Why we avoid rice?:: ಜೀವನಶೈಲಿ ಮತ್ತು ತಿನ್ನುವ ಅಭ್ಯಾಸ, ದೈಹಿಕ ಚಟುವಟಿಕೆಯಿಂದ ದೂರ ಇರುವುದರಿಂದ ಅನೇಕ ಮಂದಿ ಇಂದು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲದೆ ತೂಕ ಕಳೆದುಕೊಳ್ಳಲು ಇನ್ನಿಲ್ಲದ ಕಸರತ್ತನ್ನೂ ಕೂಡಾ ಮಾಡುತ್ತಾರೆ. ಅದರಲ್ಲೂ ಅನೇಕರು ತೂಕ ಇಳಿಸುವ ತಯಾರಿ ಆರಂಭಿಸಿದಾಕ್ಷಣ ಮೊದಲು ಅನ್ನ ಸೇವನೆಗೆ ಕಡಿವಾಣ ಹಾಕಲು ಮುಂದಾಗುತ್ತಾರೆ. ಅನ್ನ ಸೇವನೆಯೇ ತೂಕ ಹೆಚ್ಚಳಕ್ಕೆ ಕಾರಣ ಎಂಬ ನಂಬಿಕೆ ಅನೇಕರಲ್ಲಿದೆ. ಡಯಟ್ಗೆ ಮುಂದಾಗುವವರು ಅನ್ನ ತ್ಯಜಿಸುವುದರಿಂದ ತೂಕ ಕಳೆದುಕೊಳ್ಳಬಹುದಾ ಎಂಬ ಕುರಿತ ಮಾಹಿತಿ ಇಲ್ಲಿದೆ.
ತಜ್ಞರು ಹೇಳುವ ಪ್ರಕಾರ, ಅನ್ನವನ್ನು ಸಂಪೂರ್ಣವಾಗಿ ನಿಲ್ಲಿಸಿದಾಕ್ಷಣ ತೂಕ ಇಳಿಕೆ ಆಗುತ್ತದೆ ಎಂಬುದು ಸುಳ್ಳು. ಅಕ್ಕಿಯಲ್ಲಿ ದೇಹಕ್ಕೆ ಬೇಕಾದ ಸಮೃದ್ಧ ಪೋಷಕಾಂಶ ಮತ್ತು ಕಾರ್ಬೋಹೈಡ್ರೇಟ್ ಇದೆ. ಇದು ನಮಗೆ ಆರೋಗ್ಯಯುತ ಶಕ್ತಿಯನ್ನು ನೀಡುವುದರ ಜೊತೆಗೆ ಆರೋಗ್ಯದಿಂದ ಇರಿಸಲು ಸಹಾಯ ಮಾಡುತ್ತದೆ. ಈ ಹಿನ್ನಲೆ ಅನ್ನ ಸೇವನೆಗೆ ಸಲಹೆ ನೀಡಲಾಗುವುದು. ತೂಕ ಇಳಿಸುವುದಾದರೆ ಅನ್ನದ ಆಹಾರದ ಸೇವನೆಯಲ್ಲಿ ಕೆಲವು ಎಚ್ಚರಿಕೆ ವಹಿಸುವುದು ಅವಶ್ಯಕ.
ಅನ್ನದ ಜೊತೆ ಪಲ್ಯ: ತೂಕ ಇಳಿಸುವವರಿಗೆ ಊಟದಲ್ಲಿ ಅನ್ನದ ಜೊತೆಗೆ ತರಕಾರಿ ಪಲ್ಯ ಸೇವನೆ ಮಾಡುವಂತೆ ಅನೇಕರು ಸಲಹೆ ನೀಡುತ್ತಾರೆ. ಇದು ಅನ್ನದ ಸೇವನೆಯನ್ನು ಕಡಿಮೆ ಮಾಡುತ್ತದೆ. ಕಡಿಮೆ ಅನ್ನವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರುವುದಿಲ್ಲ. ಜೊತೆಗೆ ತರಕಾರಿ ಮತ್ತು ಧಾನ್ಯಗಳು ಪ್ರೊಟೀನ್ ಮತ್ತು ಫೈಬರ್ನಿಂದ ಸಮೃದ್ಧವಾಗಿವೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಸಣ್ಣ ತಟ್ಟೆ ಇರಲಿ: ಊಟ ಮಾಡುವಾಗ ಸಣ್ಣ ತಟ್ಟೆ ಮಾಡುವುದು ಪ್ರಯೋಜನಕಾರಿಯಾಗಿರಲಿದೆ. ಕಾರಣ, ಈ ಪ್ಲೇಟ್ಗಳಲ್ಲಿ ಸ್ವಲ್ಪ ಮಟ್ಟಿನ ಆಹಾರ ಭರ್ತಿಯಾಗಲಿದೆ. ಇದರಿಂದ ತಟ್ಟೆತುಂಬಾ ಸಮೃದ್ಧ ಊಟ ಮಾಡಿದ ಅನುಭವ ಮೂಡಲಿದೆ. ಜೊತೆಗೆ ಇದರಿಂದ ಹೆಚ್ಚು ಆಹಾರ ಸೇವನೆಯನ್ನು ನಿಯಂತ್ರಿಸಬಹುದಾಗಿದೆ.
