ETV Bharat / international

ಕಲ್ಲಿದ್ದಲು ಗಣಿ ಮೇಲೆ ದಾಳಿ: 20 ಕಾರ್ಮಿಕರನ್ನು ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು

ಶಸ್ತ್ರಸಜ್ಜಿತ ಬಂದೂಕುಧಾರಿಗಳು 20 ಕಾರ್ಮಿಕರನ್ನು ಬಲಿ ಪಡೆದ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.

author img

By PTI

Published : 6 hours ago

GUNMEN KILL 20 MINERS
ಸಂಗ್ರಹ ಚಿತ್ರ (FIle)

ಕರಾಚಿ (ಪಾಕಿಸ್ತಾನ): ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿ ಮೇಲೆ ದಾಳಿ ಮಾಡಿದ ಶಸ್ತ್ರಸಜ್ಜಿತ ಬಂದೂಕುಧಾರಿಗಳು, 20 ಕಾರ್ಮಿಕರನ್ನು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಇಂದು (ಶುಕ್ರವಾರ) ಬೆಳಗ್ಗೆ ದುಕ್ಕಿ ಪ್ರದೇಶದಲ್ಲಿ ಈ ದುರಂತ ನಡೆದಿದೆ. ಗುಂಡಿನ ದಾಳಿಯಲ್ಲಿ ಇತರ ಎಂಟು ಜನರು ಗಾಯಗೊಂಡಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ ಭದ್ರತಾ ಸಭೆಗೂ ಮುನ್ನ ಭಯಾನಕ ದಾಳಿ: ಮುಂದಿನ ವಾರ (ಅಕ್ಟೋಬರ್ 15-16) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಘಟನೆಯ ಭದ್ರತಾ ಶೃಂಗಸಭೆ ನಡೆಯಲಿದೆ ಎಂಬ ಮಾಹಿತಿ ಇದ್ದು, ಅದಕ್ಕೂ ಮುನ್ನ ಈ ದಾಳಿ ನಡೆದಿದೆ. ಸರಣಿ ಹಿಂಸಾಚಾರ, ದಾಳಿಯಿಂದ ಜನ ಭಯಬೀತರಾಗಿದ್ದಾರೆ.

ಇಲ್ಲಿ ಹತ್ತು ಕಲ್ಲಿದ್ದಲು ಗಣಿಗಳಿದ್ದು, ಆಗಂತುಕರು ಹ್ಯಾಂಡ್ ಗ್ರೆನೇಡ್ ಮತ್ತು ರಾಕೆಟ್ ಲಾಂಚರ್‌ಗಳನ್ನು ಬಳಸಿ ದಾಳಿ ನಡೆಸಿದ್ದಾರೆ. ಪರಾರಿಯಾಗುವ ಮುನ್ನ ಗಣಿಗಾರಿಕೆ ಯಂತ್ರಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ 20 ಕಾರ್ಮಿಕರು ಮೃತಪಟ್ಟಿದ್ದು, 8 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹಮಾಯುನ್ ಖಾನ್ ನಾಸಿರ್ ಮಾಹಿತಿ ನೀಡಿದ್ದಾರೆ.

ಇದೊಂದು ಪೂರ್ವಯೋಜಿತ ದಾಳಿ: ಗುರುವಾರ ತಡರಾತ್ರಿ ಕಲ್ಲಿದ್ದಲು ಗಣಿಗೆ ಬಂದೂಕುಧಾರಿಗಳು ಅಕ್ರಮವಾಗಿ ಪ್ರವೇಶಿಸಿ ಈ ದಾಳಿ ನಡೆಸಿದ್ದಾರೆ. ಇದು ಪೂರ್ವಯೋಜಿತ ದಾಳಿ. ಸುದ್ದಿ ತಿಳಿದ ತಕ್ಷಣ ಅರೆಸೈನಿಕ ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಸಿವೆ. ಗಾಯಗೊಂಡಿರಲ್ಲಿ ಕೆಲವರು ಅಪ್ರಾಪ್ತರಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮೃತರಲ್ಲಿ ಹೆಚ್ಚು ಪುರುಷರಿದ್ದು ಬಲೂಚಿಸ್ತಾನದ ಪಶ್ತೂನ್ ಮಾತನಾಡುವ ಪ್ರದೇಶಗಳಿಂದ ಬಂದವರಾಗಿದ್ದರು. ಮೃತ ಮೂವರು ಮತ್ತು ಗಾಯಗೊಂಡ ನಾಲ್ವರು ಅಫ್ಘಾನಿಸ್ತಾನದವರು. ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾರೂ ವಹಿಸಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದುಷ್ಕರ್ಮಿಗಳ ಬಂಧನಕ್ಕೆ ಶೋಧ : ಆಗಂತುಕರು ಮೊದಲು ಎಲ್ಲ ಕಾರ್ಮಿಕರನ್ನು ಒಟ್ಟುಗೂಡಿಸಿ ನಂತರ ಅವರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಮತ್ತು ಎಫ್‌ಸಿಯ ತುಕಡಿಗಳು ಆ ಪ್ರದೇಶವನ್ನು ಸುತ್ತುವರೆದಿವೆ. ಅಪರಾಧಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಎಸ್‌ಎಚ್‌ಒ ದುಕ್ಕಿ ಹಮನ್ಯನ್ ಖಾನ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯ ಬೈರುತ್​​ ಮೇಲೆ ಇಸ್ರೇಲ್​ ವೈಮಾನಿಕ ದಾಳಿ - ಕನಿಷ್ಠ 22 ಜನರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.