ETV Bharat / entertainment

ಬೆಳ್ಳಿತೆರೆ ಮೇಲೆ ನಟ ಭಯಂಕರ 'ವಜ್ರಮುನಿ' ಅವತಾರದಲ್ಲಿ ಅಬ್ಬರಿಸಲು ಕೋಮಲ್​ ರೆಡಿ - YALAKUNNI MERA NAAM VAJRAMUNI

'ಯಲಾಕುನ್ನಿ ಮೇರಾ ನಾಮ್ ವಜ್ರಮುನಿ' ಅಕ್ಟೋಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರತಂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದೆ.

'Yalakunni Mera Naam Vajramuni' film team
'ಯಲಾಕುನ್ನಿ ಮೇರಾ ನಾಮ್ ವಜ್ರಮುನಿ' ಚಿತ್ರತಂಡ (Photo: ETV Bharat)
author img

By ETV Bharat Entertainment Team

Published : Oct 16, 2024, 2:17 PM IST

ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದ ಬೆಳ್ಳಿ ತೆರೆ ಮೇಲೆ ನಟ ಭಯಂಕರನಾಗಿ ವಿಜೃಂಭಿಸಿದವರು ವಜ್ರಮುನಿ. ಚಿತ್ರರಂಗದಲ್ಲಿ ಲ್ಯಾಂಡ್ ಮಾರ್ಕ್ ಕ್ರಿಯೇಟ್ ಮಾಡಿರೋ ವಜ್ರಮುನಿ ಅವರ ಫೇಮಸ್​​ ಡೈಲಾಗ್ 'ಯಲಾಕುನ್ನಿ' ಈಗ ಸಿನಿಮಾ ಆಗುತ್ತಿರೋದು ನಿಮಗೆ ತಿಳಿದಿರುವ ವಿಚಾರ. ಕಾಮಿಡಿ ಮಾಡುತ್ತಾ ಹೀರೋ ಆಗಿರುವ ಕೋಮಲ್ ಕುಮಾರ್ ಅವರೀಗ 'ವಜ್ರಮುನಿ' ಅವತಾರದಲ್ಲಿ ಮಿಂಚಲು ರೆಡಿಯಾಗಿರೋ 'ಯಲಾಕುನ್ನಿ' ಚಿತ್ರ ತನ್ನ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ. ಈ ಚಿತ್ರದ ಬಗ್ಗೆ ಕೋಮಲ್ ಆ್ಯಂಡ್ ಟೀಮ್‌ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
ನಿಮ್ಮ ಕೈಲಿ ಇದು ಸಾಧ್ಯ ಅಂತಾ ಮಾಡಿಸಿದ್ದಾರೆ: ಮೊದಲು ಮಾತು ಶುರು ಮಾಡಿದ ನಟ ಕೋಮಲ್ ಕುಮಾರ್, ನಿರ್ದೇಶಕ ಎನ್ ಆರ್ ಪ್ರದೀಪ್ ಅವರು ನನಗೆ ಈ ಚಿತ್ರದ ಕಥೆ ಹೇಳಿದಾಗ ಈ ಪಾತ್ರ ಮಾಡಲು ಕಷ್ಟ ಅಂತಾ ಹೇಳಿದ್ದೆ. ಆದರೆ ಅವರು ಬಿಡದೇ ನಿಮ್ಮ ಕೈಲಿ ಸಾಧ್ಯವೆಂದು ಒಪ್ಪಿಸಿ ಈ ಪಾತ್ರ ಮಾಡಿಸಿದ್ದಾರೆ. ನಾನು ಮೊದಲ ಬಾರಿ ವಜ್ರಮುನಿ ಅವರ ಗೆಟಪ್ ಹಾಕಿಕೊಂಡು ಕನ್ನಡಿ ಮುಂದೆ ಬಂದು ನಿಂತಾಗ ನನಗೆ ಕೋಮಲ್​ ಕಾಣಿಸಿಕೊಳ್ಳಲಿಲ್ಲ. ವಜ್ರಮುನಿ ಅವರೇ ಕಂಡರು. ಅವರ ಆಶೀರ್ವಾದದಿಂದ ಈ ಪಾತ್ರ ಮಾಡಲು ಸಾಧ್ಯವಾಯಿತು. ಎರಡು ಶೇಡ್​ಗಳಲ್ಲಿ ನನ್ನ ಪಾತ್ರವಿರುತ್ತದೆ. ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಕೂಡಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಸರ್ಗ ಅಪ್ಪಣ್ಣ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಅಣ್ಣನ ಮಗ ಯತಿರಾಜ್, ಜಯಸಿಂಹ ಮುಸುರಿ, ಮಯೂರ್ ಪಟೇಲ್, ಸಾಧುಕೋಕಿಲ, ದತ್ತಣ್ಣ, ಮಿತ್ರ, ತಬಲ ನಾಣಿ, ಶಿವರಾಜ್ ಕೆ.ಆರ್ ಪೇಟೆ, ಮಾನಸಿ ಸುಧೀರ್, ಸುಮನ್ ನಗರಕರ್ ಮುಂತಾದವರು ನಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ ಎಂದು ತಿಳಿಸಿದರು.

