ETV Bharat / health

ಆತ್ಮ ವಿಶ್ವಾಸ ವೃದ್ಧಿಸಲು, ಮೆದುಳು ಚುರುಕಾಗಿಸಲು ಈ ಆಹಾರ ಸೇವಿಸಿ - ಆತ್ಮ ವಿಶ್ವಾಸ ವೃದ್ಧಿ

ಮೆದುಳು ಆರೋಗ್ಯವಾಗಿದ್ದಾಗ ಮಾತ್ರವೇ ನಿಮ್ಮ ಮೂಡ್​ ಮತ್ತು ಆತ್ಮ ವಿಶ್ವಾಸ ಹೆಚ್ಚುವುದು ಸಾಧ್ಯ ಎಂಬುದನ್ನು ಮರೆಯದಿರಿ.

give-this-food-to-the-brain-to-increase-self-confidence

author img

By ETV Bharat Karnataka Team

Published : Feb 6, 2024, 1:43 PM IST

ಹೈದರಾಬಾದ್​: ಆತ್ಮ ವಿಶ್ವಾಸದೊಂದಿಗೆ ನಾವು ಮಾಡುವ ಕೆಲಸಗಳ ಮೇಲೆ ನಮ್ಮ ವ್ಯಕ್ತಿತ್ವದ ನಿರ್ಧಾರವಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು, ಬೇರೆಯವರಿಗೆ ಸಹಾಯ ಮಾಡುವಂತಹ ಆತ್ಮತೃಪ್ತಿಯ ಕೆಲಸಗಳೂ ಇದರಲ್ಲಿ ಸೇರಿವೆ. ಆದರೆ, ಇದರಲ್ಲಿ ಆಹಾರವು ಪ್ರಮುಖ ಪಾತ್ರವಹಿಸುತ್ತದೆ ಅನ್ನೋದನ್ನು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ನಾವು ಸೇವಿಸುವ ಆಹಾರಗಳು ಮೆದುಳಿಗೆ ಸಾಕಷ್ಟು ಪೋಷಕಾಂಶವನ್ನು ನೀಡಿ, ಅದು ಆತ್ಮ ವಿಶ್ವಾಸದ ಭಾವವನ್ನು ಹೆಚ್ಚಿಸುತ್ತದೆ. ಇದು ಭಾವನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ ಸಂಶೋಧಕರು.

ಸ್ಪೇನ್​ನ ಯುರೋಪಾ ಡಿ ವೇಲೆನ್ಸಿಯಾ ಸಂಶೋಧಕರು ಈ ಕುರಿತು ನಡೆಸಿದ ಅಧ್ಯಯನದಲ್ಲಿ, ವಿಟಮಿನ್​ ಡಿ ಇದಕ್ಕೆ ಹೆಚ್ಚುವರಿ ಸಹಾಯ ಮಾಡುತ್ತದೆ ಎಂದು ಕಂಡು ಬರುತ್ತದೆ. ಹಣ್ಣುಗಳಿಂದ ಸಮೃದ್ಧವಾಗಿರುವ ಮೆಡಿಟೇರಿಯನ್​ ಡಯಟ್​, ತರಕಾರಿ, ನಟ್ಸ್​ ಮತ್ತು ಆಲಿವ್​ ಎಣ್ಣೆ ಕೂಡ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಪೋಲಾಂಡ್​ ಸಂಶೋಧಕರು ವಿಶ್ಲೇಷಿಸಿರುವಂತೆ, ಮಾನಸಿಕ ಆರೋಗ್ಯವನ್ನು ರಕ್ಷಿಸಲು ಕೆಲವು ವಸ್ತುಗಳನ್ನು ಸಾಧನವಾಗಿ ಬಳಕೆ ಮಾಡಬಹುದು. ಅವುಗಳಲ್ಲಿ ಪ್ರಮುಖವಾಗಿ ಹಾಲು ಮತ್ತು ಚೀಸ್​ನಲ್ಲಿ ಕಂಡು ಬರುವ ಲ್ಯಾಕ್ಟೋಬೆಸಿಲಸ್​ ಹೆಲ್ವೆಟಿಕಸ್​, ಬ್ರೆಡ್​ ಮತ್ತು ಮಜ್ಜಿಗೆಯಲ್ಲಿರುವ ಬಿಫಿಡೊಬ್ಯಾಕ್ಟೀರಿಯಂ ಲಾಂಗಮ್​ ಒತ್ತಡವನ್ನು ಕಡಿಮೆ ಮಾಡಿ, ಮನಸ್ಥಿತಿ ವೃದ್ಧಿಸುತ್ತದೆ ಎಂದು ತಿಳಿಸಿದ್ದಾರೆ. ಚಿಕ್ಕದಾಗಿ ಹೇಳಬೇಕು ಎಂದರೆ ಒಳ್ಳೆಯ ಆಹಾರಗಳನ್ನು ಸೇವಿಸಿದರೆ, ಒಳ್ಳೆಯ ಮೂಡ್​ ಅನ್ನು ಅನುಭವಿಸಲು ಸಾಧ್ಯ.

