ETV Bharat / entertainment

ಥ್ಯಾಂಕ್ಸ್‌ ಲೆಟರ್‌ ಜೊತೆಗೆ ಗಿಫ್ಟ್‌ ಬಾಕ್ಸ್‌ ಕಳುಹಿಸಿಕೊಟ್ಟ ವಿರಾಟ್,​ ಅನುಷ್ಕಾ!: ಯಾರಿಗೆ? ಕಾರಣ ಗೊತ್ತಾ? - Virat Anushka Sent Gifts - VIRAT ANUSHKA SENT GIFTS

ವಿರುಷ್ಕಾ ಜೋಡಿ ಪಾಪರಾಜಿಗಳಿಗೆ ಧನ್ಯವಾದ ಅರ್ಪಿಸಿ, ಉಡುಗೊರೆಗಳನ್ನು ಕಳುಹಿಸಿದ್ದಾರೆ.

Virat Anushka
ವಿರಾಟ್​ ಅನುಷ್ಕಾ (Anushka Sharma Instagram)
author img

By ETV Bharat Karnataka Team

Published : May 14, 2024, 11:38 AM IST

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್​ ವಿರಾಟ್​ ಕೊಹ್ಲಿ ಹಾಗೂ ಸ್ಟಾರ್ ನಟಿ ಅನುಷ್ಕಾ ಶರ್ಮಾ ಪವರ್​​ ಫುಲ್​ ಕಪಲ್​​. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಇಬ್ಬರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ವಿರುಷ್ಕಾ ಜೋಡಿ ಪಾಪರಾಜಿಗಳಿಗೆ (ಸೆಲೆಬ್ರಿಟಿಗಳ ಫೋಟೋ-ವಿಡಿಯೋ ಕ್ಲಿಕ್ಕಿಸಿ ಸೋಷಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳುವವರು) ಧನ್ಯವಾದ ಅರ್ಪಿಸಿ, ಉಡುಗೊರೆಗಳನ್ನು ಕಳುಹಿಸಿದ್ದಾರೆ.

'ವಿರುಷ್ಕಾ' ಎಂದೇ ಖ್ಯಾತರಾದ ಈ ಜನಪ್ರಿಯ ದಂಪತಿ ತಮ್ಮ ಮಕ್ಕಳ ಖಾಸಗಿತನದ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಇತ್ತೀಚೆಗಷ್ಟೇ ದಂಪತಿ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದು, ಮಗನಿಗೆ ಅಕಾಯ್​​​ ಎಂದು ಹೆಸರಿಟ್ಟಿದ್ದಾರೆ. ಗರ್ಭಾವಸ್ಥೆ ವಿಚಾರವನ್ನು ರಹಸ್ಯವಾಗಿಡಲು ಮಾಧ್ಯಮಗಳು ಮತ್ತು ಪಾಪರಾಜಿಗಳಲ್ಲಿ ದಂಪತಿ ಮನವಿ ಮಾಡಿಕೊಂಡಿದ್ದರು. ಮಾಧ್ಯಮ ಮತ್ತು ಪಾಪರಾಜಿಗಳ ಈ ವಿಶೇಷ ಸಹಕಾರಕ್ಕಾಗಿ, ದಂಪತಿ ಅವರಿಗೆ ಧನ್ಯವಾದ ಪತ್ರದೊಂದಿಗೆ ದೊಡ್ಡ ಗಿಫ್ಟ್​​ ಬಾಕ್ಸ್ ಕಳುಹಿಸಿದ್ದಾರೆ. ಇದರ ಒಂದು ನೋಟ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.

ಪಾಪರಾಜಿ ಸೋಷಿಯಲ್​ ಮೀಡಿಯಾ ಅಕೌಂಟ್​ನಿಂದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯ ಈ ವಿಶೇಷ ಸತ್ಕಾರದ ವಿಡಿಯೋ ಶೇರ್ ಆಗಿದೆ. ಕೃತಜ್ಞತಾ ಉಡುಗೊರೆಯ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸಖತ್​​ ಸದ್ದು ಮಾಡುತ್ತಿದೆ. ಕ್ಲಿಪ್‌ನಲ್ಲಿ ಕೆಲ ಗಿಫ್ಟ್​​ ಐಟಂಗಳೊಂದಿಗೆ ಧನ್ಯವಾದ ಪತ್ರವನ್ನೂ ಸಹ ಕಾಣಬಹುದು.

