ETV Bharat / entertainment

ಮದುವೆ ಆಗುವ ಹುಡುಗಿ ಜೊತೆ ಸ್ಪೆಷಲ್ ವಿಡಿಯೋ ಹಂಚಿಕೊಂಡ ರಾಬರ್ಟ್ ನಿರ್ದೇಶಕ - Tarun Sonal Marriage - TARUN SONAL MARRIAGE

Tarun Sonal Marriage: ಮದುವೆ ಆಗುವ ಹುಡುಗಿ ಜೊತೆ ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ.

SANDALWOOD MARRIAGE CELEBRATION  ROBERT MOVIE DIRECTOR  SONAL MONTEIRO WEDDING
ಮದುವೆ ಆಗುವ ಹುಡುಗಿ ಜೊತೆ ಸ್ಪೆಷಲ್ ವಿಡಿಯೋ ಹಂಚಿಕೊಂಡ ರಾಬರ್ಟ್ ನಿರ್ದೇಶಕ (ETV Bharat)
author img

By ETV Bharat Karnataka Team

Published : Jul 22, 2024, 12:26 PM IST

Updated : Jul 22, 2024, 1:33 PM IST

Tarun Sonal Marriage: ಈ ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚದಲ್ಲಿ ನಟ, ನಟಿಯರಿಗೆ ಹಾಗು ನಿರ್ದೇಶಕರಿಗೆ ಮದುವೆ ಅನ್ನೋದು ಬಹು ಮುಖ್ಯವಾದುದು. ಇದೀಗ ಚೌಕ, ರಾಬರ್ಟ್ ಹಾಗು ಕಾಟೇರ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿ ಬಹುಬೇಡಿಕೆ ಹೊಂದಿರುವ ಡೈರೆಕ್ಟರ್​ ತರುಣ್ ಸುಧೀರ್, ಪಂಚತಂತ್ರ ಖ್ಯಾತಿಯ ಸೋನಾಲ್ ಮೊಂಟೆರೊ ಜೊತೆ ಮದುವೆ ಆಗ್ತಾ ಇರೋದು ಗೊತ್ತಿರುವ ವಿಷಯ. ಈಗ ನಿರ್ದೇಶಕ ತರುಣ್ ಸುಧೀರ್ ಹಾಗು ಸೋನಾಲ್ ತಮ್ಮ ಮದುವೆ ದಿನಾಂಕವನ್ನು ಕಲರ್ ಫುಲ್ ಸ್ಪೆಷಲ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಥಿಯೇಟರ್ ಬ್ಯಾಕ್ ಗ್ರೌಂಡ್ ಹಾಗು ಸಿನಿಮಾ ಶೂಟಿಂಗ್ ಬ್ಯಾಕ್ ಟ್ರಾಪ್​ನಲ್ಲಿ ತರುಣ್ ಸುಧೀರ್ ಹಾಗು ಸೋನಾಲ್ ಮೊಂಟೆರೊ ಕ್ಯಾಮೆರಾಗೆ ಪೋಸ್ ಕೊಡುವ ಮುಖಾಂತರ ತಮ್ಮ ಮದುವೆಗೆ ಆಹ್ವಾನ ನೀಡಿದ್ದಾರೆ. ಆಗಸ್ಟ್ 10 ಹಾಗು 11ರಂದು ತರುಣ್ ಸುಧೀರ್ ಸೋನಾಲ್ ಜೊತೆ ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್​ನಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ‌.

Sandalwood marriage celebration  Robert movie Director  Sonal Monteiro wedding
ಮದುವೆಯ ಸ್ಪೆಷಲ್ ವಿಡಿಯೋ ಹಂಚಿಕೊಂಡ ರಾಬರ್ಟ್ ನಿರ್ದೇಶಕ (ETV Bharat)

ದಿವಂಗತ ಖಳ ನಟ ಸುಧೀರ್ ಅವರ ಎರಡನೇ ಮಗ ತರುಣ್ ಸುಧೀರ್. ಇನ್ನು ತರುಣ್ ಸುಧೀರ್ ಬಾಲನಟನಾಗಿ 1990ರಲ್ಲಿ ತೆರೆಗೆ ಬಂದ 'ಗಣೇಶನ ಮದುವೆ' ಸಿನಿಮಾದಲ್ಲಿ ಅಭಿನಯಿಸಿದ್ದರು. ನಟ ಹಾಗು ಸಹನಟನಾಗಿ ಎಕ್ಸ್‌ಕ್ಯೂಸ್ ಮಿ, ಚಪ್ಪಾಳೆ, ವಿಷ್ಣುಸೇನಾ, ಜೊತೆ ಜೊತೆಯಲಿ, ವಿದ್ಯಾರ್ಥಿ, ನವಗ್ರಹ, ಗಜಕೇಸರಿ, ಚೌಕ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಬಳಿಕ ರಾಂಬೋ, ವಿಕ್ಟರಿ, ಅಧ್ಯಕ್ಷ, ಗಜಕೇಸರಿ, ರನ್ನ, ಟೈಗರ್, ರಾಂಬೋ 2, ವಿಕ್ಟರಿ 2 ಸಿನಿಮಾಗಳಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದ ತರುಣ್, ಚೌಕ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದರು. ಆ ನಂತರ ರಾಬರ್ಟ್, ಕಾಟೇರದಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.

ಮಂಗಳೂರು ಮೂಲದ ಸೋನಾಲ್ ಮೊಂಟೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ನಂತರ ಅಭಿಸಾರಿಕೆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ, ನಿಮಾದಲ್ಲಿ ಸೋನಾಲ್ ಮೊಂಟೆರೊ ಅಭಿನಯಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಾಲ್ ಮೊಂಟೆರೊ ಅವರು ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದರು.

ಇಲ್ಲಿ ತರುಣ್ ಸುಧೀರ್ ಹಾಗು ಸೋನಾಲ್ ಮಧ್ಯೆ ಗೆಳೆತನ ಶುರುವಾಗಿ ನಂತರ ಒಬ್ಬರಿಗೆ ಒಬ್ಬರು ತಮ್ಮ ಪ್ರೀತಿಯನ್ನ ಹೇಳಿಕೊಂಡಿದ್ದರು. ಬಳಿಕ ತರುಣ್ ಸುಧೀರ್ ಹಾಗು ಸೋನಾಲ್ ಮದುವೆ ಬಗ್ಗೆ ಕುಟುಂಬಸ್ಥರನ್ನು ಒಪ್ಪಿಸಿದ್ದು, ಆಗಸ್ಟ್ 11 ರಂದು ಎರಡು ಕುಟುಂಬಗಳ‌ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ. ಆಗಸ್ಟ್ 10 ರಂದು ಆರತಕ್ಷತೆ ನಡೆಯಲಿದ್ದು, 11ರಂದು ಮಾಂಗಲ್ಯ ಧಾರಣೆ ಜರುಗಲಿದೆ.

ಓದಿ: ಫೈರ್​ ಫ್ಲೈ ಸಿನಿಮಾಗೆ ಸಿಕ್ಕಳು ನಾಯಕಿ: ವಂಶಿಗೆ 'ಹೆಂಗೆ ನಾವು' ರಚನಾ ಇಂದರ್ ಜೋಡಿ - Firefly movie Heroine

Last Updated : Jul 22, 2024, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.