ETV Bharat / entertainment

ಧರ್ಮ ಕೀರ್ತಿರಾಜ್​, ಉಗ್ರಂಮಂಜು 'ಟೆನಂಟ್‌' ಸಿನಿಮಾದ ಟೀಸರ್​ ಅನಾವರಣಗೊಳಿಸಿದ್ರು ಸ್ಯಾಂಡಲ್​ವುಡ್​ ಸ್ಟಾರ್ಸ್​​​ - TENANT TEASER

ಬಿಡುಗಡೆಗೆ ಎದುರು ನೋಡುತ್ತಿರುವ 'ಟೆನಂಟ್' ತಂಡವೀಗ ಟೀಸರ್​ ಅನಾವರಣಗೊಳಿಸಿ ಪ್ರಮೋಷನ್ ಅಂಗಳಕ್ಕೆ ಧುಮುಕಿದೆ.

TENANT Film Team
'ಟೆನಂಟ್‌' ಚಿತ್ರತಂಡ (Photo source: ETV Bharat)
author img

By ETV Bharat Entertainment Team

Published : Oct 16, 2024, 12:19 PM IST

'ಟೆನಂಟ್‌' ಕನ್ನಡ ಚಿತ್ರರಂಗದಲ್ಲಿ ರಿಲೀಸ್‌ಗೆ ತಯಾರಿ ಮಾಡಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ. ಸದ್ಯ ಚಿತ್ರ ತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಸಿನಿರಸಿಕರ ಗಮನ ಸೆಳೆದಿದೆ. ಈಗಾಗಲೇ ಶೂಟಿಂಗ್ ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿರುವ 'ಟೆನೆಂಟ್' ತಂಡವೀಗ ಪ್ರಮೋಷನ್ ಅಂಗಳಕ್ಕೆ ಇಳಿದಿದೆ.

ಅಂದಹಾಗೆ ಟೆನೆಂಟ್ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮ ಕೀರ್ತಿರಾಜ್, ಉಗ್ರಂ ಮಂಜು ಹಾಗೂ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರವಿದು. ಸಿನಿಮಾಗೆ ಶ್ರೀಧರ್ ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಶ್ರೀಧರ್ ಅವರಿಗಿದು ಚೊಚ್ಚಲ ಚಿತ್ರ. ಯುವ ನಿರ್ದೇಶಕನ ಪ್ರಯತ್ನಕ್ಕೆ ಚಂದನವನದ ತಾರಾಬಳಗ ಸಾಥ್ ಕೊಟ್ಟಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನೋಡಿದರೆ ಇದು ಅವರ ಮೊದಲ ಸಿನಿಮಾ ಅಂತಾ ಅನಿಸದ ಹಾಗೆ ಅಷ್ಟೇ ಅಚ್ಚುಕಟ್ಟಾಗಿ ಆ್ಯಕ್ಷನ್​ ಕಟ್​​ ಹೇಳಿದ್ದಾರೆ ನಿರ್ದೇಶಕರು.

TENANT Film Team
'ಟೆನಂಟ್‌' ಚಿತ್ರತಂಡ (Photo source: ETV Bharat)

