ETV Bharat / health

ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಈ ಗಿಡಮೂಲಿಕೆ ಹಲವು ರೋಗ ನಿವಾರಿಸಬಲ್ಲದು: ಯಾವುದಿದು ಯೌವನದ ಗಿಡ!? - Punarnava Health Benefits

author img

By ETV Bharat Karnataka Team

Published : Jul 26, 2024, 7:09 PM IST

ಇತ್ತೀಚೆಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದು ಸಾಮಾನ್ಯ. ಕೀಲು ನೋವು, ಮಂಡಿ ನೋವು, ಲೀವರ್​ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆಯಂತ ಹತ್ತಾರು ಸಣ್ಣ- ಪುಟ್ಟ ಯಾತನೆಗಳಿಂದ ಹಿಡಿದು ಜೀವ ಹಿಂಡುವ ರೋಗಗಳು ಕಾಡುವುದು ಹೆಚ್ಚು. ಇಂತಹ ಸಣ್ಣ-ಪುಟ್ಟ ಕ್ಲೇಷಗಳಿಂದ ಹಿಡಿದು ದೊಡ್ಡ ಮಟ್ಟದ ನೋವುಗಳನ್ನು ನಿವಾರಿಸಬಲ್ಲ ಕಿಡಮೂಲಿಕೆಯೊಂದಿದೆ. ಇದನ್ನು ಹೀಗೆ ಸೇವಿಸಿದರೆ ನಿಮ್ಮ ಜೀವಕ್ಕೆ ಅಪಾಯ ತಂದೊಡ್ಡಿರುವ ಕೆಲವು ಹಿಂಸೆ ಮತ್ತು ವ್ಯಥೆಗಳು ದೂರವಾಗಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು.

PUNARNAVA LEAVES BENEFITS
ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಈ ಗಿಡಮೂಲಿಕೆ (ETV Bharat)

ನಿಮ್ಮ ಕಾಲು ಕೆಳಗೆ ಬೆಳೆಯುವ 'ಪುನರ್ನವ' ಎಂಬ ಗಿಡಮೂಲಿಕೆಯೊಂದು ನಿಮ್ಮ ಸಣ್ಣ- ಪುಟ್ಟ ಯಾತನೆಗಳನ್ನು ನಿವಾರಿಸಬಲ್ಲದು ಎಂಬುದರ ಬಗ್ಗೆ ನಿಮಗೆ ಗೊತ್ತಾ? ಗೊತ್ತಿರದಿದ್ದರೆ ಗೊತ್ತು ಮಾಡಿಕೊಳ್ಳಿ. ಆಯುರ್ವೇದ ಔಷಧಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವ ಈ ಕಿಡಮೂಲಿಕೆಯಲ್ಲಿ ಜೀರ್ಣಕ್ರಿಯೆ ಸಮಸ್ಯೆಯಿಂದ ಹಿಡಿದು ಹತ್ತಾರು ರೋಗಗಳನ್ನು ನಿವಾರಿಸಬಲ್ಲ ಶಕ್ತಿ ಅಡಗಿದೆ. ಹೊಲ -ಗದ್ದೆಗಳ ಬದು, ಹಿತ್ತಲದಲ್ಲಿ, ಬೇಲಿಯಲ್ಲಿ, ಪಾಳುಭೂಮಿಗಳಲ್ಲಿ ಯಥೇಚ್ಛವಾಗಿ ಬೆಳೆಯುವ ಈ 'ಪುನರ್ನವ'(ಕೊಮ್ಮೆ ಗಿಡ) ಗಿಡಕ್ಕೆ ಅತ್ಯದ್ಭುತ ಹಾಗೂ ದೈವಿಕ ಔಷಧವಾಗಿ ಕಾರ್ಯನಿರ್ವಹಿಸುವ ಶಕ್ತಿ ಇದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.

