'ದ ರೂಲರ್ಸ್', ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹುಟ್ಟಿಸಿರೋ ಚಿತ್ರ. ಅಂಬೇಡ್ಕರ್ ತತ್ವಗಳನ್ನು ಅನುಸರಿಸುವ ಕೋಲಾರದ ಡಾ.ಕೆ.ಎಮ್ ಸಂದೇಶ್ ಕಥೆ, ಚಿತ್ರಕಥೆ ಬರೆದಿದ್ದು, ಯುವ ಪ್ರತಿಭೆಗಳಾದ ವಿಶಾಲ್, ರಿತಿಕಾ ಗೌಡ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ 'ಜೈ ಭೀಮ್' ಎಂಬ ಹಾಡೊಂದು ಅನಾವರಣಗೊಂಡಿದೆ.
![The Rulers](https://etvbharatimages.akamaized.net/etvbharat/prod-images/30-04-2024/21350543_sernge.jpg)
ಕರುಣ್ ಸಂಗೀತ ಸಂಯೋಜನೆ, ಕವಿರತ್ನ ಡಾ.ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿರುವ ಹಾಡಿಗೆ ಕೈಲಾಶ್ ಖೇರ್ ದನಿಯಾಗಿದ್ದಾರೆ. ಹಾಡು ನೊಂದವರ ಪರ ದನಿಯಾಗುವಂತಿದೆ. ಗಟ್ಟಿ ಸಾಹಿತ್ಯ, ಪವರ್ಫುಲ್ ದನಿ ಇರೋ ಈ ಹಾಡು ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿದ್ದು, ಸದ್ಯ ಟ್ರೆಂಡಿಂಗ್ನಲ್ಲಿದೆ.
- " class="align-text-top noRightClick twitterSection" data="">
'ಪವರ್ ಆಫ್ ಕಾನ್ಸ್ಟಿಟ್ಯೂಷನ್' ಅನ್ನೋ ಅಡಿ ಬರಹವಿರುವ 'ದ ರೂಲರ್ಸ್' ನೈಜ ಘಟನೆಗಳನ್ನಾಧರಿಸಿರುವ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ, ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ. ಸಂವಿಧಾನದ ಶಕ್ತಿ ಎಂಥದ್ದು, ಅದು ಭಾರತೀಯ ಪ್ರಜೆಗಳಿಗೆ ಕೊಟ್ಟಿರೋ ಶಕ್ತಿ ಎಂಥದ್ದು ಅನ್ನೋ ವಿಚಾರವನ್ನು ಮೂಲವಾಗಿಸಿಕೊಂಡು ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
![The Rulers](https://etvbharatimages.akamaized.net/etvbharat/prod-images/30-04-2024/kn-bng-01-kolaradalli-nadeda-kathieye-therollers-cinema-7204735_30042024113933_3004f_1714457373_676.jpg)
ಇಲ್ಲಿ ಮೇಲು ಕೀಳು ಅನ್ನೋ ಸಮುದಾಯಗಳ ಸಂಘರ್ಷದಿಂದ ಮರೆಯಾದ ಮಾನವೀಯತೆಯನ್ನು ಒಂದೆಡೆ ಬಿಂಬಿಸಿದ್ರೆ, ಮತ್ತೊಂದೆಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನು ಪ್ರತಿಪಾದಿಸಲಾಗಿದೆ. 5ಜಿಯಂತಹ ಆಧುನಿಕ ಜಮಾನದಲ್ಲೂ ಜಾತಿ ಅನ್ನೋ ಪಿಡುಗು ಎಷ್ಟರ ಮಟ್ಟಿಗಿದೆ, ಅದರ ಪರಿಣಾಮವೇನು ಅನ್ನೋದನ್ನು ಈ ಚಿತ್ರದ ಮೂಲಕ ಹೇಳೋ ಪ್ರಯತ್ನ ಮಾಡುತ್ತೇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ.
ದ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರೋದು ಕೋಲಾರದ ಡಾ.ಕೆ.ಎಮ್ ಸಂದೇಶ್. ಡಾ.ಬಿ.ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು, ವರ್ಷಾನುವರ್ಷಗಳಿಂದ ಸಾಮಾಜಿಕ ಸಮಾನತೆಯಾಗಿ ಹೋರಾಟ ಮಾಡುತ್ತಿರುವ ಇವರ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.
ಇದನ್ನೂ ಓದಿ: ಶುಕ್ರವಾರ 'ಕಾಂಗರೂ' ಬಿಡುಗಡೆ: ಪ್ರೇಕ್ಷಕರೆದುರು ಬರಲು ಸಜ್ಜಾದ ಆದಿತ್ಯ, ರಂಜನಿ ರಾಘವನ್ - Kangaroo
ಎಂ.ಎನ್.ಎಂ ಮೂವೀಸ್ ಬ್ಯಾನರ್ ಅಡಿ ಅಶ್ವಥ್ ಬಳಗೆರೆ ನಿರ್ಮಾಣ ಮಾಡಿದ್ದಾರೆ. ಉದಯ್ ಭಾಸ್ಕರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆಗಳಾದ ವಿಶಾಲ್, ರಿತಿಕಾ ಗೌಡ, ಪುನೀತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಖುದ್ದು ಸಂದೇಶ್ ಅವರೇ ತಮ್ಮ ನೈಜ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ದ ರೂಲರ್ಸ್ ಟೀಸರ್ ಮತ್ತು ಟ್ರೇಲರ್ ಜನಮನ್ನಣೆ ಗಳಿಸಿದ್ದು, ಜೈ ಭೀಮ್ ಹಾಡು ವಿಶೇಷವಾಗಿ ಗಮನ ಸೆಳೆದಿದೆ. ಶೀಘ್ರದಲ್ಲೇ 'ದ ರೂಲರ್ಸ್' ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.