ಒಂದೋ ಅಥವಾ ಎರಡು ಮಕ್ಕಳನ್ನು ಪಡೆದರೆ ಸಾಕು ಎಂದು ಭಾವಿಸುವ ದಂಪತಿಗಳು ಮತ್ತೆ ಗರ್ಭಧಾರಣೆಯನ್ನು ತಪ್ಪಿಸಲು ಆಪರೇಷನ್ ಮಾಡಿಸಿಕೊಳ್ಳುತ್ತಾರೆ. ಪುರುಷರಲ್ಲಿ ವ್ಯಾಸೆಕ್ಟಮಿ ಮತ್ತು ಮಹಿಳೆಯರಲ್ಲಿ ಟ್ಯೂಬೆಕ್ಟಮಿ ಎಂಬ ಶಸ್ತ್ರಚಿಕಿತ್ಸಾ ವಿಧಾನಗಳಿವೆ. ಆದರೆ, ಈ ಕುಟುಂಬ ಯೋಜನೆ ಬಗ್ಗೆ ಅನೇಕರಿಗೆ ಹಲವು ಅನುಮಾನಗಳಿವೆ. ಈ ಅನುಮಾನಗಳ ಪರಿಹಾರಕ್ಕಾಗಿ ಸ್ತ್ರೀರೋಗತಜ್ಞರ ಸಲಹೆಯನ್ನು ಪಡೆಯಲಾಗಿದೆ. ಅಷ್ಟಕ್ಕೂ ಈ ಬಗೆಗಿನ ಅನುಮಾನಗಳೇನು? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ಈ ಸುದ್ದಿಯಲ್ಲಿ ನೋಡೋಣ.
ಇದೇ ಸಮಸ್ಯೆ..: ಈಗ ನನಗೆ ಏಳನೇ ತಿಂಗಳು. ಐದು ವರ್ಷಗಳ ಹಿಂದೆ ಸಿಸೇರಿಯನ್ ಮೂಲಕ ನನಗೆ ಮಗ ಜನಿಸಿದ್ದಾನೆ. ಈಗ ನನಗೆ ಎರಡನೇ ಮಗು ಆಗಿದೆ. ಹೀಗಾಗಿ ನಾನು ಮಕ್ಕಳಾಗದಂತೆ ಆಪರೇಷನ್ ಮಾಡಿಕೊಳ್ಳುತ್ತೇನೆ. ಆದರೆ.. ಡೆಲಿವರಿ ಸಮಯದಲ್ಲಿ ಟ್ಯೂಬೆಕ್ಟಮಿ ಮಾಡಿಸಿಕೊಳ್ಳುವುದು ಉತ್ತಮವೇ? ಅಥವಾ ಕೆಲವು ವರ್ಷ ಕಾಯಬೇಕೇ? ಎನ್ನುವುದು ಈಗಿರುವ ಪ್ರಶ್ನೆ.
ಮಹಿಳೆಯೊಬ್ಬರ ಪ್ರಶ್ನೆಗೆ ಸ್ತ್ರೀರೋಗ ತಜ್ಞೆಯ ಉತ್ತರವಿದು: ಈ ಪ್ರಶ್ನೆಗೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ವೈ.ಸವಿತಾದೇವಿ ಉತ್ತರಿಸಿದ್ದಾರೆ. ಯಾವ ಸಮಯದಲ್ಲಿ ಆಪರೇಷನ್ ಮಾಡುವುದು ಉತ್ತಮ ಎಂದು ವಿವರಿಸಿದ್ದಾರೆ. ಆ ವಿವರಗಳು ನಿಮಗಾಗಿ..
ಹೆರಿಗೆಯ ಸಮಯದಲ್ಲಿ ಟ್ಯೂಬೆಕ್ಟಮಿಗೆ ಒಳಗಾಗಬಹುದೇ ಎಂದು ಗಂಡ - ಹೆಂಡತಿ ಒಟ್ಟಾಗಿ ನಿರ್ಧರಿಸಬೇಕು. ಎರಡನ್ನೂ ಒಂದೇ ಸಮಯದಲ್ಲಿ ಮಾಡುವುದರಿಂದ ಅರಿವಳಿಕೆ, ಹೆರಿಗೆಯ ನಂತರದ ವಿಶ್ರಾಂತಿ ಮತ್ತು ಆಸ್ಪತ್ರೆಯ ವೆಚ್ಚಗಳು ಹೆಚ್ಚಾಗುತ್ತವೆ. ಈ ವಿಚಾರ ನಿಮ್ಮ ಗಮನದಲ್ಲಿರಬೇಕಾಗಿರುವುದು ಅವಶ್ಯಕವಾಗಿದೆ.
