ಹೈದರಾಬಾದ್: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರೊಂದಿಗೆ ಜೂನ್ 23ರಂದು ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಈ ಸಂಭ್ರಮದ ದಿನ ಇದೀಗ ಬಿಟೌನ್ನಲ್ಲಿ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೇ ಇವರಿಬ್ಬರ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಸೋನಾಕ್ಷಿ ಸಿನ್ಹಾ ಉತ್ತಮ ಸ್ನೇಹಿತರಾಗಿರುವ ರ್ಯಾಪರ್ ಯೋ ಯೋ ಸಿಂಗ್ ಅವರಿಗೆ ಶುಭಾಶಯವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಯೋ ಯೋ ಹನಿ ಸಿಂಗ್ ಮತ್ತು ಸೋನಾಕ್ಷಿ ಸಿನ್ಹಾ ಇಬ್ಬರು ಒಟ್ಟಿಗೆ 'ಎದೇಸಿ ಕಲಕರ್' ಮತ್ತು 'ಕಲಸ್ತಾರ್' ಎರಡು ಹಾಡಿನಲ್ಲಿ ಕೆಲಸ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಭಾವನಾತ್ಮಕವಾಗಿ ಹಂಚಿಕೊಂಡಿರುವ ಹನಿ ಸಿಂಗ್, 'ನಾನು ಗ್ಲೋರಿ ಅವರ ಮೊದಲ ಹಾಡಿನ ಶೂಟಿಂಗ್ಗೆ ಲಂಡನ್ನಲ್ಲಿದ್ದೇನೆ. ಆದರೆ, ನಾನು ನನ್ನ ಬೆಸ್ಟ್ ಫ್ರೆಂಡ್ ಸೋನಾಕ್ಷಿ ಸಿನ್ಹಾ ಮದುವೆಗೆ ತಪ್ಪದೇ ಬಂದೇ ಬರುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ನನಗೆ ಬೆಂಬಲವಾಗಿ ನಿಂತಿದ್ದು, ಅನೇಕ ಬಾರಿ ಸಹಾಯ ಮಾಡಿದ್ದಾರೆ. ಸೋನಾ ಮತ್ತು ಜಹೀರ್ ಅವರಂತ ಪವರ್ಫುಲ್ ಜೋಡಿಗಳಿಗೆ ಶುಭ ಹಾರೈಕೆಗಳು. ಬೋಲೆನಾಥ ನಿಮ್ಮನ್ನು ಆಶೀರ್ವದಿಸಲಿ' ಎಂದು ಬರೆದಿದ್ದಾರೆ.
ವರದಿ ಪ್ರಕಾರ, ಬಾಲಿವುಡ್ ಮತ್ತೊಂದು ಅದ್ಧೂರಿ ಮದುವೆಗೆ ಸಜ್ಜಾಗಿದ್ದು, ಈ ಸಮಾರಂಭದಲ್ಲಿ ಉದ್ಯಮದ ಅನೇಕ ತಾರೆಯರ ದಂಡು ಒಂದೆಡೆ ಸೇರಲಿದೆ. ಸಿನ್ಹಾ ಮತ್ತು ರತನ್ ಕುಟುಂಬದ ಆತ್ನೀಯ ಸ್ನೇಹಿತರು, ಜೋಡಿಗಳ ಸಹೋದ್ಯೋಗಿಗಳಾದ ಆಯುಷ್ ಶರ್ಮಾ, ಹುಮಾ ಖುರೇಷಿ ಮತ್ತು ವರುಣ್ ಶರ್ಮಾ ಸೇರಿದಂತೆ ಮತ್ತಷ್ಟು ಮಂದಿ ಹಾಜರಿರಲಿದ್ದಾರೆ. ಸೋನಾಕ್ಷಿ ನಟನೆಯ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ 'ಹೀರಾಮಂಡಿ' ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಆದಿತಿ ರಾವ್ ಹೈದರಿ, ಫರ್ದಿನ್ ಖಾನ್, ಮತ್ತಿತರರು ಮದುವೆ ಆಮಂತ್ರಣವನ್ನು ಪಡೆದಿದ್ದಾರೆ.
ಈ ನಡುವೆ ಮದುವೆ ಸಮಾರಂಭದ ಕುರಿತು ಅಪ್ಡೇಟ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ತಮ್ಮ ಜೀವನದ ಹೊಸ ಅಧ್ಯಯನ ಆರಂಭಿಸಲು ಮುಂದಾಗಿರುವ ಸೋನಾಕ್ಷಿ ಮತ್ತು ಜಹೀರ್ ಅವರಿಗೆ ಸ್ನೇಹಿತರು, ಹಿತೈಷಿಗಳು ಈಗಾಗಲೇ ಪ್ರೀತಿ ಮತ್ತು ಶುಭ ಹಾರೈಕೆ ತಿಳಿಸುತ್ತಿದ್ದಾರೆ.
ವರದಿಗಳ ಪ್ರಕಾರ, ಸೋನಾಕ್ಷಿ ಮತ್ತು ಜಹೀರ್ ಅದ್ಧೂರಿ ಮದುವೆಗೆ ಬದಲಾಗಿ ರಿಜಿಸ್ಟರ್ ಮ್ಯಾರೇಜ್‌ಗೆ ಮುಂದಾಗಿದ್ದಾರೆ. ಬಳಿಕ ಈ ಜೋಡಿ ಜೂನ್ 23ರಂದು ತಮ್ಮವರಿಗಾಗಿ ಸಂಜೆ ಪಾರ್ಟಿ ಆಯೋಜಿಸಲಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಬಗ್ಗೆ ಉಲ್ಲೇಖಿಸಲಾಗಿಲ್ಲ. ಅತಿಥಿಗಳನ್ನು ಕೇವಲ ಆರತಕ್ಷತೆಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಹಾಗಾಗಿ ಮದುವೆ ಶಾಸ್ತ್ರಗಳು ಕೇವಲ ಕುಟುಂಬಸ್ಥರಿಗೆ ಸೀಮಿತವಾಗಿರಬಹುದು. ಅಗತ್ಯ ಶಾಸ್ತ್ರ ನೆರವೇರಿಸಿ ನಂತರ ರಿಜಿಸ್ಟರ್ ಮ್ಯಾರೇಜ್ ಆಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಜೂ.23ಕ್ಕೆ ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್ ರಿಜಿಸ್ಟರ್ ಮ್ಯಾರೇಜ್