ETV Bharat / health

ತೂಕ ಇಳಿಸಬೇಕಾ, ಜೀರ್ಣಕ್ರಿಯೆ ಸಮಸ್ಯೆಯೇ? ಹಲವು ಸಮಸ್ಯೆಗಳಿಗೆ ಮದ್ದು ಈ ಬೆಳ್ಳುಳ್ಳಿ - HEALTH BENEFITS Of GARLIC - HEALTH BENEFITS OF GARLIC

ತೂಕ ಇಳಿಸಲು ಮಾತ್ರವಲ್ಲ, ಅನೇಕ ಆರೋಗ್ಯ ಪ್ರಯೋಜನವನ್ನು ಕೂಡ ಬೆಳ್ಳುಳ್ಳಿ ಹೊಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

garlic has tremendous health benefits it protect form heart to skin
ಬೆಳ್ಳುಳ್ಳಿ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 13, 2024, 3:06 PM IST

Updated : Jul 13, 2024, 3:41 PM IST

ಹೈದರಾಬಾದ್​: ಸಾಮಾನ್ಯವಾಗಿ ಪಲ್ಯಗಳು ಮತ್ತು ಉಪ್ಪಿನಕಾಯಿಗಳಲ್ಲಿ ಬೆಳ್ಳುಳ್ಳಿಯನ್ನು ಯಥೇಚ್ಛವಾಗಿ ಉಪಯೋಗಿಸಲಾಗುತ್ತದೆ. ಬೆಳ್ಳುಳ್ಳಿ ಇಲ್ಲದೇ ಸ್ವಾದವೇ ಇರುವುದಿಲ್ಲ. ಬೆಳ್ಳುಳ್ಳಿ ಕಟು ವಾಸನೆ ನೀಡಿದರೂ, ಅಡುಗೆಗೆ ಬೆರೆತಾಗಲೇ ಅದು ರುಚಿ ಹೆಚ್ಚಿಸುವುದು. ಇನ್ನು ಅನೇಕ ಮಂದಿ ಆರೋಗ್ಯಕ್ಕೆ ಉತ್ತಮ ಎಂದು ಹಸಿ ಬೆಳ್ಳುಳ್ಳಿಯನ್ನು ತಿನ್ನುತ್ತಾರೆ. ಈ ಬೆಳ್ಳುಳ್ಳಿಯು ತೂಕ ಕಡಿಮೆ ಮಾಡಲು ಮಾತ್ರವಲ್ಲ, ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ.

ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿ: ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್​ ಮತ್ತು ಆಂಟಿಮೈಕ್ರೊಬಯಲ್​ ಅಂಶಗಳು ಸಮೃದ್ಧವಾಗಿರುತ್ತವೆ. ಇದೇ ಕಾರಣಕ್ಕೆ ಇದು ಆರೋಗ್ಯಕ್ಕೆ ಉತ್ತಮವಾಗಿದ್ದು, ಬೆಳಗಿನ ಹೊತ್ತು ಬೆಳ್ಳುಳ್ಳಿ ನೀರು ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ.

ಜೀರ್ಣಕ್ಕೆ ಸಹಾಯಕ: ತಜ್ಞರ ಪ್ರಕಾರ, ಬೆಳ್ಳುಳ್ಳಿಯಲ್ಲಿನ ನೈಸರ್ಗಿಕ ಸಂಯೋಜನೆಗಳು ಜೀರ್ಣಕ್ರಿಯೆ ಸುಧಾರಣೆಗೆ ಸಹಾಯಕವಾಗಿದೆ. ಅಲ್ಲದೇ, ಇದು ಉಬ್ಬರ ಮತ್ತು ಗ್ಯಾಸ್​ನಂತಹ ಅಜೀರ್ಣದ ಸಮಸ್ಯೆಯನ್ನು ತೊಡೆದು ಹಾಕುತ್ತದೆ.

