ETV Bharat / entertainment

'ಲುಟ್ ಪುಟ್ ಗಯಾ' ಹಾಡಿದ ಅಲ್ಲು ಅರ್ಜುನ್​​ ಪುತ್ರ: ನನ್ನ ಮಕ್ಕಳಿಂದ 'ಶ್ರೀವಲ್ಲಿ' ಹಾಡಿಸುತ್ತೇನೆಂದ ಶಾರುಖ್​​ - Allu Arjun

'ಡಂಕಿ'ಯ ಲುಟ್ ಪಟ್ ಗಯಾ ಹಾಡನ್ನು ಅಲ್ಲು ಅರ್ಜುನ್ ಅವರ ಪುತ್ರ ಅಲ್ಲು ಅಯಾನ್​ ಹಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

SRK
ಶಾರುಖ್​​ ಖಾನ್
author img

By ETV Bharat Karnataka Team

Published : Feb 25, 2024, 8:01 PM IST

ಬಾಲಿವುಡ್​ ಕಿಂಗ್​​ ಶಾರುಖ್​​ ಖಾನ್​ ಅವರ ಡಂಕಿ ಸಿನಿಮಾ 2023ರ ಕೊನೆಯಲ್ಲಿ ತೆರೆಕಂಡು ಯಶಸ್ವಿ ಆಗಿದೆ. ದಕ್ಷಿಣ ಚಿತ್ರರಂಗದ ಜನಪ್ರಿಯ, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅವರ ಪುತ್ರ ಅಲ್ಲು ಅಯಾನ್ 'ಡಂಕಿ'ಯ ಲುಟ್ ಪುಟ್ ಗಯಾ ಹಾಡನ್ನು ಹಾಡಿ, ಸೋಷಿಯಲ್​​ ಮೀಡಿಯಾದಲ್ಲಿ ಸದ್ದು ಮಾಡಿದ್ದರು. ಇತ್ತೀಚೆಗೆ ಅಲ್ಲು ಅಯಾನ್ ವಿಡಿಯೋ ವೈರಲ್​ ಆಗಿ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿತ್ತು.

ಇದೀಗ ಸ್ವತಃ ಶಾರುಖ್​ ಅವರೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ಅಲ್ಲು ಅರ್ಜುನ್ ಮಗನನ್ನು ಶ್ಲಾಘಿಸಿದ್ದಾರೆ. ಅಯಾನ್ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಪುಷ್ಪ ಚಿತ್ರದ ಅಲ್ಲು ಅರ್ಜುನ್ ಅವರ ಹಿಟ್ ಸಾಂಗ್ ಶ್ರೀವಲ್ಲಿ ಹಾಡನ್ನು ಅಭ್ಯಾಸ ಮಾಡಲು ನನ್ನ ಮಕ್ಕಳನ್ನು ಪ್ರೋತ್ಸಾಹಿಸುತ್ತೇನೆಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜ್​ಕುಮಾರ್​ ಹಿರಾನಿ ನಿರ್ದೇಶನದ ಮತ್ತು ಎಸ್​ಆರ್​ಕೆ ಅಭಿನಯದ ಡಂಕಿ ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಯಿತು. ಈ ಚಿತ್ರ ಪ್ರೀತಮ್ ಅವರ ಸಂಗೀತವನ್ನು ಒಳಗೊಂಡಿತ್ತು. ಅರಿಜಿತ್ ಸಿಂಗ್ ಹಾಡಿದ ಜನಪ್ರಿಯ ಗೀತೆ 'ಲುಟ್ ಪುಟ್ ಗಯಾ'ದ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದರು.

ನಿನ್ನೆ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ವಿಡಿಯೋವೊಂದರಲ್ಲಿ, ಅಲ್ಲು ಅಯಾನ್ ಲುಟ್ ಪುಟ್ ಗಯಾ ಹಾಡನ್ನು ಬಹಳ ಮೋಜು ಮಸ್ತಿಯಿಂದ ಹಾಡಿದ್ದಾನೆ. ಶಾರುಖ್ ಖಾನ್ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ಅಯಾನ್​ಗೆ ಧನ್ಯವಾದ ತಿಳಿಸಿದ್ದಾರೆ. ಪುಟ್ಟ ಬಾಲಕನ ಪ್ರತಿಭೆಯನ್ನು ಗುಣಗಾನ ಮಾಡಿದರು. "ಫ್ಲವರ್ ಮತ್ತು ಫೈಯರ್" ಎರಡರ ಸಂಯೋಜನೆ ಎಂದು ಕೂಡ ತಮ್ಮ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಅವರ ಸೂಪರ್​ ಹಿಟ್​ ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡನ್ನು ತಮ್ಮ ಮಕ್ಕಳಿಂದ ಹಾಡಿಸಲು ಪ್ರಯತ್ನಿಸುವುದಾಗಿ ಹಾಸ್ಯಮಯವಾಗಿ ತಿಳಿಸಿದರು.

ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಎಸ್​ಆರ್​ಕೆಯ 'ಕಲ್ ಹೋ ನಾ ಹೋ' ಟೈಟಲ್​ ಟ್ರ್ಯಾಕ್​​​ ನುಡಿಸಿದ ವಿದೇಶಿಗ: ವಿಡಿಯೋ

ಶಾರುಖ್ ಅವರ ಟ್ವೀಟ್‌ಗೆ ಅಲ್ಲು ಅರ್ಜುನ್ ಕೃತಜ್ಞತೆಯಿಂದ ವ್ಯಕ್ತಪಡಿಸಿದ್ದಾರೆ. ಸಿಹಿ ಸಂದೇಶಕ್ಕಾಗಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. "ಶಾರುಖ್ ಜಿ.. ಸೋ ಸ್ವೀಟ್​ ಆಫ್​ ಯೂ. ಲಾಟ್ಸ್ ಆಫ್​ ಲವ್''​ ಎಂದು ಬರೆದುಕೊಂಡಿದ್ದಾರೆ. ಡಂಕಿ ಇತ್ತೀಚೆಗೆ ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಪ್ರೀಮಿಯರ್ ಆಗಿದೆ. ಪಠಾಣ್​ ಮತ್ತು ಜವಾನ್ ನಂತರ ಶಾರುಖ್ ಖಾನ್ ಅವರ 2023ರ ಮೂರನೇ ಹಿಟ್​ ಸಿನಿಮಾ. ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಹಲವರು ಕಾಣಿಸಿಕೊಂಡಿರುವ ಈ ಚಿತ್ರ ಬಾಕ್ಸ್​​ ಆಫೀಸ್​ನಲ್ಲಿ ಯಶಸ್ಸು ಕಂಡಿದೆ. ಶಾರುಖ್ ಖಾನ್ ಅವರ ಮುಂದಿನ ಸಿನಿಮಾ ಪಠಾಣ್​​ 2. ಡಿಸೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಅಲ್ಲು ಅರ್ಜುನ್ ತಮ್ಮ ಪುಷ್ಪ 2 ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: 100 ಕೋಟಿ ಆಫರ್​ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.