀರಿಯಾದಲ್ಲಿ ಬೊಕೊ ಹರಾಮ್ ಉಗ್ರಗಾಮಿಗಳು ಹಲವಾರು ತಿಂಗಳುಗಳಿಂದ ಒತ್ತೆಯಾಳಾಗಿ ಇರಿಸಿಕೊಂಡಿದ್ದ ನೂರಾರು ಮಹಿಳೆಯರು ಮತ್ತು ಮಕ್ಕಳನ್ನು ಅರಣ್ಯ ಪ್ರದೇಶವೊಂದರಿಂದ ರಕ್ಷಿಸಿ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಸೇನೆ ತಿಳಿಸಿದೆ.

2009 ರಲ್ಲಿ ಬಂಡಾಯ ಪ್ರಾರಂಭಿಸಿದ ಉಗ್ರಗಾಮಿ ಗುಂಪಿನ ಅಡಗುತಾಣವಾದ ಸಂಬಿಸಾ ಅರಣ್ಯದಲ್ಲಿ 350 ಒತ್ತೆಯಾಳುಗಳನ್ನು ಇರಿಸಲಾಗಿತ್ತು ಎಂದು ನೈಜೀರಿಯಾದ ಹಿರಿಯ ಸೇನಾಧಿಕಾರಿ ಮೇಜರ್ ಜನರಲ್ ಕೆನ್ ಚಿಗ್ಬು ಸೋಮವಾರ ಹೇಳಿದರು. ಸಂಬಿಸಾ ಅರಣ್ಯ ಇರುವ ಬೊರ್ನೊದಲ್ಲಿ ಒತ್ತೆಯಾಳುಗಳನ್ನು ಅಧಿಕಾರಿಗಳಿಗೆ ಒಪ್ಪಿಸುವ ಸಮಯದಲ್ಲಿ ಸೋಮವಾರ ತಡರಾತ್ರಿ ಕೆನ್ ಚಿಗ್ಬು ಮಾತನಾಡಿದರು.

ಹರಿದ ಕೊಳಕಾದ ಬಟ್ಟೆಗಳನ್ನು ತೊಟ್ಟಿದ್ದ 209 ಮಕ್ಕಳು, 135 ಮಹಿಳೆಯರು ಮತ್ತು ಆರು ಪುರುಷರು ತೀರಾ ದಯನೀಯ ಹಾಗೂ ಬಳಲಿದ ಸ್ಥಿತಿಯಲ್ಲಿ ಕಂಡು ಬಂದರು. ಉಗ್ರರ ವಶದಲ್ಲಿದ್ದ ಕೆಲ ಬಾಲಕಿಯರು ಬಲವಂತದ ಮದುವೆಗಳಿಂದ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಉಗ್ರರು ತಮ್ಮ ವಶದಲ್ಲಿರುವ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವುದು ಅಥವಾ ಅವರನ್ನು ಬಲವಂತವಾಗಿ ಮದುವೆಯಾಗುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ.

ಮಹಿಳಾ ಒತ್ತೆಯಾಳುಗಳ ಪೈಕಿ ಓರ್ವಳಿಗೆ ಏಳು ಮಕ್ಕಳಿರುವುದು ಕಂಡು ಬಂದಿತು. ಕೆಲವರು ಉಗ್ರರ ಹಿಡಿತದಿಂದ ತಪ್ಪಿಸಿಕೊಂಡರೂ ಮಕ್ಕಳ ಕಾರಣದಿಂದ ತನಗೆ ಹಾಗೆ ಮಾಡಲಾಗಲಿಲ್ಲ ಎಂದು ಏಳು ಮಕ್ಕಳೊಂದಿಗೆ ರಕ್ಷಿಸಲ್ಪಟ್ಟ ಮಹಿಳೆ ಹಜಾರಾ ಉಮರಾ ಹೇಳಿದರು. ತಪ್ಪಿಸಿಕೊಳ್ಳುವ ಸಮಯದಲ್ಲಿ ಸಿಕ್ಕಿಬಿದ್ದರೆ ಅಂಥವರನ್ನು ತೀವ್ರ ಹಿಂಸೆಗೆ ಒಳಪಡಿಸಲಾಗುತ್ತದೆ ಅಥವಾ ಅವರನ್ನು ಶಾಶ್ವತವಾಗಿ ಬಂಧಿಸಿ ಇಡಲಾಗುತ್ತದೆ.