ಚಿತ್ರತಂಡಕ್ಕೆ ಅನೇಕರ ಸಾಥ್​: ಈ 'ಟೆನೆಂಟ್‌' ಟೀಸರ್ ಅನ್ನು ಸ್ಯಾಂಡಲ್‌ವುಡ್‌ನ ಕೆಲ ಸೆಲೆಬ್ರಿಟಿಗಳು ಸೇರಿ ರಿಲೀಸ್ ಮಾಡಿದ್ದಾರೆ. ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಖ್ಯಾತ ಛಾಯಾಗ್ರಾಹಕರಾದ ಸತ್ಯ ಹೆಗ್ಡೆ, ಡಿಸೈನರ್ ಹಾಗೂ ವಿತರಕಿ ಸಚಿನ್ನಾ ಹೆಗ್ಗಾರ್, ಚಂದನ್ ಶೆಟ್ಟಿ, ನಟ - ನಿರ್ದೇಶಕ ವಿಕ್ಕಿ, ನಟ ನವೀಶ್ ಶಂಕರ್ ಸೇರಿದಂತೆ ಅನೇಕರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ನಟ ಧರ್ಮ ಕೀರ್ತಿರಾಜ್: ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಟೆನೆಂಟ್ ಸಿನಿಮಾದ ಟೀಸರ್ ಆಕರ್ಷಕವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 'ಕಣ್ ಕಣ್ಣ ಸಲಿಗೆ'... ಎಂದು ಲವರ್ ಬಾಯ್ ಆಗಿ ಮಿಂಚುತ್ತಿದ್ದ ನಟ ಧರ್ಮ ಕೀರ್ತಿರಾಜ್ ಅವರು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿರುವುದು ವಿಶೇಷ. ಇನ್ನೂ ತಿಲಕ್ ರಾಜ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಹಾಗಾಗಿಯೇ ಈ ಸಿನಿಮಾದ ಮೇಲೆ ಅವರಿಗೂ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಟೀಸರ್​ನಲ್ಲಿ ಎಲ್ಲರ ಪಾತ್ರಗಳು ಸಹ ಗಮನ ಸೆಳೆಯುತ್ತಿವೆ. ಬ್ಯಾಗ್ರೌಂಡ್ ಸ್ಕೋರ್ ಟೀಸರ್‌ನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

TENANT Film Team
ಉಗ್ರಂ ಮಂಜು (Photo source: ETV Bharat)

ಇದನ್ನೂ ಓದಿ: 'ಸದ್ದು', ಯಾರೂ ತುಟಿಕ್​ ಪಿಟಿಕ್​ ಅನ್ನೋ ಹಾಗಿಲ್ಲ! ತಾಳ್ಮೆ ಕಳೆದುಕೊಂಡ ಬಿಗ್ ​​ಬಾಸ್​: ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ ಸಂಯೊಜನೆ ಮಾಡಿದ್ದಾರೆ. ಉಜ್ವಲ್ ಸಂಕಲನ ನಿರ್ವಹಿಸಿದ್ದಾರೆ. ಮನೋಹರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಶನ್ ಅಡಿ ನಾಗರಾಜ್ ಟಿ ನಿರ್ಮಾಣ ಮಾಡಿದ್ದಾರೆ‌. ಈಗಾಗಲೇ ಟೀಸರ್ ಮೂಲಕ ಭಾರಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿರುವ ಟೆನೆಂಟ್ ನವೆಂಬರ್ 22ಕ್ಕೆ ಅದ್ದೂರಿಯಾಗಿ ತೆರೆಕಾಣಲಿದೆ.

TENANT Film Team
ಸೋನು ಗೌಡ (Photo source: ETV Bharat)

ಇದನ್ನೂ ಓದಿ: 'ಚಿತ್ರರಂಗಕ್ಕೆ ಕಾಶೀನಾಥ್ ಕೊಡುಗೆ ಅಪಾರ': ಪುತ್ರ ಅಭಿಮನ್ಯು ಸಿನಿಮಾಗೆ ಸುದೀಪ್​ ಸಪೋರ್ಟ್

ಕನ್ನಡ ಕಿರುತೆರೆಯ ಪಾಪ್ಯುಲರ್​​ ಪ್ರೋಗ್ರಾಮ್​​ ಬಿಗ್​ ಬಾಸ್​ ಮೂಲಕ ಧರ್ಮ ಕೀರ್ತಿರಾಜ್ ಹಾಗೂ ಉಗ್ರಂ ಮಂಜು ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿ ಚಿತ್ರದ ಮೇಲೆ ಕುತೂಹಲವಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಬರುವ ತಿಂಗಳಾಂತ್ಯ ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.