ETV Bharat / health

ರೈತಾಪಿ, ಕಾರ್ಮಿಕ ಮಹಿಳೆಯರು ಸುಲಭವಾಗಿ ಬಳಕೆ ಮಾಡಬಹುದು ಈ ಮುಟ್ಟಿನ ಕಪ್: ಏನಿದರ ಪ್ರಯೋಜನ? - MENSTRUAL CUP BENEFITS

author img

By ETV Bharat Karnataka Team

Published : Jul 19, 2024, 4:18 PM IST

ಇದು ಋತುಚಕ್ರ ಸಮಯದಲ್ಲಿ ಉಂಟಾಗುವ ಸೋಂಕಿನಂತ ಅಪಾಯ ಕಡಿಮೆ ಮಾಡುತ್ತದೆ. ಜೊತೆಗೆ ಇದು ಪರಿಸರದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

menstrual cup can be easily used women farmers and labour
ಮುಟ್ಟಿನ ಕಪ್​ ಕುರಿತು ಅರಿವು (ಈಟಿವಿ ಭಾರತ್​​)

ಹೈದರಾಬಾದ್​: ಋತುಚಕ್ರದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ಸ್​​​ಗೆ ಬದಲಾಗಿ ಬಳಕೆ ಮಾಡುವ ಮುಟ್ಟಿನ ಕಪ್​ಗಳು ಆರಾಮದಾಯಕವಾಗಿದ್ದು, ಆರೋಗ್ಯ ಪ್ರಯೋಜನ ಹೊಂದಿದೆ. ಈ ಮುಟ್ಟಿನ ಕಪ್​ ಅನ್ನು ಬಿಹಾರ ರಾಜ್ಯಕ್ಕೆ ಹೊಸದಾಗಿದೆ. ದೇಶದ ಕೆಲವು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಈ ಮುಟ್ಟಿನ ಕಪ್​ ಬಳಕೆ ಕುರಿತು ಇದೀಗ ಬಿಹಾರದ ಮಹಿಳೆಯರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ.

माहवारी कप
ರೈತಾಪಿ, ಕಾರ್ಮಿಕ ಮಹಿಳೆಯರು ಸುಲಭವಾಗಿ ಬಳಕೆ ಮಾಡಬಹುದು ಈ ಮುಟ್ಟಿನ ಕಪ್ - ಫೋಟೋ ETV Bharat

ಈ ಕುರಿತು ಮಾತನಾಡಿರುವ ವೈದ್ಯರಾದ ಡಾ ವಿವೇಕಾನಂದ ಮಿಶ್ರಾ, ಮುಟ್ಟಿನ ಕಪ್​ ಬಳಕೆ ಅನೇಕ ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನು ಮಹಿಳೆಯರು ಸುಲಭವಾಗಿ ಬಳಕೆ ಮಾಡಬಹುದು. ಇದರ ಬಹು ಮುಖ್ಯ ಪ್ರಯೋಜನ ಎಂದರೆ ಇದು ಸೋಂಕು ತಗ್ಗಿಸುತ್ತದೆ. ಯಾವುದೇ ರೀತಿಯ ಮಹಿಳಾ ಕಾರ್ಮಿಕರು ಇದನ್ನು ಆರಾಮದಾಯಕವಾಗಿ ಬಳಸಬಹುದು.

ಮುಟ್ಟಿನ ಕಪ್​ ಪ್ರಯೋಜನ: ಇದರ ಬಳಕೆಯಿಂದ ಹಲವು ಪ್ರಯೋಜವಿದೆ. 300 ರಿಂದ 400 ರೂನಲ್ಲಿ ಇದು ಲಭ್ಯವಿದೆ. ಇದನ್ನು 10 ವರ್ಷಗಳ ಕಾಲ ಬಳಕೆ ಮಾಡಬಹುದು. ಇದರಿಂದ ದುಬಾರಿ ಸ್ಯಾನಿಟರಿ ಪ್ಯಾಡ್​ ಕೊಳ್ಳುವ ಹಣ ಉಳಿಯಲಿದೆ. ಜೊತೆಗೆ ಪದೇ ಪದೆ ಸ್ಯಾನಿಟರಿ ಪ್ಯಾಡ್​ ಬದಲಾಯಿಸುವ ಕಿರಿ ಕಿರಿ ತಪ್ಪಲಿದೆ. ಸಿಲಿಕಾನ್​ನಿಂದ ಮಾಡಲಾದ ಈ ಕಪ್​ಗಳು ಮೃದುವಾಗಿದ್ದು, ಋತುಚಕ್ರ ಸಮಯದಲ್ಲಿ ಬಳಕೆ ಮಾಡುವಾಗ ಯಾವುದೇ ಕಿರಿಕಿರಿ ಉಂಟು ಮಾಡುವುದಿಲ್ಲ.

माहवारी कप के लिए जागरुकता अभियान.

