ನ್ಯೂಯಾರ್ಕ್: ಆಧುನಿಕ ಜೀವನದಲ್ಲಿ ಆತಂಕ ಮತ್ತು ಒತ್ತಡ ಸಾಮಾನ್ಯವಾಗಿದೆ. ಇದರಿಂದ ಹೊರಬರಲು ಅನೇಕ ಕ್ರಮಗಳನ್ನು ಜನರು ಅನುಸರಿಸುತ್ತಾರೆ. ಇಂತಹ ಒತ್ತಡ ಮತ್ತು ಆತಂಕ ನಿವಾರಣೆಗೆ ನೈಸರ್ಗಿಕ ಪೂರಕವಾಗಿರುವ ಎಲ್ ಥೈನೈನ್ ಸೇವಿಸುವುದಾಗಿ ಅಮೆರಿಕದ ಖ್ಯಾತ ಹಾಡುಗಾರ್ತಿ ಟೈಲರ್ ಸ್ವಿಫ್ಟ್ ತಿಳಿಸಿದ್ದಾರೆ. ಈ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಅವರ ಅಭಿಮಾನಿಗಳು ಈ ಕುರಿತು ಹೆಚ್ಚೆಚ್ಚು ಹುಡುಕಾಟ ನಡೆಸುತ್ತಿದ್ದಾರೆ.
ಏನಿದು ಎಲ್-ಥೈನೈನ್?: ಈ ಉತ್ಪನ್ನ ಮಾರುಕಟ್ಟೆಯಲ್ಲಿ ಪೌಡರ್ ಅಥವಾ ಮಾತ್ರೆಗಳ ರೂಪದಲ್ಲಿ ಲಭ್ಯ. ಆನ್ಲೈನ್ನಲ್ಲೂ ಖರೀದಿಗೆ ಸಿಗುತ್ತಿದೆ. ಈ ಹಿಂದಿನ ಅಧ್ಯಯನಗಳು ತಿಳಿಸುವಂತೆ ಹಸಿರು ಚಹಾ ಅಮಿನೋ ಆ್ಯಸಿಡ್ಗಳು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಎಲ್ ಥೈನೈನ್ ಗಮನಾರ್ಹವಾಗಿ ಅಲ್ಫಾ ತರಾಂಗಾಂತರ ಬ್ಯಾಂಡ್ನಲ್ಲಿನ ಚಟುವಟಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದು ಮಂಪರಿಲ್ಲದ ರೀತಿಯಲ್ಲಿ ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ ಎಂದು 2008ರಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.
ಹೀಗಿದ್ದರೂ ಇದರ ಪ್ರಯೋಜನ ಮತ್ತು ಸಾಮರ್ಥ್ಯವನ್ನು ಅರಿಯಲು ಕ್ಲಿನಿಕಲ್ ತಪಾಸಣೆಗೆ ಸಂಶೋಧಕರು ತಿಳಿಸುತ್ತಾರೆ. ದೀರ್ಘಕಾಲದವರೆಗೆ ಇದರ ಸೇವನೆ ಅಡ್ಡ ಪರಿಣಾಮ ಹೊಂದಿದೆಯೇ ಎಂಬುದು ಗೊತ್ತಾಗಿಲ್ಲ. ಯುರೋಪಿಯನ್ ಯುನಿಯನ್ನಲ್ಲಿ ಅಮಿನೋ ಆ್ಯಸಿಡ್ಗೆ ಅವಕಾಶವಿಲ್ಲ. ಯುರೋಪಿಯನ್ ಕಮಿಷನ್ ಇಎಫ್ಎಸ್ಎ ಎಲ್ ಥೈನೈನ್ ಏಕಾಗ್ರತೆ ಹೆಚ್ಚಿಸುತ್ತದೆ ಹಾಗು ವಿಶ್ರಾಂತಿ ನೀಡುತ್ತದೆ ಎಂಬ ಆರೋಗ್ಯ ಸಂಬಂಧಿತ ವಾದವನ್ನು ಇದು ತಳ್ಳಿ ಹಾಕಿದೆ.
2019ರಲ್ಲಿ ಟೈಲರ್ ಸ್ವಿಫ್ಟ್ ಎಲ್ ಥೈನೈನ್ ಕುರಿತು ಆಸಕ್ತಿಕರ ವಿಚಾರವನ್ನು ಹಂಚಿಕೊಂಡ ಬಳಿಕ ಇದರ ಬೇಡಿಕೆ ಹೆಚ್ಚಿದೆ. ನಿಯತಕಾಲಿಕೆಯೊಂದಕ್ಕೆ ಮಾತನಾಡಿದ ಅವರು, ಎಲ್ ಥೈನೈನ್ ನೈಸರ್ಗಿಕ ಪೂರಕವಾಗಿದ್ದು, ಇದು ನನಗೆ ಒತ್ತಡ ಮತ್ತು ಆತಂಕ ಎದುರಿಸಲು ಸಹಾಯ ಮಾಡುತ್ತದೆ ಎಂದಿದ್ದರು.
ಒತ್ತಡ ಮತ್ತು ಆತಂಕ ನಿವಾರಣೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಾಬೀತಾದ ಅನೇಕ ವೈದ್ಯಕೀಯ ಚಿಕಿತ್ಸೆಗಳಿವೆ. ಇದರಲ್ಲಿ ಉಸಿರಾಟದ ತಂತ್ರಜ್ಞಾನ ಮತ್ತು ಧ್ಯಾನದ ವ್ಯಾಯಾಮದಂತಹ ದೇಹದ ಸ್ಕ್ಯಾನ್ ತಂತ್ರಗಳು ಅಥವಾ ಸ್ನಾಯು ವಿಶ್ರಾಂತಿಯಂತಹ ಪ್ರಗತಿಯ ಮಾದರಿಗಳಿವೆ.(ಐಎಎನ್ಎಸ್)
ಇದನ್ನೂ ಓದಿ: ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನು ರಕ್ಷಿಸಿ: ಪೋಷಕರಿಗೆ ತಜ್ಞರ ಮನವಿ