ETV Bharat / entertainment

ರಕ್ಷಿತ್ ಶೆಟ್ಟಿ ಮತ್ತು ನನ್ನ ಪತ್ನಿಯೊಂದಿಗೆ ನಟಿಸುವ ಆಸೆ​​: 'ಪೌಡರ್​' ನಟ ದಿಗಂತ್​​ ಸಂದರ್ಶನ - Diganth Manchale Interview - DIGANTH MANCHALE INTERVIEW

ಜನಾರ್ಧನ್​ ಚಿಕ್ಕಣ್ಣ ಆ್ಯಕ್ಷನ್​​ ಕಟ್​ ಹೇಳಿರುವ 'ಪೌಡರ್​'ನಲ್ಲಿ ದಿಗಂತ್ ಮಂಚಾಲೆ​, ಧನ್ಯಾ ರಾಮ್​​ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ನಟಿಸಿದ್ದು, ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ನಾಯಕ ನಟ ದೂದ್ ಪೇಡಾ ಖ್ಯಾತಿಯ ದಿಗಂತ್ ತಮ್ಮ ಸಿನಿಮಾ ಮತ್ತು ಕೆಲವು ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.

Powder actor Diganth Manchale
'ಪೌಡರ್​' ನಟ ದಿಗಂತ್ ಮಂಚಾಲೆ​​ ಸಂದರ್ಶನ (ETV Bharat)
author img

By ETV Bharat Entertainment Team

Published : Aug 22, 2024, 6:16 PM IST

'ಪೌಡರ್​' ನಟ ದಿಗಂತ್ ಮಂಚಾಲೆ​​ ಸಂದರ್ಶನ (ETV Bharat)

ಸ್ಯಾಂಡಲ್​ವುಡ್​ನಲ್ಲಿ ಫನ್​ ಆ್ಯಂಡ್​ ರೊಮ್ಯಾಂಟಿಂಕ್ ಸಿನಿಮಾಗಳನ್ನೇ ಮಾಡುತ್ತಾ ತಮ್ಮದೇ ಆದ ಸ್ಟಾರ್​​ಡಮ್ ಹೊಂದಿರುವ ನಟ ದೂದ್ ಪೇಡಾ ದಿಗಂತ್. ಗಾಳಿಪಟ 2 ಚಿತ್ರದ ಬಳಿಕ ದಿಗಂತ್ ಮಂಚಾಲೆ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಪೌಡರ್'. ಸದ್ಯ ಟ್ರೇಲರ್​​ನಿಂದ ಕನ್ನಡ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ 'ಪೌಡರ್' ನಟ ದಿಗಂತ್ ಅವರಿಗೆ ಮತ್ತಷ್ಟು ಸ್ಟಾರ್ ವ್ಯಾಲ್ಯೂ ತಂದುಕೊಡುವ ಲಕ್ಷಣಗಳಿವೆ. ಪೌಡರ್ ಸಿನಿಮಾ ಜಪಿಸುತ್ತಿರುವ ಇವರು ತಮ್ಮ ಸಿನಿಮಾ ಮತ್ತು ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ತಿಳಿಸಿದ್ದಾರೆ.

