ETV Bharat / health

ಕಬ್ಬಿಣಾಂಶ ಭರಿತ ಆಹಾರ ಸೇವನೆಯಿಂದ ಅನೀಮಿಯಾ ತಡೆಗಟ್ಟಲು ಸಾಧ್ಯ: ತಜ್ಞರ ಅಭಿಮತ - Anaemia problem in India - ANAEMIA PROBLEM IN INDIA

ಭಾರತದ ಮಹಿಳೆಯರಲ್ಲಿ ಅನೀಮಿಯಾ ಸಮಸ್ಯೆ ಸಾಮಾನ್ಯವಾಗಿರುವುದಾದರೂ ಅದನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ವೈದ್ಯರು ಹೇಳಿದ್ದಾರೆ.

'Anaemia a preventable health threat in girls, women in India'
'Anaemia a preventable health threat in girls, women in India' (ians)
author img

By ETV Bharat Karnataka Team

Published : May 12, 2024, 7:32 PM IST

ನವದೆಹಲಿ: ಭಾರತದಲ್ಲಿ ಬಾಲಕಿಯರು ಮತ್ತು ಮಹಿಳೆಯರಲ್ಲಿ ರಕ್ತಹೀನತೆ (ಅನೀಮಿಯಾ) ಅತ್ಯಂತ ಸಾಮಾನ್ಯವಾದ ಆದರೆ ಸುಲಭವಾಗಿ ತಡೆಗಟ್ಟಬಹುದಾದ ಆರೋಗ್ಯ ಸಮಸ್ಯೆಯಾಗಿದೆ ಎಂದು ಆರೋಗ್ಯ ತಜ್ಞರು ರವಿವಾರ ಹೇಳಿದ್ದಾರೆ.

ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ಅಗತ್ಯವಿರುವ ಆರೋಗ್ಯಕರ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಕೊರತೆಯು ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಅನಾರೋಗ್ಯವು ಮಹಿಳೆಯರು ಮತ್ತು ಬಾಲಕಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಸರಿಯಾದ ಕಬ್ಬಿಣಾಂಶ ಭರಿತ ಆಹಾರ ಸೇವಿಸದಿದ್ದಲ್ಲಿ ಅವರಲ್ಲಿ ದಣಿವು, ದೌರ್ಬಲ್ಯ ಮತ್ತು ಉಸಿರಾಟದ ತೊಂದರೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 (ಎನ್ಎಫ್ಎಚ್ಎಸ್ -5, 2019-21)ರ ಪ್ರಕಾರ, ಶೇಕಡಾ 25 ರಷ್ಟು ಪುರುಷರು (15-49 ವರ್ಷ ವಯಸ್ಸಿನವರು) ಮತ್ತು 57 ಪ್ರತಿಶತ ಮಹಿಳೆಯರು (15-49 ವರ್ಷ ವಯಸ್ಸಿನವರು) ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

"ರಕ್ತಹೀನತೆಯು ಭಾರತೀಯ ಮಹಿಳೆಯರಲ್ಲಿ ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವ್ಯಾಪಕವಾದ ಸಮಸ್ಯೆಯಾಗಿದೆ. ವಿಶೇಷವಾಗಿ ಕಬ್ಬಿಣಾಂಶ ಕಡಿಮೆ ಇರುವ ಆಹಾರ ಸೇವಿಸುವುದರಿಂದ ಮತ್ತು ಕೆಲವೊಮ್ಮೆ ಇದು ಆನುವಂಶಿಕವಾಗಿಯೂ ಬರುತ್ತದೆ. ಸಸ್ಯಾಹಾರ ಆಹಾರದಲ್ಲಿ ಕಬ್ಬಿಣಾಂಶ ಕಡಿಮೆ ಇರುವುದರಿಂದ ಪೂರಕ ಆಹಾರ ಸೇವನೆ ಅವಶ್ಯಕ" ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ. ಎಂ. ವಾಲಿ ಹೇಳಿದರು.