ಹೃದಯದ ಆರೋಗ್ಯ: ಬೆಳ್ಳುಳ್ಳಿಯಲ್ಲಿನ ಅಲಿಸಿನ್​ ಅಂಶವೂ ಹೃದಯ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇದು ರಕ್ತನಾಳ ಸರಾಗ ಸಂಚಾರಕ್ಕೆ ಸಹಾಯ ಮಾಡುವ ಜೊತೆಗೆ ರಕ್ತದ ಒತ್ತಡ ಕಡಿಮೆ ಮಾಡುತ್ತದೆ. ತಜ್ಞರ ಪ್ರಕಾರ ಇದು ಕೆಟ್ಟ ಕೊಲೆಸ್ಟ್ರಾಲ್​ ಮಟ್ಟವನ್ನು ತಗ್ಗಿಸುತ್ತದೆ. ಬೆಳಗಿನ ಹೊತ್ತು ಬೆಳ್ಳುಳ್ಳಿ ನೀರು ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಕಡಿಮೆಯಾಗುತ್ತದೆ.

ತೂಕ ನಷ್ಟಕ್ಕೆ ಸಹಾಯ: ತಜ್ಞರು ಹೇಳುವಂತೆ ಇದರಲ್ಲಿನ ಅಂಶಗಳು ತೂಕ ನಷ್ಟದ ಪ್ರಯಾಣಕ್ಕೆ ಸಾಕಷ್ಟು ನೆರವು ನೀಡುತ್ತದೆ. ಬೆಳಗಿನ ಸಮಯದಲ್ಲಿ ಬೆಳ್ಳುಳ್ಳಿ ನೀರು ಸೇವನೆ ಮಾಡುವುದು ಆರೋಗ್ಯಯುತ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. 2020ರಲ್ಲಿ ಪ್ರಕಟವಾದ ಫುಡ್​ ಅಂಡ್​ ಫಂಕ್ಷನ್​ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನ ಅನುಸಾರ ಇದು ಕೊಬ್ಬಿನ ಕೋಶದ ಬೆಳವಣಿಗೆಯನ್ನು ಹತ್ತಿಕ್ಕುತ್ತದೆ. ಜೊತೆಗೆ ಕೊಬ್ಬು ಕರಗಿಸಿ, ತೂಕ ನಷ್ಟ ಮಾಡುತ್ತದೆ ಎಂದು ಅಧ್ಯಯನದಲ್ಲಿ ಭಾಗಿಯಾದ ಚೀನಾದ ಜಿನಕ್ಸಿ ಯುನಿವರ್ಸಿಟಿಯ ಪ್ರೊ ಡಾ ಕ್ಷಿನ್ಫೆಂಗ್​ ಲಿ ತಿಳಿಸಿದ್ದಾರೆ.

ಆರೋಗ್ಯಯುತ ತ್ವಚೆ: ಬೆಳ್ಳುಳ್ಳಿಯಲ್ಲಿನ ಆ್ಯಂಟಿ ಆಕ್ಸಿಡೆಂಟ್​ಗಳು ಫ್ರಿರಾಡಿಕಲ್​ನಿಂದ ಆಗುವ ತ್ವಚೆಯ ಹಾನಿಯನ್ನು ತಡೆಯುತ್ತದೆ. ಇದು ಅಕಾಲಿಕ ಸುಕ್ಕು ಕಟ್ಟುವಿಕೆ ತಡೆಯುತ್ತದೆ. ಫಲಿತಾಂಶ ತ್ವಚೆ ಯೌವನದಿಂದ ಕೂಡಿರುವಂತೆ ಕಾಣುತ್ತದೆ. ಇದರಲ್ಲಿನ ಉರಿಯೂತ ವಿರೋಧಿ ಗುಣ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ.

ವಿಶೇಷ ಸೂಚನೆ: ಇಲ್ಲಿ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬೇಕಾ? ಹಾಗಾದ್ರೆ ಬೆಳ್ಳುಳ್ಳಿ ಸೇವಿಸಿ

Last Updated : Jul 13, 2024, 3:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.