ಧರ್ಮವಿಶ್ ಅವರ ಸಂಗೀತ ಸಂಯೋಜನೆ: ಹಾಗೇ ಧರ್ಮವಿಶ್ ಅವರ ಸಂಗೀತ ಸಂಯೋಜನೆಯಿರುವ ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ. ಹಾಲೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರವನ್ನು ನನ್ನ ಶ್ರೀಮತಿ ಅನುಸೂಯಾ ಹಾಗೂ ಸಹನಾ‌ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಸಹನಾ ಮೂರ್ತಿ ಗಮನಾರ್ಹ ಪಾತ್ರದಲ್ಲಿ ನಟಿಸಿದ್ದಾರೆ. ಜಗ್ಗೇಶ್ ಅವರ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್, ಡಿಐ ಮುಂತಾದ ಕಾರ್ಯಗಳು ನಡೆದಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

'Yalakunni Mera Naam Vajramuni' film team
'ಯಲಾಕುನ್ನಿ ಮೇರಾ ನಾಮ್ ವಜ್ರಮುನಿ' ಚಿತ್ರತಂಡ (Photo: ETV Bharat)

ನಂತರ ನಿರ್ದೇಶಕ ಎನ್ ಆರ್ ಪ್ರದೀಪ್ ಮಾತನಾಡಿ, ಕೆಲ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ನನಗಿದು‌ ನಿರ್ದೇಶಕನಾಗಿ ಚೊಚ್ಚಲ ಚಿತ್ರ. ಅವಕಾಶ ನೀಡಿದ ಕೋಮಲ್ ಕುಮಾರ್ ಹಾಗೂ ಸಹನಾ‌‌ ಮೂರ್ತಿ ಅವರಿಗೆ ಧನ್ಯವಾದಗಳು. ಈ ಸಂದರ್ಭ ಕೋಮಲ್ ಕುಮಾರ್, ‌ಅನುಸೂಯ ಕೋಮಲ್ ಕುಮಾರ್,‌ ಜಗ್ಗೇಶ್ ಸರ್ ಹಾಗೂ ವಜ್ರಮುನಿ ಅವರ ಕುಟುಂಬದವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುತ್ತೇನೆ. ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್​​ಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಹಿರಿಯ ನಟ ಜಯಸಿಂಹ ಮುಸುರಿ ಮಾತನಾಡಿ ನಮ್ಮ ತಂದೆ ಅವರಿಗೆ ಹೆಸರು ತಂದುಕೊಟ್ಟ ಪಾತ್ರ ಪಡವಾರಹಳ್ಳಿ ಪಾಂಡವರು ಚಿತ್ರದ ಕನೆಕ್ಷನ್ ಕಾಳಪ್ಪ. ನಾನು ಕೂಡಾ ಈ ಚಿತ್ರದಲ್ಲಿ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದರು.

ಪೆಪೆ ಸಿನಿಮಾದ ಬಳಿಕ ಮಯೂರ್ ಪಟೇಲ್ ಯಲಾಕುನ್ನಿ ಚಿತ್ರದಲ್ಲಿ ಮಾರಕ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಪಾತ್ರ ಅಭಿಮಾನಿಗಳಿಗೆ ಹಿಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು‌, ಮೂರು ಹಾಡುಗಳನ್ನು ನಿರ್ದೇಶಕರು ಹಾಗೂ ಒಂದು ಹಾಡನ್ನು ಪ್ರಮೋದ್ ಮರವಂತೆ ‌ಬರೆದಿದ್ದಾರೆ. ಆಂತೋಣಿ ದಾಸ್, ಅನಿರುದ್ಧ್ ಶಾಸ್ತ್ರಿ, ನವೀನ್ ಸಜ್ಜು, ಶಶಾಂಕ್ ಶೇಷಗಿರಿ ಹಾಗೂ ನಾನು ಹಾಡಿದ್ದೇವೆ ಎಂದು ಹಾಡುಗಳು ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ಧರ್ಮವಿಶ್ ಮಾಹಿತಿ ನೀಡಿದರು.

ತಮ್ಮ ತಾತಾ ವಜ್ರಮುನಿ ‌ಅವರ ಪ್ರಚಂಡ ರಾವಣ ಚಿತ್ರದ ಪ್ರಸಿದ್ದ ಸಂಭಾಷಣೆ ಹೇಳಿ ಎಲ್ಲರ ಗಮನ ಸೆಳೆದ ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಯಲಾಕುನ್ನಿ ಚಿತ್ರದ ತಮ್ಮ ಪಾತ್ರ ಬಗ್ಗೆ ಕೂಡ ಮಾಹಿತಿ ನೀಡಿದರು.

ಇದನ್ನೂ ಓದಿ: ಧರ್ಮ ಕೀರ್ತಿರಾಜ್​, ಉಗ್ರಂಮಂಜು 'ಟೆನಂಟ್‌' ಸಿನಿಮಾದ ಟೀಸರ್​ ಅನಾವರಣಗೊಳಿಸಿದ್ರು ಸ್ಯಾಂಡಲ್​ವುಡ್​ ಸ್ಟಾರ್ಸ್​​​

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಚಿತ್ರವನ್ನು ನಿರ್ಮಿಸಿದ್ದಾರೆ. ಹೊಸ ಪ್ರತಿಭೆ ಎನ್​ಆರ್​​ ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ 'ಯಲಾಕುನ್ನಿ' ಚಿತ್ರ ಅಕ್ಟೋಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: 'ಸದ್ದು', ಯಾರೂ ತುಟಿಕ್​ ಪಿಟಿಕ್​ ಅನ್ನೋ ಹಾಗಿಲ್ಲ! ತಾಳ್ಮೆ ಕಳೆದುಕೊಂಡ ಬಿಗ್ ​​ಬಾಸ್​: ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಛಾಯಾಗ್ರಾಹಕ ಹಾಲೇಶ್, ಸಹನಾ ಮೂರ್ತಿ ಅವರ ಸಹೋದರ ಶಂಕರ್, ವಜ್ರಮುನಿ ಅವರ ಮಗ ಜಗದೀಶ್ ಹಾಗೂ ಸೊಸೆ ರೇಖಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.