ETV Bharat / entertainment

ರಾಮ್​​ ಚರಣ್ ಮುಂದಿನ​ ಸಿನಿಮಾದ ಟೈಟಲ್​​ 'ಪೆದ್ದಿ'?: ಪ್ರಮುಖ ಪಾತ್ರದಲ್ಲಿ ಶಿವಣ್ಣ - RC16

ರಾಮ್​ ಚರಣ್​ ಹಾಗೂ ಜಾಹ್ನವಿ ಕಪೂರ್​ ನಟನೆಯ 'ಆರ್​ಸಿ 16' ಸಿನಿಮಾಗೆ 'ಪೆದ್ದಿ' ಎಂದು ಶೀರ್ಷಿಕೆ ಇಡುವ ಸಾಧ್ಯತೆಗಳಿವೆ.

RC16
ಆರ್​ಸಿ 16
author img

By ETV Bharat Karnataka Team

Published : Mar 16, 2024, 5:37 PM IST

2022ರ ಬ್ಲಾಕ್​ಬಸ್ಟರ್ ಸಿನಿಮಾ 'ಆರ್​ಆರ್​ಆರ್' ಮೂಲಕ ಜಗತ್ತಿನಾದ್ಯಂತ ಜನಪ್ರಿಯತೆ ಸಂಪಾದಿಸಿರುವ ಸೌತ್​ ಸೂಪರ್​ ಸ್ಟಾರ್ ರಾಮ್​​ಚರಣ್​ ಸದ್ಯ 'ಗೇಮ್​​ ಚೇಂಜರ್​' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.​ ಬಹುಬೇಡಿಕೆ ತಾರೆ ಮುಂದಿನ ಚಿತ್ರ 'ಆರ್​ಸಿ 16'. ಇದು ತಾತ್ಕಾಲಿಕ ಶೀರ್ಷಿಕೆಯಷ್ಟೇ. ಈ ಚಿತ್ರಕ್ಕೆ 'ಪೆದ್ದಿ' (Peddi) ಎಂದು ಹೆಸರಿಡುವ ಸಾಧ್ಯತೆಗಳಿದ್ದು, ಅಧಿಕೃತ ಮಾಹಿತಿ ಶೀಘ್ರವೇ ಹೊರ ಬೀಳಲಿದೆ.

ಉಪ್ಪೇನಾ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ 'ಆರ್​ಸಿ 16' ಸುತ್ತ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ. ಆದರೆ, ಚಿತ್ರ ತಯಾರಕರಿನ್ನೂ ಈ ಯೋಜನೆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳು 'RC16'ರ ಅಧಿಕೃತ ಶೀರ್ಷಿಕೆ ಏನೆಂದು ತಿಳಿಯಲು ಕಾತರರಾಗಿದ್ದಾರೆ. ಚಿತ್ರದ ಸುತ್ತಲಿರುವ ಸದ್ಯದ ಮಾಹಿತಿ ಪ್ರಕಾರ, ಚಿತ್ರಕ್ಕೆ ಪೆದ್ದಿ ಎಂದು ಹೆಸರಿಸಲು ಯೋಜಿಸಿದ್ದಾರಂತೆ. ಯಾವುದಕ್ಕೂ ಅಧಿಕೃತ ಮಾಹಿತಿ ಬರಬೇಕಿದೆ.

ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಕೂಡ 'ಪೆದ್ದಿ' ಶೀರ್ಷಿಕೆ ಚಿತ್ರತಂಡಕ್ಕೆ ಹಿಡಿಸಿದೆಯಂತೆ. ಇತರ ಸಂಭವನೀಯ ಶೀರ್ಷಿಕೆಗಳ ಕಡೆಗೂ ಗಮನ ಹರಿಸಿದ್ದಾರೆ. ಅದಾಗ್ಯೂ, ಪೆದ್ದಿ 'RC16'ರ ಅಧಿಕೃತ ಶೀರ್ಷಿಕೆಯಾಗೋ ಸಾಧ್ಯತೆಗಳು ಹೆಚ್ಚಿವೆ. ಈ ಮೊದಲೇ ವರದಿ ಮಾಡಿದಂತೆ, ಇದೇ ಮಾರ್ಚ್ 20ರಂದು ಪೂಜಾ ಸಮಾರಂಭದೊಂದಿಗೆ ಈ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಬಳಿಕ ಚಿತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು. ಈ ಚಿತ್ರ ಸ್ಪೋರ್ಟ್ಸ್ ಡ್ರಾಮಾ ಆಗಲಿದೆ ಅನ್ನೋದಷ್ಟೇ ಸದ್ಯಕ್ಕಿರುವ ಮಾಹಿತಿ.

ಇದನ್ನೂ ಓದಿ: RC16: ರಾಮ್​​ ಚರಣ್​ ಸಿನಿಮಾ ಸೆಟ್ಟೇರೋದು ಯಾವಾಗ? ಡೀಟೆಲ್ಸ್ ಇಲ್ಲಿದೆ

ಸಿನಿಮಾ ಸೆಟ್ಟೇರೋ ದಿನದಂದು ಅಧಿಕೃತ ಶೀರ್ಷಿಕೆ ಬಹಿರಂಗಗೊಳ್ಳುವ ನಿರೀಕ್ಷೆಯಿದೆ. ಅಂದು ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ. ಮಾರ್ಚ್ 27ರಂದು ರಾಮ್​ ಚರಣ್​​ 39ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಹಾಗಾಗಿ ಮಾರ್ಚ್ 20ರ ಬದಲು 27ರಂದು ಟೈಟಲ್​ ರಿವೀಲ್​ ಮಾಡೋ ಸಾಧ್ಯತೆಗಳೂ ಸಹ ಇವೆ ಎಂದು ಚಿತ್ರತಂಡದ ಹತ್ತಿರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 'RCB'ಗಾಗಿ ಲಾಂಗ್​ ಹಿಡಿದ ಶಿವಣ್ಣ: ಜಬರ್​ದಸ್ತ್​ ವಿಡಿಯೋ 'ಅರ್ಥ ಆಯ್ತಾ'?

ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್​ ಇದೇ ಮೊದಲ ಬಾರಿ ರಾಮ್​​ ಚರಣ್​ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಜೊತೆಗಿನ 'ದೇವರ' ಬಳಿಕ ಸೆಟ್ಟೇರುತ್ತಿರೋ ನಟಿಯ ಎರಡನೇ ತೆಲುಗು ಚಿತ್ರ. ಆರ್​ಸಿ16ಗೆ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಲ್ಲದೇ ಶಿವರಾಜ್‌ಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲದರ ಹಿನ್ನೆಲೆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರಾಮ್ ಚರಣ್ ಸದ್ಯ ಗೇಮ್ ಚೇಂಜರ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ವರ್ಷವೇ ತೆರೆಕಾಣಲಿದೆ. ಕಿಯಾರಾ ಅಡ್ವಾಣಿ ಜೊತೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.