ETV Bharat / entertainment

ದುಬೈನಿಂದ ಬಂದು, ಏರ್ಪೋರ್ಟ್​ನಿಂದಲೇ ನೇರವಾಗಿ ಮತಗಟ್ಟೆಗೆ ತೆರಳಿ ರಾಜಮೌಳಿ ಮತದಾನ - Rajmouli casts votes

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಮೌಳಿ, ಎಂಎಂ ಕೀರವಾಣಿ ಅವರು ಹೈದರಾಬಾದ್​ನ ಜೂಬ್ಲಿ ಹಿಲ್ಸ್​ನಲ್ಲಿ ಮತದಾನ ಮಾಡಿದರು.

Etv Bharat
Etv Bharat (ANI)
author img

By ETV Bharat Karnataka Team

Published : May 13, 2024, 1:46 PM IST

ಹೈದರಾಬಾದ್: ಪ್ಯಾನ್ ಇಂಡಿಯಾ ನಿರ್ದೇಶಕ ಎಸ್​. ಎಸ್​.ರಾಜಮೌಳಿ ಮತ್ತು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಅವರು ಇಂದು ದುಬೈನಿಂದ ಆಗಮಿಸಿ ಮತಹಕ್ಕು ಚಲಾಯಿಸಿದರು.

ಆರ್​ಆರ್ ಸಿನಿಮಾ ನಿರ್ದೇಶಕ ರಾಜಮೌಳಿ, ಎಂ.ಎಂ. ಕೀರವಾಣಿ ಅವರು ಇಂದು ಬೆಳಗ್ಗೆ ದುಬೈನಿಂದ ಆಗಮಿಸಿ, ಏರ್​ಪೋರ್ಟ್​ನಿಂದಲೇ ನೇರವಾಗಿ ಹೈದರಾಬಾದ್​ನ ಜುಬ್ಲಿ ಹಿಲ್ಸ್​ ಮತಗಟ್ಟೆಗೆ ತೆರಳಿ ವೋಟ್ ಹಾಕಿದರು. ಮತಗಟ್ಟೆಯ ಬಳಿಕ ಪತ್ನಿ ಮತ್ತು ಪುತ್ರ ಕಾರ್ತಿಕ್ ಜೊತೆ ರಾಜಮೌಳಿ ಕಾಣಿಸಿಕೊಂಡರು.

ಮತದಾನದ ಬಳಿಕ ಮಾತನಾಡಿದ ರಾಜಮೌಳಿ, ಮತದಾನದ ಮೂಲಕ ನಮ್ಮ ಹೊಣೆಗಾರಿಕೆಯನ್ನು ದೇಶಕ್ಕೆ ತೋರಿಸಬೇಕಿದೆ. ದಯವಿಟ್ಟು ಎಲ್ಲರೂ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು. ಇನ್ನು ಆಸ್ಕರ್​ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಕೀರವಾಣಿ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿರುವ ಪ್ರತಿಯೊಬ್ಬರೂ ವೋಟ್ ಮಾಡಬೇಕು ಎಂದು ಕರೆ ನೀಡಿದರು.

'ಮತಹಕ್ಕು ಚಲಾಯಿಸುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ, ಇದು ನಮ್ಮ ಜವಾಬ್ದಾರಿ ಮತ್ತು ಇದನ್ನು ನಾವು ಪೂರೈಸಬೇಕಿದೆ' ಎಂದು ಇನ್ನು ರಾಜಮೌಳಿ ಪುತ್ರ ಕಾರ್ತಿಕೇಯ ಮತಗಟ್ಟೆ ಬಳಿ ಪ್ರತಿಕ್ರಿಯೆ ನೀಡಿದರು.

ರಾಜಮೌಳಿ ಪೊಸ್ಟ್: 'ದುಬೈನಿಂದ ಬಂದು, ಏರ್​ಪೋರ್ಟ್​ನಿಂದಲೇ ನೇರವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದೆವು. ಅದಕ್ಕಾಗಿ ದಣಿದವರಂತೆ ಕಾಣುತ್ತಿದ್ದೇವೆ' ಎಂದು ಮತದಾನ ಮಾಡಿದ ಪತ್ನಿ ಜೊತೆಗಿನ ಫೋಟೋ ಸಮೇತ ರಾಜಮೌಳಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

2024 ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ತೆಲಂಗಾಣ, ಆಂಧ್ರಪ್ರದೇಶದ ಸೇರಿದಂತೆ 9 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ 96 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಸ್ಟಾರ್ ನಟರು, ಗಣ್ಯರು ಸೇರಿದಂತೆ ಸಾರ್ವಜನಿಕರು ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮತದಾರನ ಮೇಲೆ ಮತಕೇಂದ್ರದಲ್ಲೇ ವೈಎಸ್​ಆರ್​ಸಿಪಿ ಅಭ್ಯರ್ಥಿಯಿಂದ ಮಾರಣಾಂತಿಕ ದಾಳಿ: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ - Lok Sabha Election 2024

ಹೈದರಾಬಾದ್​ನ ಜುಬ್ಲಿ ಹಿಲ್ಸ್ ಮತಗಟ್ಟೆಗೆ ನಟರಾದ ಚಿರಂಜೀವಿ, ಜೂ. ಎನ್​ಟಿಆರ್, ಅಲ್ಲು ಅರ್ಜುನ್, ಶ್ರೀಕಾಂತ್ ಸೇರಿದಂತೆ ಹಲವರು ಬೆಳಗ್ಗೆನೇ ಆಗಮಿಸಿ ಮತದಾನ ಮಾಡಿದರು. ನಟರು ಕುಟುಂಬ ಸಮೇತ ಬಂದು ವೊಟ್ ಮಾಡಿದ್ದು ವಿಶೇಷ.

ಇದನ್ನೂ ಓದಿ: ತೆಲುಗು ನಾಡಿನಲ್ಲಿ ಲೋಕಸಭೆ ಚುನಾವಣೆ: ಚಿರಂಜೀವಿ, ಜೂ.ಎನ್​ಟಿಆರ್, ಅಲ್ಲು ಅರ್ಜುನ್ ಮತದಾನ - Actors Voting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.