ETV Bharat / health

ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ವೈದ್ಯರ ಸಲಹೆ ಅನುಸರಿಸಿ: ಅಡ್ಡ ಪರಿಣಾಮ ತಪ್ಪಿಸಿ - Heart diseases - HEART DISEASES

ENERGY DRINKS SIDE EFFECTS: ಎನರ್ಜಿ ಡ್ರಿಂಕ್ಸ್ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ, ಅದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಎನರ್ಜಿ ಡ್ರಿಂಕ್ಸ್​ನಲ್ಲಿ ಆರೋಗ್ಯವನ್ನು ಸುಧಾರಿಸುವ ಉತ್ತೇಜಕಗಳು ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಿಸುವ ಸಾಧ್ಯತೆಯಿದೆ. ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ವೈದ್ಯರ ಸಲಹೆಗಳನ್ನು ಏಕೆ ಪಡೆಯಬೇಕು ಎಂಬುದನ್ನು ಇಲ್ಲಿ ತಿಳಿಯೋಣ..

ENERGY DRINKS  ENERGY DRINKS SIDE EFFECTS  DRINKS FOR ENERGY  ENERGY DRINKS CONSUMPTION
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Aug 29, 2024, 7:35 PM IST

ENERGY DRINKS SIDE EFFECTS: ಎನರ್ಜಿ ಡ್ರಿಂಕ್ಸ್​ ತ್ವರಿತ ಶಕ್ತಿಯನ್ನು ನೀಡಲು ಜನಪ್ರಿಯವಾಗಿವೆ. ಆದರೆ, ಅವು ನಿಮ್ಮ ಹೃದಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಈ ಪಾನೀಯಗಳು ಹೆಚ್ಚು ಸಾಮಾನ್ಯವಾಗುತ್ತಿದ್ದಂತೆ, ಅವುಗಳ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಎನರ್ಜಿ ಡ್ರಿಂಕ್ಸ್​ ಸೇವನೆ ಮಾಡುವ ಮುನ್ನ ವೈದ್ಯರ ಸಲಹೆಗಳನ್ನು ಪಡೆಯವುದು ಮುಖ್ಯವಾಗಿದೆ.

ಎನರ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ವಿಶೇಷವಾಗಿ ಯಾರಾದರೂ ಈಗಾಗಲೇ ಹೃದಯ ಸಮಸ್ಯೆಗಳನ್ನು ಹೊಂದಿದ್ದರೆ ಅವರು ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಈ ಪಾನೀಯಗಳಲ್ಲಿ ಹೆಚ್ಚಿನ ಮಟ್ಟದ ಕೆಫೀನ್ ಮತ್ತು ಇತರ ಉತ್ತೇಜಕಗಳು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಹೃದ್ರೋಗ ಮತ್ತು ಹೃದಯದ ಬಡಿದ ಲಯಕ್ಕೆ ಅಪಾಯ ಹೆಚ್ಚಿಸುತ್ತದೆ.

ದೇಹದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?:

ಕೆಫೀನ್: ಅತಿಯಾಗಿ ಸೇವಿಸಿದರೆ ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡ ಉಂಟುಮಾಡುವ ಮುಖ್ಯ ಉತ್ತೇಜಕವಾಗಿದೆ.

ಟೌರಿನ್: ಎನರ್ಜಿ ಡ್ರಿಂಕ್ಸ್​ನಲ್ಲಿ ಟೌರಿನ್ ಇರುತ್ತದೆ. ಎನರ್ಜಿ ಡ್ರಿಂಕ್ಸ್​ ಪರಿಣಾಮಗಳನ್ನು ಹೆಚ್ಚಿಸಲು ಕೆಫೀನ್‌ನೊಂದಿಗೆ ಸಂಯೋಜಿಸುತ್ತದೆ. ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಗೌರಾನಾ: ಇದರಲ್ಲಿ ಗೌರಾನಾ ಮತ್ತು ಕೆಫೀನ್ ಒಳಗೊಂಡಿರುತ್ತದೆ.

ಜಿನ್ಸೆಂಗ್: ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಔಷಧಿಗಳೊಂದಿಗೆ ಅದರ ಪರಸ್ಪರ ಕ್ರಿಯೆಯು ಅಪಾಯಕಾರಿಯಾಗಿದೆ.

