Rusk Halwa Recipe in Kannada: ಊಟದ ನಂತರ ಏನಾದರೂ ಸಿಹಿ ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ, ಎಷ್ಟೇ ಬಗೆಯ ಸಿಹಿತಿಂಡಿಗಳಿದ್ದರೂ ಹಲ್ವಾಗೆ ಮಾತ್ರ ವಿಶೇಷ ಸ್ಥಾನವಿದೆ. ಬಾಯಲ್ಲಿ ನೀರೂರಿಸುವ ಈ ಸಿಹಿ ರೆಸಿಪಿಯನ್ನು ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಡುತ್ತಾರೆ. ನೀವು ಈಗಾಗಲೇ ಹಲ್ವಾದಲ್ಲಿ ಹಲವು ವೆರೈಟಿಗಳನ್ನು ಟ್ರೈ ಮಾಡಿರಬೇಕು. ಆದರೆ, ಒಮ್ಮಿಯಾದರೂ "ರಸ್ಕ್ ಹಲ್ವಾ" ರುಚಿ ನೋಡಿದ್ದೀರಾ? ಬಹುತೇಕ ರಸ್ಕ್ ಹಲ್ವಾ ಬಗ್ಗೆ ತಿಳಿದಿರುವುದೇ ಇಲ್ಲ. ಆದರೆ, ರುಚಿಯೇ ಬೇರೆ ಇರುತ್ತದೆ.
ಈ ಹಲ್ವಾದಲ್ಲಿ ಎಣ್ಣೆ, ತುಪ್ಪ ಜಾಸ್ತಿ ಹಾಕುವ ಅಗತ್ಯವಿಲ್ಲ. ಈ ಸಿಹಿಯನ್ನು ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ರುಚಿ ಕೂಡ ಅದ್ಭುತವಾಗಿರುತ್ತದೆ. ಇದಲ್ಲದೇ, ಈ ಹಲ್ವಾ ಮಾಡುವುದು ತುಂಬಾ ಸುಲಭ! ಹಾಗಾದರೆ, ಈ ಸೂಪರ್ ಟೇಸ್ಟಿಯಾದ ರಸ್ಕ್ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು ಯಾವುವು? ಈಗ ಅದನ್ನು ಹೇಗೆ ಸಿದ್ಧಪಡಿಸಬೇಕೆಂದು ತಿಳಿಯೋಣ.
ಹಲ್ವಾ ಸಿದ್ಧಪಡಿಸಲು ಬೇಕಾದ ಪದಾರ್ಥಗಳೇನು?:
- ಒಂದು ಕಪ್ ರಸ್ಕ್ (10 ರಸ್ಕ್)
- 2 ಟೇಬಲ್ಸ್ಪೂನ್ ಒಣದ್ರಾಕ್ಷಿ
- ಒಂದು ಹಿಡಿ ಗೋಡಂಬಿ
- 3 ಚಮಚ ತುಪ್ಪ
- ಒಂದು ಕಪ್ ಸಕ್ಕರೆ
- 2 ಸಿಪ್ಪೆ ತೆಗೆದಿಟ್ಟ ಏಲಕ್ಕಿ
- ಒಂದು ಚಿಟಿಕೆ ಕೇಸರಿ
ತಯಾರಿಸುವ ವಿಧಾನ?:
- ಮೊದಲು ರಸ್ಕ್ ತೆಗೆದುಕೊಂಡು ತುಂಡುಗಳಾಗಿ ಕತ್ತರಿಸಿ. ಸಾಧ್ಯವಾಗದಿದ್ದರೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬಹುದು. (ಇದು ನಯವಾಗಿರಬೇಕು ಮತ್ತು ತುಂಬಾ ಮೃದುವಾಗಿರಬಾರದು.)
- ಈಗ ಒಲೆ ಆನ್ ಮಾಡಿ ಪಾತ್ರೆಯೊಂದರಲ್ಲಿ ತುಪ್ಪ ಹಾಕಿ ಬಿಸಿ ಮಾಡಿ.
- ನಂತರ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಒಂದರ ನಂತರ ಒಂದರಂತೆ ಹಾಕಿ ಹುರಿದು ಪಕ್ಕಕ್ಕೆ ಇಡಿ.
- ಆ ನಂತರ ಇನ್ನೂ ಸ್ವಲ್ಪ ತುಪ್ಪ ಹಾಕಿ ರಸ್ಕ್ ಪೌಡರ್ ಹಾಕಿ ಕಡು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಪಕ್ಕಕ್ಕೆ ಇಡಿ. (ಕಡಿಮೆ ಉರಿಯಲ್ಲಿ ಹುರಿಯಿರಿ)
- ಈಗ ಅದೇ ಪಾತ್ರೆಯಲ್ಲಿ ಸಕ್ಕರೆ ಮತ್ತು ಒಂದೂವರೆ ಕಪ್ ನೀರು ಹಾಕಿ ಕುದಿಸಿ.
- ಅದಕ್ಕೆ ಸಿಪ್ಪೆ ತೆಗೆದಿಟ್ಟ ಏಲಕ್ಕಿ ಮತ್ತು ಒಂದು ಚಿಟಿಕೆ ಕೇಸರಿ ಹಾಕಿ ಕುದಿಸಿ. (ಕೇಸರಿ ಸೇರಿಸುವುದರಿಂದ ಪರಿಮಳದ ಜೊತೆಗೆ ಬಣ್ಣ ಬರುತ್ತದೆ)
- ಕುದಿದ ನಂತರ, ಪುಡಿ ಮಾಡಿದ ರಸ್ಕ್ ಮಿಶ್ರಣವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
- ಹುರಿದ ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ ಮಿಕ್ಸ್ ಮಾಡಿದರೆ ಸಾಕು ರುಚಿಕರವಾದ ರಸ್ಕ್ ಹಲ್ವಾ!