ETV Bharat / health

ಇಂಜೆಕ್ಷನ್ ಕೊಟ್ಟ ಕಲ್ಲಂಗಡಿ ಹಣ್ಣು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ.. - Identify Injected Watermelon

ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಎನ್ನುವುದು ಎಲ್ಲೆಡೆ ಅಧಿಕವಾಗಿದೆ. ಕೆಲವರು ಕಲ್ಲಂಗಡಿ ಹಣ್ಣನ್ನು ಬೇಗ ಕೆಂಪಾಗಿಸಲು ಚುಚ್ಚುಮದ್ದು ಕೊಡುತ್ತಾರೆ ಎಂಬ ಆರೋಪವಿದೆ. ಇಂಜೆಕ್ಷನ್ ಕೊಟ್ಟ ಕಲ್ಲಂಗಡಿಯನ್ನು ಹೇಗೆ ಗುರುತಿಸುವುದು? ಇಲ್ಲಿದೆ ಮಾಹಿತಿ.

Etv Bharat
Etv Bharat
author img

By ETV Bharat Karnataka Team

Published : Apr 17, 2024, 6:13 PM IST

Updated : Apr 18, 2024, 4:19 PM IST

ಬೇಸಿಗೆಯಲ್ಲಿ ಬಿಸಿಲು, ಧಗೆ, ಸೆಕೆಯು ಜನರಲ್ಲಿ ಎಲ್ಲಿಲ್ಲದ ನಿತ್ರಾಣವನ್ನುಂಟು ಮಾಡುತ್ತದೆ. ಆದ್ದರಿಂದ ಹೆಚ್ಚಿನ ರಸಭರಿತ ಮತ್ತು ರುಚಿಕರ ಹಣ್ಣುಗಳ ಮೊರೆ ಹೋಗುತ್ತಾರೆ. ಅದರಲ್ಲೂ, ಬಹುಪಾಲು ಜನರು ಮೊದಲು ಹುಡುಕುವ ಹಣ್ಣೆಂದರೆ, ಕಲ್ಲಂಗಡಿ. ಮನೆಯಿಂದ ಬಿಸಿಲಿಗೆ ಹೊರ ಬಂದವರು ಕಲ್ಲಂಗಡಿ ಹಣ್ಣನ್ನು ಖಂಡಿತವಾಗಿ ತಿನ್ನುತ್ತಾರೆ. ಆದರೆ, ಮಾರುಕಟ್ಟೆಯಲ್ಲಿರುವ ಕೆಲವರು ದುರಾಸೆಗೆ ಒಳಗಾಗಿ ಕಲ್ಲಂಗಡಿ ಹಣ್ಣುಗಳು ಬೇಗ ಹಣ್ಣಾಗುವಂತೆ ಮಾಡಲು ಚುಚ್ಚುಮದ್ದು ನೀಡುತ್ತಾರೆ. ಹೀಗೆ ಇಂಜೆಕ್ಷನ್​ ನೀಡಿದ ಕಲ್ಲಂಗಡಿ ತಿನ್ನುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ತಜ್ಞರು.

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ದೇಹವು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬಹುದು. ಆದರೆ, ದುರಾಸೆಯಿಂದ ಇಂಜೆಕ್ಷನ್​ ಕೊಟ್ಟು ಕಲ್ಲಂಗಡಿಯನ್ನು ಕೆಂಪಗಾಗಿಸುತ್ತಾರೆ. ಇಂತಹ ಹಣ್ಣು ಸೇವನೆಯಿಂದ ಆರೋಗ್ಯದ ಮೇಲೆ ಸಮಸ್ಯೆ ಬೀರುವುದು ಖಂಡಿತ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಲ್ಲಂಗಡಿ ಖರೀದಿಸುವಾಗ ಹಣ್ಣು ಶುದ್ಧವಾಗಿದೆಯಾ ಎಂದು ಗುರುತಿಸಲು ಏನು ಮಾಡಬೇಕು?

