Health Benefits of Apple: 'ನೀವು ನಿತ್ಯ ಒಂದು ಸೇಬು ಸೇವಿಸಿದರೆ ನೀವು ವೈದ್ಯರಿಂದ ದೂರ ಉಳಿಯುತ್ತೀರಿ' ಎನ್ನುವ ಹಿರಿಯರ ಮಾತನ್ನು ಕೇಳಿರಬೇಕು. ಈ ಮಾತು ಸಂಪೂರ್ಣವಾಗಿ ನಿಜವಾಗಿದೆ. ಸೇಬುಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೇಬು ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೋಗಗಳು ಬರುವುದನ್ನು ತಡೆಯಬಹುದು.
ಸೇಬು ಹಣ್ಣು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸೇಬು ತೂಕ ಇಳಿಸಿಕೊಳ್ಳಲು ಹಾಗೂ ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಸೇಬು ದೇಹದಲ್ಲಿನ ಕಬ್ಬಿಣಾಂಶದ ಕೊರತೆ ತಡೆಯಲು ಸಹಾಯ ಮಾಡುತ್ತದೆ. ಸೇಬು ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ. ಇವುಗಳು ದೇಹವನ್ನು ಅನೇಕ ರೋಗಗಳಿಂದ ದೂರವಿಡಲು ಪೂಕರವಾಗಿವೆ.
ಅಧ್ಯಯನ ಏನು ಹೇಳುತ್ತೆ?: NHI ನಡೆಸಿದ ಅಧ್ಯಯನದ ಪ್ರಕಾರ, ಸೇಬು ಹಣ್ಣಿನಲ್ಲಿ ಫೈಟೊಕೆಮಿಕಲ್ಗಳು ಸಮೃದ್ಧವಾಗಿವೆ. ಇದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿದೆ. ಸೇಬು ಹಣ್ಣಿನಲ್ಲಿ ವಿಟಮಿನ್ ಸಿ, ಪ್ರೋಟೀನ್, ಫ್ಲೇವನಾಯ್ಡ್ ಕ್ವೆರ್ಸೆಟಿನ್, ಉರಿಯೂತ ನಿವಾರಕ, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೇರಿದಂತೆ ಹಲವು ಮಹತ್ವದ ಪೋಷಕಾಂಶಗಳು ಅಡಕವಾಗಿವೆ.
ಹೀಗಾಗಿ ವಿವಿಧ ಕಾಯಿಲೆಗಳನ್ನು ತಡೆಯಲು ತುಂಬಾ ಉಪಯುಕ್ತವಾಗಿವೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ. ಫೈಬರ್ ಮಲಬದ್ಧತೆ ಹಾಗೂ ಬೊಜ್ಜುತನ ತೊಡೆದುಹಾಕುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.
ರಕ್ತಹೀನತೆ ಹೋಗಲಾಡಿಸಲು ಪ್ರಯೋಜನ: ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವು ಪ್ರತಿ ಡೆಸಿಲೀಟರ್ಗೆ 14 ರಿಂದ 16 ಗ್ರಾಂಗಿಂತ ಕಡಿಮೆಯಾದಾಗ, ರಕ್ತಹೀನತೆಯ ಅಪಾಯ ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಯು ರಕ್ತಹೀನತೆ ಸಮಸ್ಯೆಯಿಂದ ಬಳಲುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಈ ಪರಿಸ್ಥಿತಿಯಲ್ಲಿ ಹಸಿವು ಕಡಿಮೆಯಾಗುತ್ತದೆ. ದೇಹದಲ್ಲಿ ತುಂಬಾ ಸುಸ್ತು ಕಂಡು ಬರುತ್ತದೆ. ಹೃದಯ ಬಡಿತ ಕಡಿಮೆಯಾಗುವುದು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಇವೆಲ್ಲಾ ಕಾಯಿಲೆಯಿಂದ ಮುಕ್ತಿ ಪಡೆಯಲು ನೀವು ನಿಯಮಿತವಾಗಿ ಒಂದು ಸೇಬು ಹಣ್ಣನ್ನು ಸೇವಿಸಬೇಕಾಗುತ್ತದೆ. ಸೇಬು ಹಣ್ಣು ತಿನ್ನುವುದರಿಂದ ದೇಹದಲ್ಲಿನ ಕಬ್ಬಿಣಾಂಶದ ಕೊರತೆ ದೂರವಾಗುತ್ತದೆ. ಬೆಳಗ್ಗೆ ಸೇಬು ಹಣ್ಣು ತಿನ್ನುವುದು ತುಂಬಾ ಪ್ರಯೋಜನಗಳು ಲಭಿಸುತ್ತವೆ. ಸಂಜೆ ಮತ್ತು ಸೂರ್ಯಾಸ್ತದ ನಂತರ ಸೇಬು ತಿನ್ನುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
https://pmc.ncbi.nlm.nih.gov/articles/PMC442131/
ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.