ಮಗುವಾಗಿ ಒಂದು ವರ್ಷ ಕಾಯುವುದು ಉತ್ತಮ: ’’ಸಿಸೇರಿಯನ್ ಜೊತೆಗೆ ಟ್ಯೂಬೆಕ್ಟಮಿ ಆಪರೇಷನ್ ಮಾಡಿದಾಗ ವಿಫಲಗೊಳ್ಳುವ ಸಾಧ್ಯತೆಗಳು ಇವೆ. ಇಲ್ಲಿ ನೀವು ನಿಮ್ಮ ಮಗುವಿನ ಆರೋಗ್ಯದ ಬಗ್ಗೆಯೂ ಯೋಚಿಸಬೇಕಾಗಿರುವುದು ಮುಖ್ಯವಾಗಿದೆ. ಮಗುವಿಗೆ ಮೊದಲ ವರ್ಷ ನಿರ್ಣಾಯಕ. ಏಕೆಂದರೆ ನಮ್ಮ ದೇಶದಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚು ಅನ್ನುವುದನ್ನು ಅಂಕಿ- ಅಂಶಗಳೇ ಹೇಳುತ್ತವೆ. ಆದ್ದರಿಂದ, ಹಾಲುಣಿಸುವಿಕೆಯ ನಂತರ ಒಂದು ವರ್ಷ ಕಾಯುವುದು ಉತ್ತಮ, ಎಲ್ಲ ವ್ಯಾಕ್ಸಿನೇಷನ್ಗಳನ್ನು ಪೂರ್ಣಗೊಳಿಸಿ, ಮಗುವಿಗೆ ಯಾವುದೇ ದೋಷಗಳಿಲ್ಲ ಮತ್ತು ಉತ್ತಮ ಆರೋಗ್ಯವಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಂತರ ಟ್ಯೂಬೆಕ್ಟಮಿಗೆ ಒಳಗಾಗುವುದು ಉತ್ತಮ‘‘ ಎಂದು ಸ್ತ್ರೀ ರೋಗ ತಜ್ಞೆ ಡಾ.ವೈ.ಸವಿತಾದೇವಿ ಹೇಳಿದ್ದಾರೆ
ನೀವು ಮತ್ತೆ ಆಸ್ಪತ್ರೆಗೆ ಹೋಗಬೇಕು ಮತ್ತು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಲ್ಲ ಎಂದು ನೀವು ಯೋಚಿಸುತ್ತಿರಬಹುದು. ಟ್ಯೂಬೆಕ್ಟಮಿ ಚಿಕಿತ್ಸೆಗೆ ಒಂದು ಬಾರಿ ಆಸ್ಪತ್ರೆ ಹೋಗಿ ಅಡ್ಮಿಟ್ ಆದರೆ ಸಾಕು. ಹೊಲಿಗೆ ಹಾಕದೇ ಹೊಕ್ಕುಳಿನಿಂದ ಸಣ್ಣ ರಂಧ್ರ ಮಾಡಿ ಅಲ್ಲಿಂದಲೇ ಸಣ್ಣದಾಗಿ ಇಂದು ಸಕ್ಸಸ್ ಫುಲ್ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಹಾಗಾಗಿ ಮನೆಯವರು, ಅಥವಾ ಗಂಡ ಹೆಂಡತಿ ಕುಳಿತು ಯೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಿವುದು ಉತ್ತಮ ಎಂದು ಡಾ.ವೈ.ಸವಿತಾದೇವಿ ಸಲಹೆ ನೀಡಿದ್ದಾರೆ.
ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ಹಾಗೂ ಕುಟುಂಬದ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.