ವಿಡಿಯೋ ಧನ್ಯವಾದ ಪತ್ರದೊಂದಿಗೆ ಪ್ರಾರಂಭವಾಗುತ್ತದೆ. 'ನಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ಯಾವಾಗಲೂ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿಯಿಂದ, ಅನುಷ್ಕಾ ಮತ್ತು ವಿರಾಟ್' ಎಂದು ಅದರಲ್ಲಿ ಬರೆಯಲಾಗಿದೆ. ನಂತರ, ಸುಂದರ ಗಿಫ್ಟ್​ ಬಾಕ್ಸ್ ತೋರಿಸಲಾಗಿದೆ. ಅದರಲ್ಲಿ ಕೆಲ ಗ್ಯಾಜೆಟ್ಸ್, ಬ್ಯಾಗ್‌ನೊಂದಿಗೆ ಬಾಟಲ್ ಇದೆ. ಈ ಉಡುಗೊರೆಗಾಗಿ ಪಾಪರಾಜಿಗಳು ಸ್ಟಾರ್ ದಂಪತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: 'ರಾಮಾಯಣ' ಚಿತ್ರದ ಬಜೆಟ್​ ₹800 ಕೋಟಿ: ಬಿಡುಗಡೆ​​ ಯಾವಾಗ ಗೊತ್ತಾ? - Ramanaya

ಫೆಬ್ರವರಿ 15ರಂದು ವಿರುಷ್ಕಾ ಪುತ್ರ ಅಕಾಯ್​​ ಜನಿಸಿದ್ದಾನೆ. ಕೆಲ ಸಮಯ ಅನುಷ್ಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ವಿರಾಟ್ ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಸ್ಟೇಡಿಯಂನಿಂದ ದಂಪತಿಯ ಅನೇಕ ಫೋಟೋ ವಿಡಿಯೋಗಳು ಸೊಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅನುಷ್ಕಾ ಉಪಸ್ಥಿತಿಯನ್ನು ಲೇಡಿ ಲಕ್​ ಎಂದು ವರ್ಣಿಸಿದ್ದಾರೆ.

ಇದನ್ನೂ ಓದಿ: ಅಕ್ಷಯ್​​-ಪ್ರಿಯದರ್ಶನ್ ಕಾಂಬೋದಲ್ಲಿ ಹೊಸ ಸಿನಿಮಾ: ಈ ಮೂವರಲ್ಲಿ ಯಾರು ಹೀರೋಯಿನ್? - Akshay Kumar Movie Updates

2013ರ ಶಾಂಪೂ ಜಾಹೀರಾತಿನ ಶೂಟಿಂಗ್​ ಸಂದರ್ಭದಲ್ಲಿ ವಿರಾಟ್​ ಅನುಷ್ಕಾ ಭೇಟಿಯಾದರು. ಅಲ್ಲಿಂದ ಸುಂದರ ಪ್ರೇಮ್​ಕಹಾನಿ ಶುರುವಾಯಿತು. ವೈಯಕ್ತಿಕ ವಿಚಾರಗಳ ಬಗ್ಗೆ ಮೌನ ಕಾಪಾಡಿಕೊಂಡರು. ಅಂತಿಮವಾಗಿ 2017ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಸದ್ಯ ಪುತ್ರಿ ವಾಮಿಕಾ ಹಾಗೂ ಪುತ್ರ ಅಕಾಯ್​ ಪೋಷಕರು. 2018ರ ಡಿಸೆಂಬರ್​ನಲ್ಲಿ ತೆರೆಕಂಡ 'ಝೀರೋ' ನಟಿಯ ಕೊನೆಯ ಸಿನಿಮಾ. ಮುಂದಿನ ಚಿತ್ರ 'ಚಕ್ಡಾ ಎಕ್ಸ್ಪ್ರೆಸ್' ಬಿಡುಗಡೆಗೆ ತಯಾರಿ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.