ಡೊಪಮೈನ್​, ಆಕ್ಸಿಟೊಸಿನ್​, ಸೆರೊಟೊನಿನ್​ ಮತ್ತು ಎಂಡ್ರೊಫಿನ್ಸ್​​ ಹಾರ್ಮೋನ್​ಗಳು ನಮ್ಮ ಮೆದುಳಿನಲ್ಲಿ ಉತ್ತಮ ಭಾವನೆಗಳನ್ನು ಹೆಚ್ಚಿಸುತ್ತವೆ. ಒಮೆಗಾ-3 ಫ್ಯಾಟಿ ಆಮ್ಲ, ಮೆಗ್ನಿಷಿಯಂ, ವಿಟಮಿನ್​ ಸಿ, ಥೈಮಿನ್ (ಬಿ1), ಪೊಲಟೆ (ವಿಟಮಿನ್​ ಬಿ6) ಮತ್ತು ಸೆಲೆನಿಯಂಗಳು ಈ ಹಾರ್ಮೋನ್​ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಸಂಶೋಧಕರು ಪತ್ತೆ ಮಾಡಿದಂತೆ ಶೇ 90ರಷ್ಟು ಸೆರೊಟೊನಿನ್​ ಮತ್ತು ಶೇ 50ರಷ್ಟು ಡೊಪಮೈನ್​ ಉತ್ಪಾದನೆಗಳು ನಮ್ಮ ದೇಹಕ್ಕೆ ಉತ್ತಮ. ಅದರ ಹೊರತಾಗಿ ಈ ಆಹಾರಗಳಿಗೆ ಹೆಚ್ಚಿನ ಗಮನ ನೀಡುವುದು ಪ್ರಮುಖವಾಗಿದೆ.

ಹಣ್ಣು ಮತ್ತು ತರಕಾರಿ: ಪ್ರತಿನಿತ್ಯ ಸಾಕಷ್ಟು ಹಣ್ಣು ಮತ್ತು ತರಕಾರಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಅಧ್ಯಯನ ಹೇಳುವಂತೆ ಇದು ಜೀವನದಲ್ಲಿ ತೃಪ್ತಿ ಮತ್ತು ತಾತ್ಕಾಲಿಕ ಸಂತೋಷವನ್ನು ಮೂಡಿಸುತ್ತದೆ. ವಾರದಲ್ಲಿ 6-7 ದಿನ ತರಕಾರಿ ಮತ್ತು ಹಣ್ಣನ್ನು ಸೇವಿಸುವುದರಿಂದ ಸಂತೋಷ ಮತ್ತು ಆತ್ಮತೃಪ್ತಿ ಹೆಚ್ಚುತ್ತದೆ.

ಅಮೆರಿಕನ್​ ಹಾರ್ಟ್​ ಅಸೋಸಿಯೇಷನ್​ ಹೇಳುವಂತೆ, ಹಣ್ಣು ಮತ್ತು ತರಕಾರಿಗಳು ದೇಹದ ಉರಿಯೂತ ಮತ್ತು ಖಿನ್ನತೆ ಲಕ್ಷಣ ವಿರುದ್ಧ ಹೋರಾಡುತ್ತದೆ. ಅದಕ್ಕಾಗಿ ಬಣ್ಣ ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ವಿಟಮಿನ್​ ಬಿ 6 ಹಸಿರುವ ಎಲೆ ತರಕಾರಿ ಮತ್ತು ಸಿಟ್ರನ್​ ಹಣ್ಣಿನಲ್ಲಿರುತ್ತದೆ. ಇದು ಸೆರೊಟೊನಿನ್​ ಉತ್ಪಾದನೆ ಹೆಚ್ಚಿಸುತ್ತದೆ. ಆಕ್ಸಿಟೊಸಿನ್​ ಉತ್ಪಾದನೆ ಮಾಡುವಲ್ಲಿ ವಿಟಮಿನ್​ ಸಿ ಪೋಶಕಾಂಶ ಹೊಂದಿರುವ ಕಿತ್ತಳೆ, ಬಟಾಣಿ, ನಿಂಬೆ ಮತ್ತು ಕಿವಿ ಪ್ರಮುಖ ಪಾತ್ರವಹಿಸುತ್ತದೆ. ಈ ಆಕ್ಸಿಟೋಸಿನ್​ ಹಾರ್ಮೋನ್​ ಪ್ರೀತಿ ಮತ್ತು ಅನುಭೂತಿಯ ಹಾರ್ಮೋನ್​ ಆಗಿದೆ.