ಮಳೆಗಾಲದಲ್ಲಿ ಮನೆಯ ಆಸುಪಾಸಿನಲ್ಲಿಯೂ ಬೆಳೆಯುವ, ಹಳ್ಳಿಯಲ್ಲಿ ಪ್ರತಿ ಹೆಜ್ಜೆಗೂ ಸಿಗುವ ಈ 'ಪುನರ್ನವ' ಗಿಡವು ಹಲವು ಔಷಧಗಳ ಗುಣಗಳನ್ನು ಹೊಂದಿದ್ದರಿಂದ ಇದರ ಎಲೆಯನ್ನು ಬೇಯಿಸಿ ತಿನ್ನುವುದು ಉಂಟು. ಅದರಲ್ಲಿ ಬಿಳಿ 'ಪುನರ್ನವ' ಮತ್ತು ಕೆಂಪು 'ಪುನರ್ನವ' ಎಂಬ ಎರಡು ವಿಧಗಳಿವೆ. ಇದಕ್ಕೆ ತೆಲುಗು ಭಾಷೆಯಲ್ಲಿ ಗಾಳಿಜೆರು, ತೆಲ್ಲ ಗಾಳಿಜೆರುನೆ, ಪುನರ್ನವ, ಆಟಿಕಮಾಮಿಡಿ, ಪಪ್ಪಕು ಅಂತಲೂ ಕರೆಯುದುಂಟು. ಕಾಲ ಬುಡದಲ್ಲಿ ಸಿಗುವ ಈ ಸಂಜೀವಿನಿಗೆ ಕನ್ನಡದಲ್ಲಿ 'ಕೊಮ್ಮೆ ಗಿಡ' ಅಂತಲೂ ಕರೆಯುತ್ತಾರೆ. 'ಪುನರ್ನವ' ಎಂಬುವುದು ಸಂಸ್ಕೃತ ಪದವಾಗಿದ್ದು, ಇದಕ್ಕೆ ಕನ್ನಡದಲ್ಲಿ ನವೀನತೆ, ಹೊಸತನ, ನವ್ಯತೆ, ಹೊಸದು, ಮತ್ತೆ ಯೌವನ ಎಂದರ್ಥ ಬರುತ್ತದೆ.

ಇದಕ್ಕೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುದುಂಟು. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಕಿಡಮೂಲಿಕೆಯನ್ನು ಸೇವಿಸಿದರೆ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ಹೈದರಾಬಾದಿನ ಬಿಆರ್​ಕೆಆರ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ.ಚಿಲುವೇರು ರವೀಂದರ್.

ಕಿಡ್ನಿ ಸಮಸ್ಯೆಗಳಿಗೆ ಪರಿಹಾರ: ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಭಾಗವಾಗಿ ಈ ಗಿಡದ ಎಲೆಗಳನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಇದೆ. ಈ ಎಲೆಯು ಮೂತ್ರಪಿಂಡಗಳನ್ನು ಆರೋಗ್ಯವಾಗಿಡುವುದರ ಜೊತೆಗೆ ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಈ ಕಿಡಮೂಲಿಕೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ಮೂತ್ರದ ಹರಿವನ್ನು ಹೆಚ್ಚಿಸುವುದರ ಜೊತೆಗೆ ಮೂತ್ರಪಿಂಡದ ಕಲ್ಲುಗಳನ್ನು ಮೂತ್ರದ ಮೂಲಕ ಹಾದುಹೋಗಲು ಸಹಾಯ ಕೂಡ ಮಾಡುತ್ತದೆ. ಅದೇ ರೀತಿ ದೇಹದಲ್ಲಿ ನೀರು ಹೆಚ್ಚಾದಾಗ ಅದರಲ್ಲಿರುವ ನೀರನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಲ್ಲದೇ, ಇದರಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಮೂತ್ರನಾಳದ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು. ಖನಿಜಾಂಶಗಳು ಅಧಿಕವಾಗಿರುವುದರಿಂದ ಇದನ್ನು ತಿಂದರೆ ಯಕೃತ್ತಿನ ಆರೋಗ್ಯ ಕೂಡ ಸುಧಾರಿಸುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಈ ಹಸಿರು ತರಕಾರಿಯಲ್ಲಿರುವ ಸಮೃದ್ಧ ಪೋಷಕಾಂಶಗಳು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುತ್ತಾರೆ ಡಾ.ರವೀಂದರ್ ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆಯಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಸ್ಥೂಲಕಾಯವನ್ನು ಸಹ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಿಡ್ನಿಗಳಿಗೆ ಶಕ್ತಿ ನೀಡುವುದರ ಜೊತೆಗೆ, ಹೊಟ್ಟೆಯಲ್ಲಿರುವ ಕಲ್ಲು ಕರಗಿಸುತ್ತದೆ. ಸೋಂಕು ನಿವಾರಣೆ ಹಾಗೂ ಕಾಲುಗಳ ಊತದಿಂದ ಹಿಡಿದು ಕೆಲವು ದೊಡ್ಡ ಮಟ್ಟದ ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