ಸಕ್ಕರೆ ಮಟ್ಟ ಹೆಚ್ಚುತ್ತೆ: ಇದನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು ಉಂಟಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ವಿಟಮಿನ್ ಬಿ: ವಿಟಮಿನ್ ಬಿ ಅತ್ಯಗತ್ಯ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ವಿಷ ಉಂಟುಮಾಡಬಹುದು. ವಿಶೇಷವಾಗಿ ಯಕೃತ್ತು, ಮೂತ್ರಪಿಂಡದ ಸಮಸ್ಯೆಗಳಿರುವ ಜನರಿಗೆ ಹೆಚ್ಚು ಪರಿಣಾಮ ಬೀರುತ್ತದೆ.

ಕೃತಕ ಸಿಹಿಕಾರಕಗಳು: ಸಕ್ಕರೆ ಬದಲಿಯಾಗಿ ಬಳಸುವ ಕೃತಕ ಸಿಹಿಕಾರಕಗಳು ಸಂಭಾವ್ಯ ಹೃದಯರಕ್ತನಾಳದ ಅಪಾಯ ಕಾಣಿಸುವ ಸಾಧ್ಯತೆಯಿದೆ.

ಶಕ್ತಿ ಹೆಚ್ಚಿಸುವ ಪಾನೀಯಗಳನ್ನು ಸುರಕ್ಷಿತವಾಗಿ ಬಳವುದು ಹೇಗೆ?

ಎನರ್ಜಿ ಡ್ರಿಂಕ್ಸ್​ ಪದಾರ್ಥಗಳ ಬಗ್ಗೆ ತಿಳಿಯಿರಿ: ಉತ್ತಮ ಆಯ್ಕೆಗಳನ್ನು ಮಾಡಲು ನಿಮ್ಮ ಪಾನೀಯಗಳು, ಎನರ್ಜಿ ಡ್ರಿಂಕ್‌ಗಳಲ್ಲಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಆರೋಗ್ಯಕರವಾಗಿ ಶಕ್ತಿ ಹೆಚ್ಚಿಸುವ ಪಾನೀಯ ಆಯ್ಕೆ: ಸಾಕಷ್ಟು ನಿದ್ರೆ, ಆರೋಗ್ಯಕರ ಆಹಾರ ಮತ್ತು ಹೈಡ್ರೈಟ್​ ಆಗಿರಲು ಪಾನೀಯಗಳ ಮೂಲಕ ನಿಮ್ಮ ಶಕ್ತಿಯ ಮಟ್ಟಕ್ಕೆ ಉತ್ತಮವಾಗಿದೆ.

ನಿಮ್ಮ ದೇಹವನ್ನು ಆಲಿಸಿ: ಎನರ್ಜಿ ಡ್ರಿಂಕ್ಸ್​ ನಿಮಗೆ ಪ್ರಕ್ಷುಬ್ಧ ಅಥವಾ ಆತಂಕವನ್ನು ಉಂಟುಮಾಡಿದರೆ, ಅವುಗಳನ್ನು ಬಳಸುವುದನ್ನು ನಿಲ್ಲಿಸುವುದು ಉತ್ತಮ.

ವೈದ್ಯರನ್ನು ಸಂಪರ್ಕಿಸಿ: ವಿಶೇಷವಾಗಿ ನಿಮಗೆ ಹೃದಯ ಸಮಸ್ಯೆಗಳು ಅಥವಾ ಅಧಿಕ ರಕ್ತದೊತ್ತಡ ಇದ್ದರೆ, ಎನರ್ಜಿ ಡ್ರಿಂಕ್ಸ್​ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಇಲ್ಲದಿದ್ದರೆ ಎನರ್ಜಿ ಡ್ರಿಂಕ್ಸ್​ ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟು ಮಾಡಬಹದು. ಆದರೆ, ಎನರ್ಜಿ ಡ್ರಿಂಕ್ಸ್​ನಿಂದ ವಿಶೇಷವಾಗಿ ನಿಮ್ಮ ಹೃದಯಕ್ಕೆ ಸಂಭಾವ್ಯ ಅಪಾಯಗಳನ್ನು ನಿರ್ಲಕ್ಷಿಸಬಾರದು.

ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಆರೋಗ್ಯಕರ ಪಾನೀಯಗಳನ್ನು ಆಯ್ಕೆಗಳನ್ನು ಆರಿಸುವುದರಿಂದ ನಿಮ್ಮ ಹೃದಯದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಅಲ್ಪಾವಧಿಯ ಶಕ್ತಿಯನ್ನು ಪಡೆಯುವ ಬದಲು ದೀರ್ಘಾವಧಿಯ ಆರೋಗ್ಯ ಕಾಯ್ದುಕೊಳ್ಳಲು ಆದ್ಯತೆ ನೀಡಿ.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು:

https://health.ucdavis.edu/blog/good-food/how-do-energy-drinks-affect-your-heart-and-overall-health/2024/05

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.