ಒಮೆಗಾ 3 ಫ್ಯಾಟ್​: ಒಮೆಗಾ - 3 ಪ್ಯಾಟಿ ಆ್ಯಸಿಡ್​ ಕೂಡ ನರ ವ್ಯವಸ್ಥೆಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಮೂಡಿಸುತ್ತದೆ. ಮೀನು, ಒಣಹಣ್ಣು ಮತ್ತು ಬೀಜಗಳನ್ನು ಈ ಒಮೆಗಾ 3 ಆಮ್ಲ ಇರುತ್ತದೆ. ಇದು ದೇಹದ ಉರಿಯೂತವನ್ನು ಹೆಚ್ಚಿಸಿ, ಮೂಡ್​ ಅನ್ನು ಸುಧಾರಣೆ ಮಾಡಿ, ಒತ್ತಡವನ್ನು ಕಡಿಮೆಗೊಳಿಸಿ, ಅರಿವಿನ ಸಾಮರ್ಥ್ಯ ವೃದ್ಧಿಸುತ್ತದೆ

ಕಾರ್ಬೋಗೆ ಪ್ರಾಮುಖ್ಯತೆ: ಆರೋಗ್ಯಯುತ ಕಾರ್ಬೋ ಹೈಡ್ರೇಟ್​​ಗಳು ಸೆರೊಟೊನಿನ್​ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಧಾನ್ಯಗಳನ್ನು ಸೇವಿಸುವುದು ಉತ್ತಮ. ಓಟ್ಸ್​​, ಬಾಳೆಹಣ್ಣು, ಕಿತ್ತಳೆ, ಸೇಬು, ಪಪ್ಪಾಯ, ಸಿಹಿ ಆಲೂಗಡ್ಡೆ, ಬೀಟ್​ರೋಟ್​ ಮೂಲಂಗಿಯಲ್ಲಿ ಹೆಚ್ಚಿನ ಮಟ್ಟದ ಸ್ಟಾರ್ಚ್​​ ಇರುತ್ತದೆ.

ವಿಟಮಿನ್​ ಡಿ: ವಿಟಮಿನ್​ ಡಿ ಕೂಡ ಮೆದುಳಿನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ರಾಸಾಯನಿಕ ಉತ್ಪಾದನೆಗೆ ಸಹಾಯ ಮಾಡುತ್ತದೆ. ಟರ್ಕಿಶ್​ ಅಧ್ಯಯನ ಸಲಹೆ ನೀಡುವಂತೆ ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ನಿತ್ಯ ದೇಹವನ್ನು ಬಿಸಿಲಿಗೆ ಒಡ್ಡುವುದರಿಂದ ಈ ವಿಟಮಿನ್​ ಸಿಗುತ್ತದೆ. ವಿಟಮಿನ್​ ಡಿ ಸೂರ್ಯನಿಂದ ಸಿಗುತ್ತದೆ. ಮೊಸರು ಮತ್ತು ಮೊಟ್ಟೆ ಮೂಲಕವೂ ಇದನ್ನು ಪಡೆಯಬಹುದಾಗಿದೆ.

ಒಣಹಣ್ಣುಗಳು: ಒಣ ಹಣ್ಣು ಇಷ್ಟ ಪಡುವವರು, ವಾಲ್ನಟ್​ ಸೆವಿಸಬಹುದು. ಇದು ಮೆದುಳಿನ ಆರೋಗ್ಯ ರಕ್ಷಿಸುತ್ತದೆ. ಇದು ಆತಂಕ ಮತ್ತು ಖಿನ್ನತೆಯ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಒಣದ್ರಾಕ್ಷಿಯಲ್ಲಿ ಮೆಗ್ನಿಶಿಯಂ ಅಂಶ ಹೆಚ್ಚಿರುತ್ತದೆ.

ಮಸಾಲೆ ಕೂಡ ಸಹಾಯ: ಎಂಡೊರ್ಫಿನ್​ ಕೂಡ ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸುತ್ತದೆ. ಇದು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಆತ್ಮ ವಿಶ್ವಾಸ ನಿರ್ಮಾಣದಲ್ಲಿ ಸಹಾಯ ಮಾಡುತ್ತದೆ. ಎಂಡೋರ್ಫಿನ್​ ವ್ಯಾಯಾಮ ಮಾಡಿದಾಗ ದೇಹದಿಂದ ಬಿಡುಗಡೆಯಾಗುತ್ತದೆ. ಈ ಅಂಶ ಮೆಣಸಿನಕಾಯಿ, ಮಸಾಲೆ ಅಂಶ ಸೇವಿಸಿದಾಗಲೂ ಬಿಡುಗಡೆಯಾಗುತ್ತದೆ. ಈ ಹಿನ್ನೆಲೆ ಮೆಣಸು ಮತ್ತು ಖಾರ ಸೇವನೆ ಕೂಡ ಉತ್ತಮ.

ಇದನ್ನೂ ಓದಿ: ದೈಹಿಕ ಚಟುವಟಿಕೆಗಳಿಂದ ಪಾರ್ಶ್ವವಾಯು ಪೀಡಿತರಿಗೆ ಹೆಚ್ಚಿನ ಪ್ರಯೋಜನ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.