ಸ್ಯಾಂಡಲ್ವುಡ್ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಅದ ಸೂಪರ್ ಸ್ಟಾರ್ಡಮ್ ಹೊಂದಿರುವ ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಬಂದ ಸಿನಿಮಾ ಬಹುತೇಕ ಮೆಚ್ಚುಗೆ ಸ್ವೀಕರಿಸಿದೆ. ಇದೀಗ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿರುವ ಬ್ಲಾಕ್‌ಬಸ್ಟರ್ 'RRR' ಚಿತ್ರದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2012ರಲ್ಲಿ ಸೂಪರ್ ಹಿಟ್ ಆಗಿದ್ದ 'ಈಗ' ಸಿನಿಮಾ ಸುದೀಪ್ ಮತ್ತು ರಾಜಮೌಳಿ ಅವರ ಕಾಂಬಿನೇಶನ್ನಲ್ಲಿ ಬಂದಿತ್ತು ಅನ್ನೋದು ನಿಮಗೆ ತಿಳಿದಿರುವ ವಿಚಾರವೇ.
ಮ್ಯಾಕ್ಸ್ ಯಶಸ್ಸಿನ ತೂಕ ಹೆಚ್ಚಿಸಿತು ಸ್ಟಾರ್ ಡೈರೆಕ್ಟರ್ ಗುಣಗಾನ: ಪ್ರೇಕ್ಷಕರಿಂದ ಬಹುತೇಕ ಮೆಚ್ಚುಗೆ ಗಳಿಸಿರುವ ಮ್ಯಾಕ್ಸ್ ಸಿನಿಮಾದ ಬಾಕ್ಸ್ ಆಫೀಸ್ ಪ್ರಯಾಣವೂ ಉತ್ತಮವಾಗಿದೆ. ಭಾನುವಾರ ಚಿತ್ರತಂಡ ಸಕ್ಸಸ್ ಸೆಲೆಬ್ರೇಶನ್ ಆಯೋಜಿಸಿತ್ತು. ಅಲ್ಲದೇ, ನಾಯಕ ನಟ ಕಿಚ್ಚ ಸುದೀಪ್ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ವಾರಾಂತ್ಯದ ಗಲ್ಲಾಪೆಟ್ಟಿಗೆ ವ್ಯವಹಾರವೂ ಅತ್ಯುತ್ತಮವಾಗಿದೆ. ಇದೀಗ ಸ್ಟಾರ್ ಡೈರೆಕ್ಟರ್ ಗುಣಗಾನ ಸಿನಿಮಾ ಯಶಸ್ಸಿನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
Congratulations to Kiccha Sudeepa and the team of #MaxTheMovie on their blockbuster success. Mass always prevails with your stardom. Haven’t had time to watch it yet, but I’ll be watching it soon..:)
— rajamouli ss (@ssrajamouli) December 30, 2024
ಎಸ್.ಎಸ್ ರಾಜಮೌಳಿ ಟ್ವೀಟ್: ಮನರಂಜನಾ ಕ್ಷೇತ್ರಕ್ಕೆ ಹಲವು ಯಶಸ್ವಿ ಸಿನಿಮಾಗಳನ್ನು ಕೊಟ್ಟಿರುವ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ''ಮ್ಯಾಕ್ಸ್ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಕಿಚ್ಚ ಸುದೀಪ್ ಮತ್ತು ಚಿತ್ರ ತಂಡಕ್ಕೆ ಅಭಿನಂದನೆಗಳು. ನಿಮ್ಮ ಸ್ಟಾರ್‌ಡಮ್‌ನೊಂದಿಗೆ ಮಾಸ್ ಯಾವಾಗಲೂ ಮೇಲುಗೈ ಸಾಧಿಸುತ್ತದೆ. ಸಿನಿಮಾ ನೋಡಲು ಇನ್ನೂ ಸಮಯ ಸಿಕ್ಕಿಲ್ಲ, ಆದರೆ ಶೀಘ್ರದಲ್ಲೇ ಮ್ಯಾಕ್ಸ್ ವೀಕ್ಷಿಸಲಿದ್ದೇನೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ 'ಮ್ಯಾಕ್ಸ್': ಯಶಸ್ಸಿನ ಅಲೆಯಲ್ಲಿ ಸುದೀಪ್ ತಂಡ; ಹೀಗಿದೆ ಗಳಿಕೆ ಮಾಹಿತಿ!
ಧನ್ಯವಾದ ಅರ್ಪಿಸಿದ ಅಭಿನಯ ಚಕ್ರವರ್ತಿ: ಥ್ಯಾಂಕ್ ಯು ರಾಜಮೌಳಿ ಸರ್. ವೆರಿ ಸ್ವೀಟ್. ನಿಮ್ಮ ಈ ಮಾತು ನಿಜವಾಗಿಯೂ ಮ್ಯಾಕ್ಸ್ನ ಸಂಪೂರ್ಣ ತಂಡಕ್ಕೆ ಪ್ರೇರಣೆ. ಲವ್ ಯೂ ಸರ್. ಹಾಗೇ, ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅತ್ಯದ್ಭುತ ನಿರ್ದೇಶನ ಮಾತ್ರವಲ್ಲ, ನೃತ್ಯಕ್ಕೂ ಸೈ ರಾಜಮೌಳಿ : ಜಕ್ಕಣ್ಣನ ಜಬರ್ದಸ್ತ್ ಡ್ಯಾನ್ಸ್ ನೋಡಿ
ಮ್ಯಾಕ್ಸ್ ಬಾಕ್ಸ್ ಆಫೀಸ್ ಕಲೆಕ್ಷನ್: ಡಿಸೆಂಬರ್ 25ರಂದು ಬಿಡುಗಡೆಯಾದ ಬಹುನಿರೀಕ್ಷಿತ ಚಿತ್ರ ಬಾಕ್ಸ್ ಆಫೀಸ್ನಲ್ಲಿ 5 ದಿನಗಳಲ್ಲಿ ಒಟ್ಟು 27.86 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೋಮವಾರ (ಇಂದು) 0.17 ಕೋಟಿ ರೂ. ಕಲೆಕ್ಷನ್ ಮಾಡೋ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನಾಧರಿಸಿದೆ.
ದಿನ | ಕಲೆಕ್ಷನ್ |
ಮೊದಲ ದಿನ (ಬುಧವಾರ) | 8.7 ಕೋಟಿ ರೂಪಾಯಿ. |
ಎರಡನೇ ದಿನ (ಗುರುವಾರ) | 3.85 ಕೋಟಿ ರೂಪಾಯಿ. |
ಮೂರನೇ ದಿನ (ಶುಕ್ರವಾರ) | 4.7 ಕೋಟಿ ರೂಪಾಯಿ. |
ನಾಲ್ಕನೇ ದಿನ (ಶನಿವಾರ) | 4.75 ಕೋಟಿ ರೂಪಾಯಿ |
ಐದನೇ ದಿನ (ಭಾನುವಾರ) | 5.86 ಕೋಟಿ ರೂಪಾಯಿ (ಆರಂಭಿಕ ಅಂದಾಜು). |
ಒಟ್ಟು | 27.86 ಕೋಟಿ ರೂಪಾಯಿ |