ನವದೆಹಲಿ: ವ್ಯಕ್ತಿಯೊಬ್ಬನ ಆರೋಗ್ಯದ ಮಾಹಿತಿಗಳು ಖಾಸಗಿತನದ ಹಕ್ಕಾಗಿದೆ. ಇಂತಹ ಗೌಪ್ಯ ಮಾಹಿತಿಗಳು ಇದೀಗ ಸೈಬರ್ ದಾಳಿಕೋರರ ಅಪಾಯವನ್ನು ಎದುರಿಸುವಂತೆ ಆಗಿದೆ. ಕಳೆದ ಆರು ತಿಂಗಳಿನಿಂದ ವಾರಕ್ಕೆ ಸರಾಸರಿ 6,935 ದಾಳಿಗಳನ್ನು ಆರೋಗ್ಯವಲಯ ಎದುರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಈ ದಾಳಿಗಳು ವಾರಕ್ಕೆ 1,821ರಷ್ಟು ಆಗುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸೈಬರ್ ಭದ್ರತೆ ಒದಗಿಸುವ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರಕಾರ, ಆರೋಗ್ಯವಲಯದ ಮೇಲೆ ಈ ದಾಳಿ ಹೆಚ್ಚಲು ಕಾರಣ ಎಲೆಕ್ಟ್ರಾನಿಕ್ ಆರೋಗ್ಯ ದಾಖಲಾತಿ (ಇಎಚ್‌ಆರ್‌ಗಳು), ಟೆಲಿಮೆಡಿಸಿನ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ)ನಂತಹ ತಂತ್ರಜ್ಞಾನಗಳ ವೇಗದ ಅಳವಡಿಕೆಯೇ ಇಷ್ಟಕ್ಕೆಲ್ಲ ಕಾರಣವಾಗಿದೆ.
ವಂಚಿಸುವ ಸರಳ ವಿಧಾನ ಎಂದರೆ ಇಮೇಲ್ ವಿಳಾಸ ಆಗಿದೆ. ಇಮೇಲ್ ಮೂಲಕ ಮಾಲ್‌ವೇರ್ ಹರಡಿ ಅಲ್ಲಿನ ಮಾಹಿತಿಗಳನ್ನು ಕದಿಯಲಾಗುತ್ತಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ಸುಂದರ್ ಬಾಲಸುಬ್ರಮಣಿಯನ್ ತಿಳಿಸಿದ್ದಾರೆ. ಇಮೇಲ್ಗಳಲ್ಲಿ ಅನಗತ್ಯವಾಗಿ ಬಂಧಿರುವ ಅಟ್ಯಾಚ್ಮೆಂಟ್ಗಳನ್ನು ತಗೆಯುವುದನ್ನು ತಪ್ಪಿಸಬೇಕು. ಹಾಗೇ ಸ್ಟ್ರಾಂಗ್ ಪಾಸ್ವರ್ಡ್ ಬಳಕೆ ಮತ್ತು ಬಹು ಹಂತದ ದೃಢೀಕರಣವನ್ನು ಮಾಡುವ ಮೂಲಕ ಅನುಮಾನಾಸ್ಪದ ಇಮೇಲ್ ಅನ್ನು ತೆಗೆಯುವ ಮುನ್ನ ಎಚ್ಚರಿಕೆವಹಿಸಬೇಕು ಎಂದು ತಿಳಿಸಿದ್ದಾರೆ.
ಆರೋಗ್ಯ ವಲಯದ ಹೊರತಾಗಿ ಮತ್ತಷ್ಟು ದಾಳಿಗೆ ಒಳಗಾಗುವ ವಲಯ ಎಂದರೆ ಅದು ಶಿಕ್ಷಣ, ಸಂಶೋಧನೆ (6,244 ದಾಳಿ, ಸಮಾಲೋಚನೆ (3,989 ದಾಳಿ) ಮತ್ತು ಸರ್ಕಾರ, ಸೇನೆ (3,618 ದಾಳಿ ಎಂದು ವರದಿ ತಿಳಿಸಿದೆ.