ಸಂಪೂರ್ಣವಾಗಿ ತಿಳಿದು ಬಳಸಿ: ಋತುಚಕ್ರದ ಸಮಯದಲ್ಲಿ ಇದನ್ನು ಹೇಗೆ ಬಳಕೆ ಮಾಡಬೇಕು. ಎಂಬ ಮಾಹಿತಿ ತಿಳಿಯುವುದು ಅವಶ್ಯವಾಗಿದೆ. ಇದರ ಬಳಕೆಯು ಋತುಚಕ್ರ ಸಮಯದಲ್ಲಿ ಉಂಟಾಗುವ ಸೋಂಕಿನಂತ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಅನೇಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಪ್ಯಾಡ್​ ತ್ಯಾಜ್ಯಗಳ ವಿಲೇವಾರಿ ಸಮಸ್ಯೆಯನ್ನು ಇದು ತಪ್ಪಿಸುತ್ತದೆ. ಈ ಮುಟ್ಟಿನ ಕಪ್​ ಅನ್ನು ಚೆನ್ನಾಗಿ ಸ್ಟಿರೆಲೈಜ್ ಮಾಡಿದ ಬಳಿಕವೇ ಮಾಡುವುದು ಅವಶ್ಯ.

ಜಾಗೃತಿ ಅಭಿಯಾನ: ದೇಶದ ಅನೇಕ ಪ್ರದೇಶದಲ್ಲಿ ಮುಟ್ಟಿನ ಕಪ್​ ಬಳಕೆ ಕುರಿತು ನಿರಂತರ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಇಂತಹ ಅಭಿಯಾನದಿಂದ ಮಹಿಳೆಯರು ಸಾಕಷ್ಟು ತಿಳಿಯಬಹುದು. ಇದಾದ ಬಳಿಕ ಇದರ ಬಳಕೆಗೆ ಮುಂದಾಗಬಹುದು. ನಿಧಾನವಾಗಿ ಇದಕ್ಕೆ ಮಹಿಳೆಯರು ತೆರೆದುಕೊಂಡರೂ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡುವ ಬದಲಾಗಿ ಬಟ್ಟೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ.

ಮಹಿಳಾ ಕಾರ್ಮಿಕರು ಬಳಕೆ ಮಾಡಬಹುದು: ರೈತಾಪಿ ಮತ್ತು ಉದ್ಯೋಗ ನಿರತ ಮಹಿಳೆಯರು ಇದನ್ನು ಬಳಕೆ ಮಾಡಬಹುದು. ಕೆಲಸದ ಸಮಯದಲ್ಲಿ ಬಳಕೆ ಮಾಡುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಇದರಿಂದ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ.

माहवारी कप.

ಪರಿಹಾರ ಸಮತೋಲನ: ಬಹುತೇಕರು ಸ್ಯಾನಿಟರಿ ಪ್ಯಾಡ್ಸ್​ ಬಳಕೆ ಮಾಡುತ್ತಾರೆ. ಈ ಸ್ಯಾನಿಟರಿ ಪ್ಯಾಡ್​ಗಳ ತ್ಯಾಜ್ಯ ಗಳು ಪರಿಸರಕ್ಕೆ ಬೆದರಿಕೆ ಒಡ್ಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮುಟ್ಟಿನ ಕಪ್​ಗಳು ಪರಿಸರದ ಮೇಲಿನ ತ್ಯಾಜ್ಯದ ಹೊರೆಯನ್ನು ಕಡಿಮೆ ಮಾಡುತ್ತದೆ. ಮಹಿಳೆಯರ ಈ ಉಪಕ್ರಮಗಳು ಕೂಡ ಹವಾಮಾನ ಬದಲಾವಣೆ ತಡೆಯುವ ನಿಟ್ಟಿನಲ್ಲಿ ಸಹಾಯವಾಗುತ್ತದೆ. ಕಾರಣ ಹವಾಮಾನ ಬದಲಾವಣೆಯು ಇಂತಹ ಸಣ್ಣ ಸಣ್ಣ ಅಂಶವನ್ನು ಹೊಂದಿದೆ.

10 ವರ್ಷಗಳ ಕಾಲ ಬಳಕೆ: ಈ ಮುಟ್ಟಿನ ಕಪ್​ ಅನ್ನು 10 ವರ್ಷಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಮುಟ್ಟಿನ ಕಪ್​ ಬಳಕೆ ವಿಚಾರದಲ್ಲಿ ಇದೀಗ ಅನೇಕ ಸಂಘಟನೆಗಳು ಮಹಿಳೆಯರಿಗೆ ಜಾಗೃತಿ ಮೂಡಿಸುವ ಕ್ರಮಕ್ಕೆ ಮುಂದಾಗಿದೆ. ಈ ಸಂಘಟನೆಗಳಿಂದ ಕಡಿಮೆ ದರಕ್ಕೆ ಕೂಡ ಮಹಿಳೆಯರಿಗೆ ಈ ಮುಟ್ಟಿನ ಕಪ್​ ಲಭ್ಯವಾಗುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ: ಪೀರಿಯಡ್​​ ಸಮಸ್ಯೆಗೆ ಹೇಳಿ ಗುಡ್​ ಬೈ: 2,500 ಪ್ಯಾಡ್​ಗೆ ಸಮವಿದು; ಮುಟ್ಟಿನ ಕಪ್​ ಪ್ರಯೋಜನಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.