ಮೂಳೆಗಳು ಬಲಗೊಳ್ಳುತ್ತವೆ: ಈ ಗಿಡಮೂಲಕೆಯಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದು, ಇದನ್ನು ಸೇವಿಸುವುದರಿಂದ ಮೂಳೆಗಳ ಆರೋಗ್ಯ ಕೂಡ ಸುಧಾರಿಸುತ್ತದೆ. ಸಂಧಿವಾತ, ಕೀಲು ನೋವು ಮತ್ತು ಊತದ ಲಕ್ಷಣಗಳನ್ನು ಕಡಿಮೆ ಮಾಡಲು ಇದು ತುಂಬಾ ಸಹಕಾರಿ. ಹಾಗೆಯೇ ಪುನರ್ನವ ಎಲೆಗಳು ಮಧುಮೇಹವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದ್ದರಿಂದ ಸೇವಿಸಬಹುದು. ಇವು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಇದರ ಕಶಾಯ ಸೇವನೆಯಿಂದಲೂ ಕೆಲವು ಊತ ಕಡಿಮೆಯಾಗುತ್ತವೆ ಎನ್ನುತ್ತಾರೆ ತಜ್ಞ ವೈದ್ಯರು.

ತೆಗೆದುಕೊಳ್ಳುವುದು ಹೇಗೆ?: 'ಪುನರ್ನವ' ಹಸಿರೆಲೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಕರಿಬೇವಿನಂತೆ ಬೇಯಿಸಿ ತಿನ್ನಬಹುದು. ಸೊಪ್ಪನ್ನು ಸಂಬಾರ್ ಮತ್ತು ಪಲ್ಯದಲ್ಲೂ ಬಳಸಬಹುದು. ನೀವು ಅಮೃತಬಳ್ಳಿಯನ್ನು ತಯಾರಿಸಿ ಕುಡಿಯಬಹುದು. ಪುನರ್ನವ ಎಲೆಗಳನ್ನು ಒಣ ರೂಪದಲ್ಲಿ ತಯಾರಿಸಬಹುದು ಮತ್ತು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಪಾನೀಯವಾಗಿ ಸೇವಿಸಬಹುದು ಎನ್ನುತ್ತಾರೆ ತಜ್ಞರು.

ಸೂಚನೆ: ಇಲ್ಲಿ ನಿಮಗೆ ನೀಡಲಾದ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸೂಚನೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯಕರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮುನ್ನ ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ರೈತರಲ್ಲಿ ಕ್ಯಾನ್ಸರ್​ ಅಪಾಯ ಹೆಚ್ಚಿಸುತ್ತಿರುವ ಕೀಟನಾಶಕಗಳು: ಇವುಗಳನ್ನು ಬಳಸುವ ಮುನ್ನ ಸುರಕ್ಷತಾ ಕ್ರಮಕೈಗೊಳ್ಳಿ - Pesticides Cancer Threat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.