ETV Bharat / health

ಮಧುಮೇಹಿಗಳಿಗೆ ಯಾವುದು ಬೆಸ್ಟ್​; ಬ್ಲ್ಯಾಕ್​ ಟೀ ಉತ್ತಮವೇ, ಹಾಲು ಹಾಕಿದ ಚಹಾವೇ?: ಇಲ್ಲಿವೆ ಬೆಸ್ಟ್​​ ಟಿಪ್ಸ್​ - tea helpful to control blood sugar - TEA HELPFUL TO CONTROL BLOOD SUGAR

Tea and Diabetes: ಮಧುಮೇಹ ರೋಗಿಗಳು ಸಿಹಿ ಪದಾರ್ಥಗಳನ್ನು ತ್ಯಜಿಸುವುದು ಮುಖ್ಯ. ಆದರೆ, ಅನೇಕರಿಗೆ ಟೀ ಕುಡಿಯುವ ಅಭ್ಯಾಸವಿರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ಆ ಚಟವನ್ನು ಬಿಡಲು ಸಾಧ್ಯವೇ ಆಗಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಧುಮೇಹಿಗಳು ಗಿಡಮೂಲಿಕೆ ಚಹಾ ಅಥವಾ ಕಪ್ಪು ಚಹಾ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಭಾರಿ ಪ್ರಯೋಜನಕಾರಿ. ಹೀಗೆ ಮಾಡುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವೆಂದು ಪರಿಗಣಿಸಲಾಗಿದೆ.

these-tea-helpful-to-control-blood-sugar-level-in-diabetes details here in kannada
ಮಧುಮೇಹಿಗಳಿಗೆ ಯಾವ ಚಹಾ ಸೇವನೆ ಬೆಸ್ಟ್​: ಆರೋಗ್ಯಕ್ಕೆ ಯಾವುದು ಉತ್ತಮ?: ಇಲ್ಲಿದೆ ಬೆಸ್ಟ್​​ ಟಿಪ್ಸ್​ (Getty Images)
author img

By ETV Bharat Karnataka Team

Published : Jun 24, 2024, 8:48 AM IST

TEA HELPFUL TO CONTROL BLOOD SUGAR: ಇತ್ತೀಚಿನ ದಿನಮಾನಗಳಲ್ಲಿ ಜೀವನಶೈಲಿ ಬದಲಾವಣೆಯಿಂದ ಮಧುಮೇಹ ಎಂಬ ಮಹಾಮಾರಿ ಕಾಟ ಕಾಮನ್​ ಎಂಬಂತಾಗಿದೆ. ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ತುಂಬಾ ಹೆಚ್ಚಾದಾಗ ಅದನ್ನು ಮಧುಮೇಹ ಒಂದು ಸ್ಥಿತಿ ಎಂದು ಕರೆಯಲಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದರಿಂದ ರಕ್ತನಾಳಗಳಿಗೆ ಹಾನಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯ ಸಂಬಂಧಿ ಕಾಯಿಲೆಯೂ ಬರಬಹುದು.

ಮಧುಮೇಹವುಳ್ಳ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮತ್ತು ವಹಿಸಬೇಕಾಗುತ್ತದೆ. ವಿಶೇಷವಾಗಿ ಅವರು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕಾಗುತ್ತದೆ. ಆದರೆ, ಅನೇಕರಿಗೆ ಟೀ ಕುಡಿಯುವ ಅಭ್ಯಾಸವಿರುತ್ತದೆ. ಅದನ್ನು ಬಿಡಲು ಬಹಳ ಕಷ್ಟವಾಗುತ್ತಿರುತ್ತದೆ. ಮಧುಮೇಹದ ನಂತರವೂ ಇವರು ಚಹಾ ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ಹಾಲಿನ ಚಹಾ ಸೇವನೆ ಮಾಡುವುದು ತುಸು ಅಪಾಯಕಾರಿಯೇ ಸರಿ.

ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಧುಮೇಹಿಗಳು ಸಕ್ಕರೆಯೊಂದಿಗೆ ಮಾಡಿದ ಹಾಲಿನ ಚಹಾವನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ದೇಹದಲ್ಲಿ ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಾಲು ಸೇರಿಸಿದ ಚಹಾವನ್ನು ಮಧುಮೇಹ ಹೊಂದಿರುವವರು ಕುಡಿಯಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಲು ಮತ್ತು ಚಹಾದ ಮಿಶ್ರಣವು ದೇಹಕ್ಕೆ ಹಾನಿಕರ.