ಒಂದು ಕಾಲದಲ್ಲಿ ದಿಗಂತ್​​ ಅವರಿಗೆ ಸಿಕ್ಕಾಪಟ್ಟೆ ಹೆಣ್ಮಕ್ಕಳು ಫ್ಯಾನ್ಸ್ ಇದ್ರು ಎಂಬ ಮಾತು ಎದುರಾಗುತ್ತಿದ್ದಂತೆ, ''ಈಗಿಲ್ಲ, ನೀವು ಕಣ್ಣು ಹಾಕಿರೋದೇ ಅದಕ್ಕೆ ಕಾರಣ'' ಎಂದು ಹಾಸ್ಯಚಟಾಕಿ ಹಾರಿಸಿದರು. ನಂತರ, ಸಿನಿಮಾ ಪೌಡರ್ ಒಂದರ ಸುತ್ತುವ ಕಥೆ. ಸಖತ್ ಥ್ರಿಲ್ಲಿಂಗ್ ಆಗಿದೆ. ಈ ಸಿನಿಮಾದ ಕಥೆಗಾರ ದೀಪಕ್ ಅವರು ಈ ಪಾತ್ರಕ್ಕೆ ದಿಗಂತ್ ಚೆನ್ನಾಗಿ ಸೂಟ್ ಆಗ್ತಾರೆಂದು ತಂಡಕ್ಕೆ ಸಲಹೆ ಕೊಟ್ಟಿದ್ದರು. ಆಗ ಕೆಆರ್​​ಜಿ ಸಂಸ್ಥೆಯ ಕಾರ್ತಿಕ್​ ಗೌಡ ಹಾಗೂ ಯೋಗಿ ಒಂದು ಕಥೆ ಬಗ್ಗೆ ಹೇಳಿದ್ದು, ನಾನು ಒಪ್ಪಿಕೊಂಡೆ. ಇದೊಂದು ಪಕ್ಕಾ ಔಟ್ ಆ್ಯಂಡ್ ಔಟ್ ಕಾಮಿಡಿ. ರಂಗಾಯಣ ರಘು, ರವಿಶಂಕರ್ ಗೌಡ, ಗೋಪಾಲ ಕೃಷ್ಣ ದೇಶಪಾಂಡೆ, ಅನಿರುದ್ಧ್ ಆಚಾರ್ಯ, ನಾಗಭೂಷಣ್ ಅವರಂತಹ ಕಾಮಿಡಿ ಸ್ಟಾರ್​​ಗಳ ಜೊತೆ ಅಭಿನಯಿಸಿರುವ ಖುಷಿ ಇದೆ" ಎಂದು ತಿಳಿಸಿದರು.

"ಪೌಡರ್ ಅಂದಾಕ್ಷಣ ನನಗೆ ನಾನು ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್​​ಗೆ ಹೋದಾಗ ಯಾವುದೋ ಒಂದು ಬ್ರ್ಯಾಂಡೆಂಡ್ ಪೌಡರ್ ಹಾಕಿಕೊಂಡ ದಿನಗಳು ನೆನಪಾಗುತ್ತವೆ. ಅಪ್ಪನ ಬಳಿ ಪೌಡರ್ ಬೇಕೆಂದು ಕೇಳಿದಾಗ ಈ ವಯಸ್ಸಿಗೆ ನಿನಗೆ ಯಾಕೋ ಬೇಕು ಪೌಡರ್? ಎಂದು ಬೈದಿದ್ದರು. ನಂತರ, ಅವರಿಗೆ ಗೊತ್ತಿಲ್ಲದಂತೆ ಪೌಡರ್ ತೆಗೆದುಕೊಂಡು ಶರ್ಟ್ ಮೇಲೆ ಹಾಗೂ ಕತ್ತಿಗೆ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ" ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

"ಹೆಚ್ಚಾಗಿ ರೊಮ್ಯಾಂಟಿಂಕ್ ಕಾಮಿಡಿ ಸಿನಿಮಾಗಳಲ್ಲಿ ನನ್ನನ್ನು ಜನರು ಇಷ್ಟಪಟ್ಟಿದ್ದಾರೆ. ನಾನು ಅದೇ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದ್ರೆ ಲವರ್ ಬಾಯ್ ಜೊತೆಗೆ ಕಾಮಿಡಿ ಮಾಡೋದು ಚಾಲೆಂಜಿಂಗ್ ಆಗಿರುತ್ತದೆ" ಅಂತಾರೆ ದಿಗಂತ್.

"ಚಿತ್ರದಲ್ಲಿ ನಟಿಸಿರುವ ಧನ್ಯಾ ಬಗ್ಗೆ ಹೇಳಬೇಕಂದ್ರೆ ಈ ಹಿಂದೆ 'ಜಡ್ಜ್​​ಮೆಂಡ್' ಚಿತ್ರದಲ್ಲಿ ನಮ್ಮಿಬ್ಬರ ಸ್ನೇಹ ಶುರುವಾಯಿತು. ಆವಾಗ್ಲೇ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿತ್ತು. ಅದೇ ರೀತಿ ಪೌಡರ್ ಚಿತ್ರದಲ್ಲೂ ಧನ್ಯಾ ನೋಡಿ ನಾನು ಚಿಕ್ಕ ಮಕ್ಕಳಂತೆ ಅಭಿನಯಿಸಿದ್ದೇನೆ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ನಮ್ಮ ಕಡೆಯಿಂದ ಬಹಳ ಚೆನ್ನಾಗಿ ಅಭಿನಯ ಮಾಡಿಸಿದ್ದಾರೆ. ಧನ್ಯಾ ಕೂಡ ದೊಡ್ಡ ಸ್ಟಾರ್ ಕುಟುಂಬದಿಂದ ಬಂದಿದ್ದು, ಉತ್ತಮವಾಗಿ ಅಭಿನಯಿಸಿದ್ದಾರೆ" ಎಂದು ತಿಳಿಸಿದರು.