ಭಾರತದ ಸಂಘಟನೆಗಳು ಸರಾಸರಿ ಕಳೆದ ಆರು ತಿಂಗಳಿನಿಂದ ವಾರಕ್ಕೆ 2,924 ಬಾರಿ ದಾಳಿಗೆ ತುತ್ತಾಗುತ್ತಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮಾಲ್‌ವೇರ್ ಎಂದರೆ 'ಫೇಕ್‌ಅಪ್‌ಡೇಟ್‌ಗಳು', ಜೊತೆಗೆ ಇತರ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳಾದ 'ಬೋಟ್‌ನೆಟ್‌ಗಳು' ಮತ್ತು 'ರೆಮ್‌ಕೋಸ್' ಹೆಸರಿನ ರಿಮೋಟ್ ಆಕ್ಸೆಸ್ ಟ್ರೋಜನ್ ಆಗಿದೆ.
ಮಾಹಿತಿ ಬಹಿರಂಗಪಡಿಸುವಿಕೆಯು ಭಾರತದಲ್ಲಿ ಶೇ 72 ಸಂಸ್ಥೆಗಳಿಂ ಒಳಗಾಗುತ್ತಿರುವ ದುರ್ಬಳಕೆಯಾಗಿದೆ. ಬಳಿಕದ್ದು ರಿಮೋಟ್ ಕೋಡ್ ಎಕ್ಸಿಕ್ಯೂಶನ್ ಇದು ಶೇ 62ರಷ್ಟು ಪರಿಣಾಮ ಬೀರುತ್ತದೆ. ಅಥೆಂಟಿಕೇಷನ್ (ದೃಢೀಕರಣ) ಬೈಪಾಸ್ಗಳು ಶೇ 52ರಷ್ಟು ಪರಿಣಾಮ ಬೀರುತ್ತದೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.
ಕಳೆದ 30 ದಿನದಲ್ಲಿ ಭಾರತದಲ್ಲಿ ಶೇ 63ರಷ್ಟು ದುರುದ್ಧೇಶ ಹೊಂದಿರುವ ಫೈಲ್ಗಳನ್ನು ಇಮೇಲ್ ಮೂಲಕ ಕಳುಹಿಸಲಾಗಿದೆ. ಇನ್ನು ವೆಬ್ ಮೂಲಕ ಶೇ 37ರಷ್ಟು ಕಳುಹಿಸಲಾಗಿದೆ. ಇಮೇಲ್ ಮೂಲಕ ದುರುದ್ದೇಶ ಪೂರಿತ ಫೈಲ್ಗಳನ್ನು ಶೇ 58ರಷ್ಟು ಕಾರ್ಯಗತ ಮಾಡಬಹುದಾಗಿದ್ದು, ವೆಬ್ ಮೂಲಕ ಶೇ 59ರಷ್ಟು ಫೈಲ್ಗಳನ್ನು ಪಿಡಿಎಫ್ ಮೂಲಕ ಕಳುಹಿಸಲಾಗುತ್ತದೆ.
ಇದಕ್ಕೆ ಇರುವ ಮುನ್ನೆಚ್ಚರಿಕೆ ಎಂದರೆ ನಿಯಮಿತ ಸಾಫ್ಟ್‌ವೇರ್ ಅಪ್ಡೇಟ್, ಉದ್ಯೋಗಿಗಳಿಗೆ ಈ ಕುರಿತು ತರಬೇತಿ ಮತ್ತು ಸುಧಾರಿತ ಭದ್ರತಾ ಪರಿಹಾರಗಳ ಬಳಕೆ ಮಾಡುವುದಾಗಿದೆ ಎಂದು ವರದಿಯಲ್ಲಿ ಸಲಹೆ ಕೂಡಾ ನೀಡಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಈ 5 ವಿಷಯಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ: ವೈದ್ಯರೂ ಹೇಳದ ಆ ಆರೋಗ್ಯ ರಹಸ್ಯಗಳೇನು ಗೊತ್ತಾ?