ETV Bharat / entertainment

ಕ್ಯಾಮರಾಗೆ ಪೋಸ್​ ಕೊಡುತ್ತಿದ್ದಂತೆ ಉರ್ಫಿ ಜಾವೇದ್​​​ ಗೌನ್​​​​​ನಲ್ಲಿ ಉರಿದ ಬೆಂಕಿ: ವಿಡಿಯೋ ನೋಡಿ - Urfi Javed - URFI JAVED

ಸೋಷಿಯಲ್​​ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್​​ ಅವರ ಹೊಸ ವಿಡಿಯೋ ನೋಡುಗರ ಆಶ್ಚರ್ಯಕ್ಕೆ ಕಾರಣವಾಗಿದೆ.

Uorfi Javed
ಉರ್ಫಿ ಜಾವೇದ್​ (IANS)
author img

By ETV Bharat Karnataka Team

Published : Aug 20, 2024, 8:17 PM IST

ಮುಂಬೈ: ಉರ್ಫಿ ಜಾವೇದ್ ತಮ್ಮ ಫ್ಯಾಶನ್ ಸೆನ್ಸ್‌ನಿಂದ ಆಗಾಗ್ಗೆ ಸಖತ್​​ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಶೋ 'ಫಾಲೋ ಕರ್ ಲೋ ಯಾರ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಎಂದಿನಂತೆ ತಮ್ಮ ವಿಭಿನ್ನ ಶೈಲಿಯ ಡ್ರೆಸ್​​ ಧರಿಸಿ ಕಾರ್ಯಕ್ರಮದ ಪ್ರಚಾರದಲ್ಲಿ ಭಾಗಿಯಾದರು. ಈ ಬಾರಿ ಉರ್ಫಿ ಅವರ ಮತ್ಸ್ಯಕನ್ಯೆ ಸ್ಟೈಲ್​ನ ಡ್ರೆಸ್​​​ ವಿಶಿಷ್ಟವಾಗಿ ಗಮನ ಸೆಳೆದಿದೆ. ನಟಿಯ ಈ ವಿಭಿನ್ನ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಪಾಪರಾಜಿಗಳು, 'ಫಾಲೋ ಕರ್ ಲೋ ಯಾರ್' ಪ್ರಚಾರದಿಂದ ಉರ್ಫಿ ಜಾವೇದ್ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಉರ್ಫಿ ಕಪ್ಪು ಬಣ್ಣದ ಲಾಂಗ್​ ಗೌನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಹೊಸ ಡ್ರೆಸ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

'ಫಾಲೋ ಕರ್ ಲೋ ಯಾರ್' ಪ್ರಚಾರದ ಸಮಯದಲ್ಲಿ ಅವರು ವೇದಿಕೆಯ ಮೇಲೆ ನಿಂತಿದ್ದಾರೆ. ಮೊದಲು ತಮ್ಮ ಉಡುಪಿನ ಒಂದು ನೋಟವನ್ನು ಪ್ರದರ್ಶಿಸುತ್ತಾರೆ. ನಂತರ ಚಪ್ಪಾಳೆ ತಟ್ಟುತ್ತಿದ್ದಂತೆ ಅವರ ಉಡುಪಿನ ಕೆಳಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತದೆ. ಬೆಂಕಿ ನಂದಿದ ತಕ್ಷಣ, "ಫಾಲೋ ಕರ್ ಲೋ ಯಾರ್" ಶೀರ್ಷಿಕೆ ಕಾಣಸಿಗುತ್ತದೆ. ಅಭಿಮಾನಿಗಳು ನಟಿಯ ಫ್ಯಾಷನ್ ಸೆನ್ಸ್​ಗೆ ನೆಕ್ಸ್ಟ್​​ ಲೆವೆಲ್​​ ಎಂದು ಗುಣಗಾನ ಮಾಡಿದ್ದಾರೆ. ಇದು ಆಕಸ್ಮಿಕವಾಗಿ ಹಿಡಿದ ಬೆಂಕಿಯಲ್ಲ. ನಟಿಯ ಡ್ರೆಸ್​ ಶೈಲಿಯೇ ಹೀಗಿದೆ. ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ವಿನಯ್​ ರಾಜ್​ಕುಮಾರ್​​ 'ಪೆಪೆ' ಸಿನಿಮಾದ ಡಬ್ಬಿಂಗ್ ರೈಟ್ಸ್​​​ಗೆ ಭರ್ಜರಿ ಆಫರ್ಸ್ - PEPE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.