  • ಕಲ್ಲಂಗಡಿ ಸ್ವಲ್ಪ ಬಿಳಿಯಾಗಿ, ಅಲ್ಲಲ್ಲಿ ಹಳದಿ ಚುಕ್ಕೆಗಳಿದ್ದರೆ, ಅದಕ್ಕೆ ಇಂಜೆಕ್ಷನ್​ ಮಾಡಿರುವ ಸಾಧ್ಯತೆ ಇರುತ್ತದೆ.
  • ಕಲ್ಲಂಗಡಿ ತ್ವರಿತವಾಗಿ ಹಣ್ಣಾಗಲು ಕಾರ್ಬೈಡ್ ಎಂಬ ರಾಸಾಯನಿಕ ಸಿಂಪಡಿಸಲಾಗುತ್ತದೆ. ಕಲ್ಲಂಗಡಿ ಮೇಲೆ ಹಳದಿ ಬಣ್ಣದಲ್ಲಿದ್ದರೆ, ಅದನ್ನು ಉಪ್ಪು ನೀರಿನಿಂದ ಚೆನ್ನಾಗಿ ತೊಳೆದು ತಿನ್ನಲು ಸೂಚಿಸಲಾಗುತ್ತದೆ.
  • ನೀವು ಖರೀದಿಸುವ ಕಲ್ಲಂಗಡಿ ಸಾಮಾನ್ಯಕ್ಕಿಂತ ಹೆಚ್ಚು ಕೆಂಪಾಗಿದ್ದರೂ, ಅದಕ್ಕೆ ಇಂಜೆಕ್ಷನ್​ ಮಾಡಲಾಗಿದೆ ಎಂದು ಗುರುತಿಸಬಹುದು.
  • ಅಲ್ಲದೇ, ಈ ಚುಚ್ಚುಮದ್ದಿನ ಕಲ್ಲಂಗಡಿ ತಿಂದರೆ, ನಾಲಿಗೆ ತುಂಬಾ ಕೆಂಪಾಗುತ್ತದೆ ಎನ್ನುತ್ತಾರೆ ತಜ್ಞರು.
  • ಕಲ್ಲಂಗಡಿ ಖರೀದಿಸಿದಾಗ, ಹಣ್ಣನ್ನು ಚೆನ್ನಾಗಿ ನೋಡಿ. ಅವುಗಳ ಮೇಲೆ ಎಲ್ಲಿಯಾದರೂ ರಂಧ್ರಗಳಿದ್ದರೆ ಅವುಗಳನ್ನು ಖರೀದಿಸಬೇಡಿ. ರಂಧ್ರವಿರುವ ಕಲ್ಲಂಗಡಿಗಳಿಗೆ ಇಂಜೆಕ್ಷನ್​ ಮಾಡಿರಬಹುದು.
  • ಇಂಜೆಕ್ಷನ್​ ಮಾಡಿದ ಕಲ್ಲಂಗಡಿ ಕತ್ತರಿಸಿದಾಗ, ಹಣ್ಣಿನಲ್ಲಿ ಹೆಚ್ಚು ಬಿರುಕುಗಳು ಉಂಟಾಗುತ್ತವೆ.

ಕಲ್ಲಂಗಡಿಯ ಪ್ರಯೋಜನಗಳು:

  • ಕಲ್ಲಂಗಡಿ ಹಣ್ಣಿನ ತಿರುಳು ಕೆಂಪಾಗಲು ಬೀಟಾ ಕ್ಯಾರೋಟಿನ್ ಕಾರಣ. ಇದು ಚರ್ಮ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಿಂದ ದೃಷ್ಟಿಯೂ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.
  • ಕಲ್ಲಂಗಡಿ ಹಣ್ಣಿನ ತಿರುಳು ಮತ್ತು ಸಿಪ್ಪೆಯು ಸಿಟ್ರುಲಿನ್ ಎಂಬ ಅಮೈನೋ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ದೇಹದ ಎಲ್ಲ ಅಂಗಗಳಿಗೆ ಸರಿಯಾದ ರಕ್ತ ಪರಿಚಲನೆಯನ್ನು ಖಚಿತಪಡಿಸುತ್ತದೆ.
  • ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳನ್ನೂ ತಡೆಯುತ್ತದೆ.
  • ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಹೀಗಾಗಿ ಬೇಸಿಗೆಯಲ್ಲಿ ಪ್ರತಿನಿತ್ಯ ಇವುಗಳನ್ನು ತಿನ್ನುವುದರಿಂದ ದೇಹವು ಬೆವರಿನ ಮೂಲಕ ಕಳೆದುಹೋದ ನೀರನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸೂಚನೆ: ನಿಮಗೆ ಇಲ್ಲಿ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ಚೌಕಾಕಾರದ ಕಲ್ಲಂಗಡಿ: ಸರಸ್ವತಿ ತಳಿಯ ಈ ಹಣ್ಣಿನ ಬಗ್ಗೆ ತಿಳಿಯಿರಿ

Last Updated : Apr 18, 2024, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.