"ಸಿನಿಮಾದ ಕ್ಲೈಮಾಕ್ಸ್ ಶೂಟಿಂಗ್​​​ನಲ್ಲಿ ನಾವೆಲ್ಲರೂ ರಿಸ್ಕ್ ತೆಗೆದುಕೊಂಡು ಅಭಿನಯಿಸಿದೆವು. ಕ್ಲೈಮ್ಯಾಕ್ಸ್ ಸೀನ್ ಟೈಮಲ್ಲಿ ಕಣ್ಣಿಗೆ ಕಾಣದ ಹಾಗೇ ಸ್ಲೋಕ್ ಹಾಕಿದ್ರು. ಶೂಟಿಂಗ್ ಮುಗಿದು ಎರಡು ದಿನಗಳ ಬಳಿಕ ಕಿವಿ ಮೂಗಿನಲ್ಲಿ ಏನೋ ಬರಲು ಶುರುವಾಯಿತ್ತು. ಆದ್ರೆ ಯಾರಿಗೂ ಸಮಸ್ಯೆ ಆಗಲಿಲ್ಲ. ಶೂಟಿಂಗ್​​ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ" ಎಂದು ತಿಳಿಸಿದರು.

"ಕೆಆರ್​​​ಜಿ ಸ್ಟುಡಿಯೋಸ್​​​ ಬಹಳ ಅದ್ಧೂರಿಯಾಗಿ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಗೆದ್ದಾಗ ಕೆಆರ್​ಜಿ ಅವರು ಮತ್ತಷ್ಟು ಒಳ್ಳೆ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತದೆ. ಒಳ್ಳೆ ಸ್ಕ್ರಿಪ್ಟ್​​​ ಬಂದರೆ ನಾನು ನನ್ನ ಪತ್ನಿ ಐಂದ್ರಿತಾ ಒಟ್ಟಿಗೆ ಸಿನಿಮಾ ಮಾಡುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: 'ಕಾಂತಾರ ಪ್ರೀಕ್ವೆಲ್'​ಗಾಗಿ ಕಳರಿಪಯಟ್ಟು ಕಲಿತ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ - Rishab Shetty Kalaripayattu

"ಶೂಟಿಂಗ್​ ಇಲ್ಲದ ಸಂದರ್ಭ ಟ್ರಾವೆಲಿಂಗ್​​ ಮಾಡೋದಂದ್ರೆ ಬಹಳ ಇಷ್ಟ. ಹಾಗೇ ಶ್ವಾನಗಳಂದ್ರೂ ನನಗಿಷ್ಟ. ನಮ್ಮ ಮನೆಯಲ್ಲೀಗ ಮೂರು ನಾಯಿಗಳಿವೆ. ಬಾಕ್ಸರ್ ನನ್ನ ಫೇವರೆಟ್. ನಾನು ಹೊರಗಡೆ ಹೋದಾಗಲೆಲ್ಲ ಬಾಕ್ಸರ್ ನನ್ನೊಂದಿಗೆ ಬರುತ್ತಾನೆ" ಎಂದು ತಿಳಿಸಿದರು.

ಇದನ್ನೂ ಓದಿ: 69ನೇ ಜನ್ಮದಿನದ ಸಂಭ್ರಮದಲ್ಲಿ ಚಿರಂಜೀವಿ: ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಸೂಪರ್​ಸ್ಟಾರ್ - ವಿಡಿಯೋ - Mega Star Birthday

"ನನಗೆ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ಇದೆ. ರಕ್ಷಿತ್ ನನ್ನ ಫ್ರೆಂಡ್. ನನಗೆ ಹಾಗೂ ರಕ್ಷಿತ್​​ಗೆ ಸೂಟ್ ಆಗುವ ಕಥೆ ಬಂದರೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುತ್ತೇನೆ" ಎಂದರು.

ಟ್ರೇಲರ್​ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಈ ಪೌಡರ್​​ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿದ್ದು, ಕಾರ್ತಿಕ್ ಗೌಡ, ಯೋಗಿ ಜಿ.ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ದಿಗಂತ್​​ ನಟನೆಯ ಪೌಡರ್​​ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಲಿದೆ ಮತ್ತು ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ನಾಳೆ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.