How Much Sugar Eat In A Day: ನಮ್ಮಲ್ಲಿ ಹೆಚ್ಚಿನವರು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಯಾವುದೇ ಹಬ್ಬವಾಗಲಿ, ಸಮಾರಂಭವಾಗಲಿ ಸಿಹಿತಿಂಡಿ ಖಂಡಿತ ಇದ್ದೇ ಇರುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಿಹಿತಿಂಡಿಗಳು ಹೆಚ್ಚಾಗಿ ಲಭಿಸುತ್ತದೆ. ಅನೇಕ ಜನರು ಊಟದ ನಂತರ ಸಿಹಿ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದಾಗ್ಯೂ, ಇದು ಹೆಚ್ಚುವರಿ ಸಕ್ಕರೆ ಹೊಂದಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ಸಿಹಿ ತಿನ್ನುವುದರಿಂದ ಅನೇಕ ರೋಗಗಳು ಬರುತ್ತವೆ. ಇದು ಮಧುಮೇಹಿಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೇ ಸಕ್ಕರೆಯ ಅತಿಯಾದ ಸೇವನೆಯಿಂದ ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.
ಸಕ್ಕರೆಯನ್ನು ಬಿಳಿ ವಿಷ ಎಂದೂ ಕರೆಯುತ್ತಾರೆ. ಒಬ್ಬ ವ್ಯಕ್ತಿಯು ಹೆಚ್ಚು ಸಕ್ಕರೆ ಸೇವಿಸಿದರೆ, ಅವನು ಅನೇಕ ಗಂಭೀರ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಿರುವ ಸಕ್ಕರೆ ಪ್ರಮಾಣವು ನಿಮ್ಮ ಒಟ್ಟು ಕ್ಯಾಲೋರಿ ಸೇವನೆ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ, ಸಾಧ್ಯವಾದರೆ ಸಕ್ಕರೆಯನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಅದರಲ್ಲಿ ಪ್ರಯೋಜನಕಾರಿ ಪೋಷಕಾಂಶಗಳ ಕೊರತೆಯಿದೆ. ಹೆಚ್ಚು ಸಕ್ಕರೆ ತಿನ್ನುವುದರಿಂದ ದೇಹದಲ್ಲಿ ಕ್ಯಾಲೊರಿಗಳ ಪ್ರಮಾಣ ಹೆಚ್ಚಿಸಬಹುದು. ಇದು ನಿಮ್ಮ ಚಯಾಪಚಯ ಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ.
ದಿನಕ್ಕೆ ಎಷ್ಟು ಸಕ್ಕರೆ ತಿನ್ನುವುದು ಸುರಕ್ಷಿತ?: ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ 150 ಕ್ಯಾಲೊರಿಗಳಿಗಿಂತ ಹೆಚ್ಚು ಅಥವಾ 37.5 ಗ್ರಾಂ (9 ಟೀ ಚಮಚಗಳು) ಸಕ್ಕರೆಯನ್ನು ಸೇವಿಸಬಾರದು. ಅಲ್ಲದೇ, ಮಹಿಳೆಯರು ದಿನಕ್ಕೆ 100 ಕ್ಯಾಲೋರಿಗಳಿಗಿಂತ ಹೆಚ್ಚು (6 ಟೀ ಚಮಚಗಳು) ಸಕ್ಕರೆಯನ್ನು ಸೇವಿಸಬಾರದು. ಮಹಿಳೆಯರು ತಮ್ಮ ದಿನನಿತ್ಯದ ಸಕ್ಕರೆ ಸೇವನೆಯನ್ನು 25 ಗ್ರಾಂಗಿಂತ ಹೆಚ್ಚಿಗೆ ಮಿತಿಗೊಳಿಸಲು ತಜ್ಞರು ಸಲಹೆ ನೀಡುತ್ತಾರೆ. ಪುರುಷರು ತಮ್ಮ ದೈನಂದಿನ ಸಕ್ಕರೆ ಸೇವನೆಯನ್ನು 38 ಗ್ರಾಂಗಿಂತ ಕಡಿಮೆಯಿರಬೇಕು.
ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ ಆಹಾರ ಮಾರ್ಗಸೂಚಿಗಳು ಜನರು ತಮ್ಮ ದೈನಂದಿನ ಕ್ಯಾಲೊರಿಗಳಲ್ಲಿ 10 ಪ್ರತಿಶತಕ್ಕಿಂತ ಕಡಿಮೆ ಸೇವಿಸುವಂತೆ ಸಲಹೆ ನೀಡುತ್ತವೆ. ದಿನಕ್ಕೆ 2,000 ಕ್ಯಾಲೊರಿಗಳನ್ನು ತಿನ್ನುವ ವ್ಯಕ್ತಿಯು 50 ಗ್ರಾಂ ಸಕ್ಕರೆ ಅಥವಾ ಸುಮಾರು 12.5 ಟೀ ಚಮಚಗಳಿಗಿಂತ ಹೆಚ್ಚು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚು ಸಕ್ಕರೆ ತಿನ್ನುವುದರಿಂದ ಆಗುವ ಅಡ್ಡಪರಿಣಾಮಗಳೇನು?:
- ಹೆಚ್ಚು ಸಕ್ಕರೆ ತಿನ್ನುವುದರಿಂದ ತೂಕ ಹೆಚ್ಚಾಗಬಹುದು.
- ಹೆಚ್ಚುವರಿ ಸಕ್ಕರೆಯನ್ನು ತಿನ್ನುವುದು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.
- ಹೆಚ್ಚು ಸಕ್ಕರೆ ಸೇವನೆಯು ಮೊಡವೆ, ಅಕಾಲಿಕ ವಯಸ್ಸಾದ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
- ಟೈಪ್-2 ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ.
- ಸಕ್ಕರೆಯು ನಿಮ್ಮ ಶಕ್ತಿಯ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಿ:
ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.