ETV Bharat / entertainment

'ಕೆಡಿ' ಸಿನಿಮಾದಲ್ಲಿ 'ಧಕ್​ ದೇವಾ'ರಾಗಿ ಅಬ್ಬರಿಸಲಿರುವ ಸಂಜಯ್​ ದತ್​! - Sanjay Dutt In KD Movie

ನಟ ಸಂಜಯ್ ದತ್​ ಹುಟ್ಟುಹಬ್ಬಕ್ಕೆ ಕೆಡಿ ಚಿತ್ರತಂಡ ಅವರ ಪಾತ್ರವನ್ನು ಪರಿಚಯಿಸಿದೆ.

"ಕೆಡಿ" ಸಿನಿಮಾದಲ್ಲಿ 'ಧಕ್​ ದೇವಾ'ರಾಗಿ ಅಬ್ಬರಿಸಲಿರುವ ಸಂಜಯ್​ ದತ್​
'ಕೆಡಿ' ಸಿನಿಮಾದಲ್ಲಿ 'ಧಕ್​ ದೇವಾ'ರಾಗಿ ಅಬ್ಬರಿಸಲಿರುವ ಸಂಜಯ್​ ದತ್​ (ETV Bharat)
author img

By ETV Bharat Karnataka Team

Published : Jul 29, 2024, 11:51 AM IST

ಇಂದು 'ಕೆಜಿಎಫ್​ ಅಧೀರ'ನ ಹುಟ್ಟುಹಬ್ಬಕ್ಕೆ 'ಕೆಡಿ' ಚಿತ್ರತಂಡ ಸ್ಪೆಷಲ್​ ಉಡುಗೊರೆ ಕೊಟ್ಟಿದೆ. ಈ ಮೂಲಕ ಈ ಸಿನಿಮಾದಲ್ಲಿ ಖಳನಾಯಕ ಸಂಜಯ್​ ದತ್ ಪಾತ್ರವನ್ನು ನಿರ್ದೇಶಕ ಪ್ರೇಮ್ ಪರಿಚಯಿಸಿದ್ದಾರೆ.

ಹೌದು, ಆ್ಯಕ್ಷನ್​ ಫ್ರಿನ್ಸ್​ ಧ್ರುವ ಸರ್ಜಾ ಸಿನಿಮಾ 'ಕೆಡಿ'ಯಲ್ಲಿ ಸಂಜಯ್​ ದತ್​​ ಪಾತ್ರವೇನು ಎಂಬ ಕುತೂಹಲ ಇತ್ತು. ಇಂದು ದತ್​​ ಹುಟ್ಟುಹಬ್ಬಕ್ಕೆ ಪ್ರೇಮ್​​ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಸಂಜಯ್​ ದತ್​ ಪಾತ್ರ ಧಕ್​ ದೇವಾ ಎಂಬುದು ಈ ಮೂಲಕ ರಿವೀಲ್​ ಆಗಿದೆ. ಪೋಸ್ಟರ್​ನಲ್ಲಿ ಸಂಜಯ್​ ದತ್​ ಬಂದೂಕು ಹಿಡಿದು ರೆಟ್ರೋ ಸ್ಟೈಲ್​ನಲ್ಲಿ ಕಾಣಿಸಿಕೊ‌ಂಡಿದ್ದು ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

ಜೋಗಿ ಪ್ರೇಮ್​ ಸಿನಿಮಾಗಳಂದರೆ ಸೌಂಡು ಇರುತ್ತೆ, ಜೊತೆಗೆ ಒಂದೊಳ್ಳೆ ಬ್ರ್ಯಾಂಡ್​ ಕೂಡಾ ಇರುತ್ತೆ ಎಂಬುದು ಸಿನಿಮಾ ಪ್ರೇಮಿಗಳ ಮಾತು. ಇದೀಗ ಅವರು ದುಬಾರಿ ಸಂಭಾವನೆ ಕೊಟ್ಟು ಕೆಜಿಎಫ್ ಅಧೀರನ ಕರೆದುಕೊಂಡು ಬಂದು ಕೇಡಿ ಅಡ್ಡದಲ್ಲಿ ನಿಲ್ಲಿಸಿದ್ದಾರೆ. ಧ್ರುವ ಸರ್ಜಾ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವ ಪ್ರೇಮ್, 70ರ ದಶಕದ ಅಂಡರ್​ ವರ್ಲ್ಡ್ ಕಥೆ ಹೇಳಲು ರೆಡಿಯಾಗಿದ್ದಾರೆ‌.

ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ ರೊಮಾನ್ಸ್​ ಮಾಡಲಿದ್ದಾರೆ. ಇನ್ನುಳಿದಂತೆ ರವಿಚಂದ್ರನ್, ರಮೇಶ್ ಅರವಿಂದ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನೋರಾಫಾತಿ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ರವಿವರ್ಮ, ರಾಮ ಲಕ್ಷ್ಮಣ, ನರಸಿಂಹ ಹಾಗು ಮಾಸ್ ಮಾದ ಸೇರಿದಂತೆ ಖ್ಯಾತ ಸ್ಟಂಟ್ ಮಾಸ್ಟರ್ಸ್​ ಆ್ಯಕ್ಷನ್​ ಕಂಪೋಸ್ ಮಾಡಿದ್ದಾರೆ. ಮೋಹನ್ ಬಿ. ಕೆರೆ ಕಲಾ ನಿರ್ದೇಶನವಿದ್ದು, ಕೆವಿಎನ್ ಪ್ರೊಡಕ್ಷನ್​ ಬಹು ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಸುಪ್ರೀತ್ ಕೆಲಸ ಮಾಡಿದ್ದು ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: 'ಪ್ರೇಮ್​ ಪರ್ಫೆಕ್ಷನಿಸ್ಟ್': ಕನ್ನಡ ನಿರ್ದೇಶಕನ ಕೊಂಡಾಡಿದ ಶಿಲ್ಪಾ ಶೆಟ್ಟಿ; ಸ್ಪೆಷಲ್​​ ವಿಡಿಯೋ ರಿವೀಲ್ - Shilpa Shetty

ETV Bharat Logo

Copyright © 2024 Ushodaya Enterprises Pvt. Ltd., All Rights Reserved.