ETV Bharat / health

ದೇಶದಲ್ಲಿ ಧೂಮಪಾನ, ಹೊಗೆ ರಹಿತ ತಂಬಾಕಿನ ವಿರುದ್ಧ ಹೋರಾಡುವ ಅಗತ್ಯವಿದೆ; ತಜ್ಞರು - ತಂಬಾಕು

ಧೂಮಪಾನ ಮತ್ತು ಹೊಗೆರಹಿತ ತಂಬಾಕಿನ ವಿರುದ್ಧ ಹೋರಾಡುವುದು ಕೂಡ ಪ್ರಮುಖವಾಗಿದೆ. ಭಾರತದಲ್ಲಿ 29ರಷ್ಟು ವಯಸ್ಕರು ಪ್ರಸ್ತುತ ಇದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ.

Must combat the dual burden of smoking and smokeless tobacco in India

author img

By ETV Bharat Karnataka Team

Published : Feb 17, 2024, 3:23 PM IST

ಬೆಂಗಳೂರು: ದೇಶದಲ್ಲಿ ಧೂಮಪಾನ ಮತ್ತು ಹೊಗೆರಹಿತ ತಂಬಾಕಿನ ವಿರುದ್ಧ ಹೋರಾಡುವುದು ಅತ್ಯಗತ್ಯವಾಗಿದೆ ಎಂದು ಆರೋಗ್ಯ ತಜ್ಞರು ಮತ್ತು ನೀತಿ ನಿರೂಪಕರು ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ತಂಬಾಕಿನ ಕುರಿತ ಆರನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಈ ವಿಷಯ ತಿಳಿಸಿದರು.

ಭಾರತದಲ್ಲಿ ಬಳಕೆಯಿಂದಾಗಿ ವಾರ್ಷಿಕವಾಗಿ 1 ಮಿಲಿಯನ್​ ಜನರು ಸಾವನ್ನಪ್ಪುತ್ತಿದ್ದು, ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. 2025ರ ಹೊತ್ತಿಗೆ ಸರ್ಕಾರ ಕೂಡ ತಂಬಾಕು ಮುಕ್ತ ಗುರಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ. ಸಮೀಕ್ಷೆಯ ಅನುಸಾರ ಶೇ 38 ರಷ್ಟು ಅಪ್ರಾಪ್ತ ವಯಸ್ಸಿನವರು ಸಿಗರೇಟ್​ ಚಟಕ್ಕೆ ಬಲಿಯಾದರೆ, ಶೇ 47ರಷ್ಟು ಮಂದಿ ಬೀಡಿ ಮತ್ತು ಶೇ 52 ರಷ್ಟು ಜನ ಹೊಗೆರಹಿತ ತಂಬಾಕು ಸೇವನೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಧೂಮಪಾನ ಮತ್ತು ಹೊಗೆರಹಿತ ತಂಬಾಕಿನ ವಿರುದ್ಧ ಹೋರಾಡುವುದು ಕೂಡ ಪ್ರಮುಖವಾಗಿದೆ. ದೇಶದಲ್ಲಿ 29ರಷ್ಟು ವಯಸ್ಕರು ಪ್ರಸ್ತುತ ಇದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ತಂಬಾಕು ನಿಯಂತ್ರಣ ನೀತಿ ಮತ್ತು ಅಭ್ಯಾಸದ ಬದಲಾವಣೆಗೆ ಸಾಮೂಹಿಕ ಕ್ರಿಯೆಯ ಅವಶ್ಯಕತೆ ಇದೆ ಎಂದು ದೆಹಲಿಯ ಅಂತರಾಷ್ಟ್ರೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಪ್ರೊ ಸುತಾಪ ಬಿ ನಿಯೋಗಿ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಐಐಎಚ್​ಎಂಆರ್​​ ಈ ಸಮ್ಮೇಳನವನ್ನು ಆಯೋಜಿಸಿತ್ತು.

ಸಮಾಜದಲ್ಲಿ ಆಳವಾಗಿ ಬೇರೂರಿರುವ ತಂಬಾಕು ಬಳಕೆಯ ಸಮಸ್ಯೆ ನಿರ್ವಹಣೆಗೆ ಸಂಘಟಿತ ಪ್ರಯತ್ನ ಬೇಕಿದೆ. ದೇಶವನ್ನು ಆರೋಗ್ಯದೆಡೆಗೆ ಕೊಂಡೊಯ್ಯಲು ಬಹುಆಯಾಮದ ಮಧ್ಯಸ್ಥಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಡಿಜಿಎಚ್ಎಸ್​ನ ಡಾ ಅತುಲ್​ ಗೋಯೆಲ್​ ತಿಳಿಸಿದರು.

ಭಾರತ 2021ರಿಂದಲೂ ತಂಬಾಕು ಉತ್ಪಾದನೆಯ ನಾಲ್ಕನೇ ಅತಿ ದೊಡ್ಡ ದೇಶವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಜನವರಿಯಲ್ಲಿ ನೀಡಿದ ವರದಿ ಅನುಸಾರ, ದೇಶದಲ್ಲಿ 2010ಕ್ಕೆ ಹೋಲಿಸಿದರೆ 2025 ರ ವೇಳೆಗೆ ತಂಬಾಕು ಬಳಕೆಯ ಶೇ 30ರಷ್ಟು ಕಡಿತವಾಗಲಿದೆ. ತಂಬಾಕು ಉದ್ಯಮ ಎದುರಿಸುವ ನಿಟ್ಟಿನಲ್ಲಿ ಹೊಸ ಉತ್ಪನ್ನಗಳು ಹೊಂದಾಣಿಕೆಯ ತಂತ್ರಗಳು ಅವಶ್ಯವಾಗಿದೆ ಎಂದು ಪಿಎಚ್​ಎಫ್​ಐ ಪ್ರೊ ಕೆ ಶ್ರೀನಾಥ್​​ ರೆಡ್ಡಿ ತಿಳಿಸಿದರು.

ಜೊತೆಗೆ ತಂಬಾಕು ವಿರುದ್ಧದ ಆರೋಗ್ಯ ನಿರ್ವಹಣೆಯಲ್ಲಿ ಆರೋಗ್ಯ ವೃತ್ತಿಪರರು ಮತ್ತು ನೀತಿ ನಿರೂಪಕರ ಮೇಲೆ ಉದ್ಯಮದ ಪ್ರಭಾವವನ್ನು ಎದುರಿಸಲು ನಿರಂತರ ಪ್ರಯತ್ನಗಳನ್ನು ಪ್ರತಿಪಾದಿಸಿದರು. (ಐಎಎನ್​ಎಸ್​​)

ಇದನ್ನೂ ಓದಿ: ಭಾರತದಲ್ಲಿ ವಿನಾಶಕಾರಿ ಪರಿಣಾಮ ಬೀರುತ್ತಿದೆ ತಂಬಾಕು; ಜಾಗತಿಕ ಅಧ್ಯಯನದಿಂದ ಬಯಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.