ಕ್ಯಾಮರೂನ್ ಮತ್ತು ನೈಜರ್ ಗಡಿ ಉದ್ದಕ್ಕೂ ವ್ಯಾಪಿಸಿರುವ ದಟ್ಟಾರಣ್ಯದಲ್ಲಿನ ಸಂಬಿಸಾ ಅರಣ್ಯದಲ್ಲಿ ಪೂರ್ಣ ಒಂದು ದಿನ ಮಿಲಿಟರಿ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಎಂದು ಸೇನೆ ತಿಳಿಸಿದೆ. ಒಂದು ಕಾಲದಲ್ಲಿ ಶಾಂತ ಹಾಗೂ ಸುಂದರ ಅರಣ್ಯವಾಗಿದ್ದ ಸಂಬಿಸಾ ಈಗ ಬೊಕೊ ಹರಾಮ್ ಮತ್ತು ಇತರ ಉಗ್ರಗಾಮಿಗಳ ನೆಲೆಯಾಗಿದೆ.

ಬಿಡುಗಡೆಯಾದ ಒತ್ತೆಯಾಳುಗಳನ್ನು ಟ್ರಕ್​ಗಳ ಮೂಲಕ ಬೊರ್ನೊದಲ್ಲಿನ ಸರ್ಕಾರಿ ನಿವಾಸಕ್ಕೆ ಸಾಗಿಸಲಾಯಿತು. ಇವರು ತಮ್ಮ ಮನೆಗಳಿಗೆ ಹೋಗುವವರೆಗೂ ಇಲ್ಲಿ ಆಶ್ರಯ ಪಡೆಯಲಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಕೆಲ ಉಗ್ರಗಾಮಿಗಳು ಹತರಾಗಿದ್ದು, ಅವರ ಹಲವಾರು ಟೆಂಟ್​ಗಳನ್ನು ಸಹ ನಾಶಪಡಿಸಲಾಗಿದೆ ಎಂದು ಸೇನೆ ತಿಳಿಸಿದೆ.

ನೈಜೀರಿಯಾದ ಸ್ಥಳೀಯ ಜಿಹಾದಿ ಬಂಡುಕೋರ ಉಗ್ರಗಾಮಿಗಳ ಗುಂಪಾದ ಬೊಕೊ ಹರಾಮ್ 2009 ರಲ್ಲಿ ದೇಶದಲ್ಲಿ ಇಸ್ಲಾಮಿಕ್ ಶರಿಯಾ ಕಾನೂನನ್ನು ಸ್ಥಾಪಿಸಲು ತನ್ನ ಬಂಡಾಯವನ್ನು ಪ್ರಾರಂಭಿಸಿತು. ನೈಜೀರಿಯಾದ ಯುಎನ್ ಏಜೆನ್ಸಿಗಳ ಪ್ರಕಾರ, ಈ ಉಗ್ರಗಾಮಿಗಳ ಹಿಂಸಾಚಾರದ ಪರಿಣಾಮವಾಗಿ ಕನಿಷ್ಠ 35,000 ಜನರು ಸಾವನ್ನಪ್ಪಿದ್ದಾರೆ ಮತ್ತು 2.1 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.

ಇದನ್ನೂ ಓದಿ : ಸತತ ನಾಲ್ಕನೇ ಬಾರಿಗೆ ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ 'ಪ್ರಚಂಡ' - NEPAL PM PRACHANDA WIN TRUST VOTE

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.