ಸಲಾಡ್ ತಿನ್ನಿ: ತೂಕ ಇಳಿಸುವವರು ತಪ್ಪದೇ ಪ್ರತಿನಿತ್ಯ ಸಲಾಡ್ ಸೇವನೆಗೆ ಮುಂದಾಗಬೇಕು. ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಫೈಬರ್, ವಿಟಮಿನ್ ಮತ್ತು ಮಿನರಲ್ಸ್ ಸಮೃದ್ಧವಾಗಿರುತ್ತದೆ. ತಜ್ಞರ ಪ್ರಕಾರ, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಜೊತೆಗೆ ಅನ್ನವನ್ನು ಕಡಿಮೆ ಸೇವಿಸುವ ಮಾರ್ಗೋಪಾಯ ಕೂಡ ಇದಾಗಿದೆ. 2016ರಲ್ಲಿ ಪ್ರಕಟವಾದ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ವರದಿ ಪ್ರಕಾರ, ತೂಕ ಇಳಿಸುವವರು ನಿತ್ಯ ಸಲಾಡ್ ತಿನ್ನುವ ಅಭ್ಯಾಸ ನಡೆಸಬೇಕು ಎಂದು ಸಂಶೋಧಕರು ಶಿಫಾರಸು ಮಾಡುತ್ತಾರೆ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಸಂಶೋಧನೆಯ ಭಾಗವಾಗಿದ್ದ ಅಮೆರಿಕದ ಬ್ರಿಗ್ಯಾಮ್ ಯಂಗ್ ಯುನಿವರ್ಸಿಟಿಯ ಡಾ ಬ್ರೆಂಡಾ ಪೆನ್ನ್ ತಿಳಿಸುತ್ತಾರೆ.
ಮಜ್ಜಿಗೆ ಕುಡಿಯಿರಿ: ಸಲಾಡ್ ಜೊತೆಗೆ ನಿತ್ಯ ಮಜ್ಜಿಗೆ ಸೇವನೆ ಕೂಡ ಅಗತ್ಯ. ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಅಧಿಕ ಪ್ರೊಬಾಯಟಿಕ್ಸ್ ಇದೆ. ತಜ್ಞರು ಹೇಳುವಂತೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಊಟಕ್ಕೆ ಮುನ್ನ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಕಡಿಮೆ ಅನ್ನವನ್ನು ಸೇವಿಸುತ್ತೀರಿ. ಇದೇ ಕಾರಣಕ್ಕೆ ತೂಕ ಇಳಿಕೆಯಾಗುತ್ತದೆ.
ದಯವಿಟ್ಟು ಗಮನಿಸಿ: ಇಲ್ಲಿ ನೀಡಲಾಗಿರುವ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಯಾವುದಕ್ಕೂ ಒಮ್ಮೆ ನಿಮ್ಮ ಆಪ್ತ ವೈದ್ಯರ ಸಲಹೆ ಪಡೆಯುವುದು ಮುಂದುವರೆಯುವುದು ಉತ್ತಮ
ಇದನ್ನೂ ಓದಿ: ಏನಿದು ಕ್ರ್ಯಾಶ್ ಡಯಟ್, ಸತ್ಯವಾಗ್ಲೂ ಇದರಿಂದ ತೂಕ ಕಡಿಮೆ ಆಗುತ್ತಾ?; ಇದು ನಿಜವಾಗಿಯೂ ಉತ್ತಮ ಆರೋಗ್ಯಕ್ಕೆ ಸಹಕಾರಿಯೇ?