ಗಿಡಮೂಲಿಕೆ ಚಹಾದಿಂದಾಗುವ ಪ್ರಯೋಜನಗಳು: ಮಧುಮೇಹ ನಿಯಂತ್ರಣಕ್ಕೆ ಗಿಡಮೂಲಿಕೆ ಚಹಾದ ಸೇವನೆಯು ಪ್ರಯೋಜನಕಾರಿಯಾಗಿದೆ, ಮಧುಮೇಹ ರೋಗಿಗಳಿಗೆ ಚಹಾವನ್ನು ತಪ್ಪಿಸಲು ಸಾಧ್ಯವಾಗದಿದ್ದರೆ ಅವರು ಗಿಡಮೂಲಿಕೆ ಚಹಾವನ್ನು ಸೇವಿಸಬೇಕು, ಏಕೆಂದರೆ ಅದರಿಂದ ಯಾವುದೇ ಹಾನಿಯಾಗುವ ಅಪಾಯವಿಲ್ಲ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಎ ಜೊತೆಗೆ, ಆಂಟಿ - ಆಕ್ಸಿಡೆಂಟ್‌ಗಳು, ಆಂಟಿಮೈಕ್ರೊಬಿಯಲ್‌ಗಳು ಗಿಡಮೂಲಿಕೆ ಚಹಾದಲ್ಲಿ ಕಂಡು ಬರುತ್ತವೆ. ಹೀಗಾಗಿ ಗಿಡಮೂಲಿಕೆ ಚಹಾ ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.

ದಾಲ್ಚಿನ್ನಿ ಚಹಾ: ಈ ಚಹಾಗಳೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹದ ಸಂದರ್ಭದಲ್ಲಿ, ದಾಲ್ಚಿನ್ನಿಯಿಂದ ತಯಾರಿಸಿದ ಚಹಾವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಏಕೆಂದರೆ ಇದು ದೇಹದಲ್ಲಿ ಇನ್ಸುಲಿನ್ ಅನ್ನು ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಮಧುಮೇಹ ರೋಗಿಗಳು ಕಪ್ಪು ಚಹಾ ಸೇವನೆ ಮಾಡಬೇಕು. ಇದರಲ್ಲಿರುವ ಉರಿಯೂತ ಕಡಿಮೆ ಅಂಶಗಳು ಊತವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ದಾಸವಾಳದ ಚಹಾವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ವಿಟಮಿನ್ ಸಿ ಅಂಶಗಳು ಹಲವು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಮಾಡುತ್ತದೆ ಮಾತ್ರವಲ್ಲದೇ ಮಧುಮೇಹ ನಿಯಂತ್ರಣ ಮಾಡುತ್ತದೆ.

ನಿಮ್ಮ ಗಮನಕ್ಕೆ: ಇಲ್ಲಿ ನೀಡಲಾದ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ಆರೋಗ್ಯ ವೃತ್ತಿಪರರ ಅಧ್ಯಯನ ಮತ್ತು ಸಲಹೆಯ ಆಧಾರದ ಮೇಲೆ ಹಂಚಿಕೊಳ್ಳುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ

ಇದನ್ನು ಓದಿ:ಜೀನ್ಸ್​​ ಧರಿಸಿ ನಿದ್ರೆ ಮಾಡುತ್ತೀರಾ ಎಚ್ಚರ!: ಸ್ವಲ್ಪ ಯಾಮಾರಿದ್ರೂ ಈ ಸಮಸ್ಯೆಗೆ ತುತ್ತಾಗುತ್ತೀರಾ ಜಾಗ್ರತೆ - Side Effects of Sleeping in Jeans

ಬೀ ಅಲರ್ಟ್​​: ಆರೋಗ್ಯಯುತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡಬೇಕು?.. ಹೆಚ್ಚು - ಕಡಿಮೆ ಆದ್ರೆ ಸಮಸ್ಯೆ ಏನು? - How Many Times Urinate in a day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.