ETV Bharat / entertainment

ಜೂ.23ಕ್ಕೆ ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್ ರಿಜಿಸ್ಟರ್ ಮ್ಯಾರೇಜ್ - Sonakshi Zaheer Registered Marriage

author img

By ETV Bharat Karnataka Team

Published : Jun 12, 2024, 8:00 PM IST

ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಜೂನ್ 23ರಂದು ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆಂದು ವರದಿಯಾಗಿದೆ.

Sonakshi Sinha and Zaheer Iqbal
ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್ (ANI/ETV Bharat)

ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ರತಾನ್ಸಿ ತಮ್ಮ ಮದುವೆ ಬಗ್ಗೆ ಮೌನ ಮುಂದುವರಿಸಿದ್ದಾರೆ. ಆದ್ರೆ ಈ ವಿಚಾರದ ಸುತ್ತಲಿನ ಅಂತೆ-ಕಂತೆಗಳು ಜೋರಾಗೆ ಕೇಳಿಬರುತ್ತಿವೆ. ಲೇಟೆಸ್ಟ್ ಮಾಹಿತಿ ಪ್ರಕಾರ, ಜೂನ್ 23 ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್​​ ಆಗುವ ಸಾಧ್ಯತೆ ಹೆಚ್ಚಿದೆ. ಮದುವೆ ನಂತರ, ಆಪ್ತರಿಗಾಗಿ ಸಂಭ್ರಮಾಚರಣೆ ಇಟ್ಟುಕೊಳ್ಳುವ ಸಾಧ್ಯತೆಗಳಿವೆ. ಮದುವೆಗೆ ಸಂಬಂಧಿಸಿದ ಈ ಎಲ್ಲದಕ್ಕೂ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ವರದಿಗಳ ಪ್ರಕಾರ, ಸೋನಾಕ್ಷಿ ಮತ್ತು ಜಹೀರ್ ಅದ್ಧೂರಿ ಮದುವೆಗೆ ಬದಲಾಗಿ ರಿಜಿಸ್ಟರ್ ಮ್ಯಾರೇಜ್‌ಗೆ ಮುಂದಾಗಿದ್ದಾರೆ. ಬಳಿಕ ಈ ಜೋಡಿ ಜೂನ್ 23ರಂದು ತಮ್ಮವರಿಗಾಗಿ ಸಂಜೆ ಪಾರ್ಟಿ ಆಯೋಜಿಸಲಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಬಗ್ಗೆ ಉಲ್ಲೇಖಿಸಲಾಗಿಲ್ಲ, ಅತಿಥಿಗಳನ್ನು ಕೇವಲ ಪಾರ್ಟಿಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಹಾಗಾಗಿ ಮದುವೆ ಶಾಸ್ತ್ರಗಳು ಕೇವಲ ಕುಟುಂಬಸ್ಥರಿಗೆ ಸೀಮಿತವಾಗಿರಬಹುದು. ಅಗತ್ಯ ಶಾಸ್ತ್ರ ನೆರವೇರಿಸಿ ನಂತರ ರಿಜಿಸ್ಟರ್ ಮ್ಯಾರೇಜ್​​ ಆಗುವ ಸಾಧ್ಯತೆಗಳಿವೆ.

ಸಿನ್ಹಾ ಮತ್ತು ರತಾನ್ಸಿ ಕುಟುಂಬಸ್ಥರಲ್ಲದೇ, ಬಾಲಿವುಡ್​ನ ಅನೇಕರು ಮದುವೆ ನಂತರದ ಈ ಸೆಲೆಬ್ರೇಶನ್​ನಲ್ಲಿ ಭಾಗಿಯಾಗಲಿದ್ದಾರೆ. ಆಯುಷ್ ಶರ್ಮಾ, ಹುಮಾ ಖುರೇಷಿ, ವರುಣ್ ಶರ್ಮಾ ಸೇರಿದಂತೆ ಗೆಳೆಯರು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ. ಅಲ್ಲದೇ ಸೋನಾಕ್ಷಿ ನಟನೆಯ 'ಹೀರಾಮಂಡಿ' ಟೀಮ್​​ ಕೂಡ ಗೆಸ್ಟ್ ಲಿಸ್ಟ್​​ನಲ್ಲಿದ್ದಾರೆ. ಚಿತ್ರೀಕರಣ ಮತ್ತು ಪ್ರೋಮೋ, ಪ್ರಮೋಶನ್​ ಸಂದರ್ಭ ಚಿತ್ರತಂಡದೊಂದಿಗಿನ ತಮ್ಮ ಬಾಂಧವ್ಯವನ್ನು ಸೋನಾಕ್ಷಿ ಪ್ರದರ್ಶಿಸಿದ್ದಾರೆ. ಅದರಂತೆ, ಸಂಜಯ್ ಲೀಲಾ ಬನ್ಸಾಲಿ, ಫರ್ದೀನ್ ಖಾನ್, ತಾಹಾ ಶಾ ಬಾದುಶಾ, ಅದಿತಿ ರಾವ್ ಹೈದರಿ, ಶರ್ಮಿನ್ ಸೆಹಗಲ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿದೆ.

ಇನ್ನೂ ಓದಿ: ಜೂನ್ ಕೊನೆಗೆ ಗೆಳೆಯ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ವಿವಾಹ - Sonakshi Sinha

ದಕ್ಷಿಣ ಮುಂಬೈನ ಬ್ಯಾಸ್ಟಿಯನ್‌ನಲ್ಲಿ ಪಾರ್ಟಿ ನಡೆಯಲಿದೆ ಎಂದು ಹೇಳಲಾಗಿದೆ. ಜೂನ್ 22 ರಂದು ಅವರ ಜುಹು ನಿವಾಸದಲ್ಲಿ ಕೆಲ ಆಚರಣೆಗಳು ನಡೆಯಲಿವೆ. ಜೂನ್ 23 ರಂದು ಬೆಳಗ್ಗೆ ವಿವಾಹ ನಡೆದು, ನಂತರ ಪಾರ್ಟಿಯಲ್ಲಿ ಎಲ್ಲರೂ ಸೇರಲಿದ್ದಾರೆ.

ಇದನ್ನೂ ಓದಿ: ಡಾಲಿಯ ಮನ ಮನ ಹಾಡಿಗೆ ಮನಸೋತ ಅಭಿಮಾನಿಗಳು: 'ಕೋಟಿ' ಬಿಡುಗಡೆಗೆ ಇನ್ನೊಂದೇ ದಿನ ಬಾಕಿ - Kotee Movie

ಸೋನಾಕ್ಷಿ ಮತ್ತು ಇಕ್ಬಾಲ್ 2022ರಲ್ಲಿ ತೆರೆಕಂಡ'ಡಬಲ್ ಎಕ್ಸ್‌ಎಲ್‌' ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಆನ್​​ಸ್ಕ್ರೀನ್​ನಿಂದ ಇದೀಗ ಆಫ್​​ಸ್ಕ್ರೀನ್​ನಲ್ಲೂ ಜೀವನ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.​​​ ಈ ತಾರಾ ಜೋಡಿ ಈವರೆಗೆ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ದೃಢೀಕರಿಸಿಲ್ಲ. ಆದರೆ, ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ತುಪ್ಪ ಸುರಿದಿದ್ದಾರೆ. ಈಗಲೂ ಮದುವೆ ಬಗ್ಗೆ ಹಲವು ಅಂತೆಕಂತೆಗಳು ಹುಟ್ಟಿಕೊಂಡಿದ್ದು, ಜೋಡಿ ಮಾತ್ರ ಮೌನ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.