"ಗರ್ಭಧಾರಣೆ ಮತ್ತು ಹಾಲೂಡಿಸುವಿಕೆಯ ಸಮಯದಲ್ಲಿ ಹೆಚ್ಚಿನ ಕಬ್ಬಿಣಾಂಶ ಭರಿತ ಆಹಾರ ಸೇವನೆ ಅಗತ್ಯವಾಗುತ್ತದೆ. ಹೀಗಾಗಿ ಈ ಎರಡು ನಿರ್ದಿಷ್ಟ ಸಂದರ್ಭಗಳಲ್ಲಿ ಮಹಿಳೆಯರು ರಕ್ತಹೀನತೆಯ ಬಗ್ಗೆ ಜಾಗರೂಕವಾಗಿರಬೇಕು" ಎಂದು ಅವರು ಹೇಳಿದರು. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಇದೆ ಎಂದು ವೈದ್ಯರು ಉಲ್ಲೇಖಿಸಿದರು.

"ತೂಕ ಕಡಿಮೆ ಮಾಡಲು ಡಯಟ್ ಮಾಡುವುದರಿಂದ ನಗರ ಪ್ರದೇಶದ ಮಹಿಳೆಯರು ಹಾಗೂ ಕಠಿಣ ಪರಿಶ್ರಮ, ಸೋಂಕಿನಿಂದ ಮುಟ್ಟಿನ ರಕ್ತದ ನಷ್ಟ ಅಥವಾ ಪದೇ ಪದೇ ಹೆರಿಗೆಯಿಂದಾಗಿ ಗ್ರಾಮೀಣ ಮಹಿಳೆಯರು ರಕ್ತಹೀನತೆಯ ಸಮಸ್ಯೆಗೆ ಒಳಗಾಗುತ್ತಾರೆ." ಎಂದು ಡಾ. ವಾಲಿ ತಿಳಿಸಿದರು.

ಆಯಾಸ, ಮೈಬಣ್ಣ ಮಸುಕಾಗುವುದು, ಉಸಿರಾಟದ ತೊಂದರೆ, ತಲೆತಿರುಗುವಿಕೆ ಮತ್ತು ಶೀತಬಾಧೆ ಇವು ರಕ್ತಹೀನತೆಯಿಂದ ಉಂಟಾಗುವ ಸಾಮಾನ್ಯ ಸಮಸ್ಯೆಗಳಾಗಿವೆ.

ಕಬ್ಬಿಣಾಂಶ ಭರಿತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ತಡೆಗಟ್ಟಬಹುದು. ಮಾಂಸ, ಕೋಳಿ, ಮೀನು, ದ್ವಿದಳ ಧಾನ್ಯಗಳು, ಟೋಫು, ಪಾಲಕ್ ಮತ್ತು ಕೇಲ್ ನಂತಹ ಸೊಪ್ಪುಗಳು, ಧಾನ್ಯಗಳು ಮತ್ತು ಬೀಜಗಳ ಸೇವನೆ ಇದರಲ್ಲಿ ಸೇರಿವೆ ಎಂದು ಡಾ. ಭಾರ್ಗವಾ ತಿಳಿಸಿದರು. ಪೇರಳೆ, ಬಾಳೆಹಣ್ಣು, ಅಂಜೂರ ಮತ್ತು ದಾಳಿಂಬೆಯಂತಹ ಹಣ್ಣುಗಳು ಕೂಡ ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ : ರೋಗ ನಿರೋಧಕ ಶಕ್ತಿ ಮೀರಿಸುವ ಸಾಮರ್ಥ್ಯ ಹೊಂದಿದೆ ಹೊಸ ಕೋವಿಡ್ ರೂಪಾಂತರ 'FLiRT' - New Covid Variant

ETV Bharat Logo

Copyright © 2024 Ushodaya Enterprises Pvt. Ltd., All Rights Reserved.