ETV Bharat / health

ಕೊಬ್ಬು ಒಳ್ಳೆಯದೇ; ಉತ್ತಮ ಕೊಲೆಸ್ಟ್ರಾಲ್​ ಪಡೆಯಲು ಇಲ್ಲಿವೆ ಸಲಹೆ - GAIN GOOD FAT

ಉತ್ತಮ ಕೊಬ್ಬು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು, ರೋಗ ತಡೆಗಟ್ಟಲು ಸಹಾಯ ಮಾಡುತ್ತದೆ.

healthy-good-cholesterol-for-health-and-how-to-increase-hdl
ಸಾಂದರ್ಭಿಕ ಚಿತ್ರ (FILE PHOTO)
author img

By ETV Bharat Karnataka Team

Published : Jul 24, 2024, 5:41 PM IST

ಹೈದರಾಬಾದ್​: ಸಾಮಾನ್ಯವಾಗಿ ಕೊಬ್ಬು ಎಂದಾಕ್ಷಣ ಜನರು ಆತಂಕ ಪಡುತ್ತಾರೆ. ಆದರೆ ಉತ್ತಮ ಕೊಬ್ಬು (ಹೆಚ್​ಡಿಎಲ್​) ದೇಹಕ್ಕೆ ಅಗತ್ಯವಾಗಿದೆ. ಈ ಕೊಬ್ಬು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು, ರೋಗ ತಡೆಗಟ್ಟಲು ಸಹಾಯ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ದೇಹದೊಳಗಿನ ಕಲ್ಮಶವನ್ನು ತೆಗೆದುಹಾಕಲು, ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆ ದೇಹಕ್ಕೆ ಹೆಚ್​ಡಿಎಲ್​ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಿಸುವುದು ಅಗತ್ಯವಾಗಿದೆ. ಆದಾಗ್ಯೂ ಇಂತಹ ಕೊಬ್ಬು ಹೆಚ್ಚಳಕ್ಕೆ ಮಾತ್ರೆಗಳಿದ್ದರೂ, ಅವು ಹೃದಯದ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ, ಉತ್ತಮ ಜೀವನಶೈಲಿಯ ಅಭ್ಯಾಸ ನಡೆಸುವ ಜೊತೆಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಉತ್ತಮ ಕೊಬ್ಬನ್ನು ಹೆಚ್ಚಿಸಬಹುದು. ಇದರಿಂದ ಹೃದಯದ ಅಪಾಯವನ್ನು ಕಡಿಮೆ ಮಾಡಬಹುದು.

ಉತ್ತಮ ಕೊಬ್ಬಿಗೆ ಈ ಕ್ರಮ ಅನುಸರಿಸಿ:

  • ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ. ನೀರಿನಾಂಶದ ಫೈಬರ್​ ಹೊಂದಿರುವ ಸೇಬು, ಕಿತ್ತಳೆ, ಬಟಾಣಿ, ಕ್ಯಾರೆಟ್​ ಮತ್ತು ಓಟ್ಸ್​ ಸೇವಿಸಬಹುದು. ಜೊತೆಗೆ ಧಾನ್ಯಗಳು, ಅಕ್ಕಿ ಮತ್ತು ಮೀನು ಸೇವಿಸಿ. ಹಾಗೇ ಮಾಂಸ, ಉಪ್ಪು ಮತ್ತು ಕರಿದ ಅಂಶವನ್ನು ಕಡಿಮೆ ಮಾಡಿ.
  • ಉತ್ತಮ ಕೊಲೆಸ್ಟ್ರಾಲ್​ ಹೆಚ್ಚಳಕ್ಕೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗೆ ಸಹಾಯವಾಗಲಿದೆ. ನಡಿಗೆ, ರನ್ನಿಂಗ್​, ಸೈಕಲಿಂಗ್​, ಈಜು, ತೂಕ ಎತ್ತುವುದು, ಗಾರ್ಡನಿಂಗ್​ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು.
  • ಭಾರೀ ತೂಕ ಹೊಂದಿದ್ದರೆ, ಇದನ್ನು ತಗ್ಗಿಸುವುದು ಅವಶ್ಯ. ದೇಹದ ತೂಕದಲ್ಲಿ ಕೇವಲ ಶೇ.5ರಿಂದ 10ರಷ್ಟು ನಷ್ಟವು ಹೆಚ್​ಡಿಎಲ್​ ಮಟ್ಟವನ್ನು ಹೆಚ್ಚಿಸುತ್ತದೆ. ಇದೇ ವೇಳೆ ಇದರಿಂದ ಕೆಟ್ಟ ಕೊಬ್ಬು ಸಹ ಕಡಿಮೆಯಾಗುತ್ತದೆ.
  • ಧೂಮಪಾನ ತ್ಯಜಿಸುವ ಮೂಲಕವೂ ಮೂರು ವಾರಗಳಲ್ಲಿ ಉತ್ತಮ ಕೊಬ್ಬು ಹೆಚ್ಚಿಸಿಕೊಳ್ಳಬಹುದು ಎಂದು ಅಧ್ಯಯನಗಳು ತೋರಿಸಿವೆ.

ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸಬೇಕೆ ಅಥವಾ ಬೇಡವೇ ಎಂಬುದು ನಿಮ್ಮ ವೈಯಕ್ತಿಕ ವಿಚಾರ.

ಇದನ್ನೂ ಓದಿ: ಬೆಳ್ಳಗಾಗುವ ಬಯಕೆಯಿಂದ ತ್ವಚೆಗೆ ಬಿಳಿ ಕ್ರೀಂ ಹಚ್ಚುವ ಮುನ್ನ ಯೋಚಿಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.