ETV Bharat / entertainment

'ನನ್ನ ಸಿನಿಮಾಗಳ ಕಥೆಯನ್ನು ಮೊದಲು ಅಮ್ಮ ಕೇಳ್ತಾರೆ': 'ಪೌಡರ್​​' ನಟಿ ಧನ್ಯಾ ರಾಮ್​​ಕುಮಾರ್ ಸಂದರ್ಶನ - Dhanya Ramkumar Interview - DHANYA RAMKUMAR INTERVIEW

ಧನ್ಯಾ ರಾಮ್​ ಕುಮಾರ್ ಹಾಗೂ ದಿಂಗತ್ ಮಂಚಾಲೆ ನಟನೆಯ ಬಹುನಿರೀಕ್ಷಿತ 'ಪೌಡರ್​​' ಸಿನಿಮಾ ನಾಳೆ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ನಟಿ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಾ, ಹಲವು ವಿಚಾರಗಳನ್ನು ತಿಳಿಸಿದರು.

Dhanya Ramkumar Interview
ನಟಿ ಧನ್ಯಾ ರಾಮ್​​ಕುಮಾರ್ ಸಂದರ್ಶನ (ETV Bharat)
author img

By ETV Bharat Entertainment Team

Published : Aug 22, 2024, 7:04 PM IST

ನಟಿ ಧನ್ಯಾ ರಾಮ್​​ಕುಮಾರ್ ಸಂದರ್ಶನ (ETV Bharat)

ದೊಡ್ಮನೆ ಕುಟುಂಬದಿಂದ ಬಂದು ತಮ್ಮ ನಟನೆಯಿಂದ ಕನ್ನಡಿಗರ ಮನಗೆದ್ದಿರುವ ಚೆಲುವೆ ಧನ್ಯಾ ರಾಮ್​ ಕುಮಾರ್​. ದೂದ್​​ಪೇಡಾ ಖ್ಯಾತಿಯ ದಿಂಗತ್ ಮಂಚಾಲೆ ಜೊತೆ ಜಡ್ಜ್​​​ಮೆಂಟ್ ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ತೊಂದು ಚಿತ್ರದಲ್ಲಿ ಕೈ ಜೋಡಿಸಿದ್ದಾರೆ. ಗುಲ್ಟು ನಿರ್ದೇಶಕ ಜನಾರ್ಧನ ಚಿಕ್ಕಣ್ಣ ನಿರ್ದೇಶಿಸಿರುವ 'ಪೌಡರ್​​' ಚಿತ್ರದಲ್ಲಿ ಧನ್ಯಾ ರಾಮ್​​ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಕೆಆರ್​​ಜಿ ಸ್ಟುಡಿಯೋಸ್ ಮತ್ತು ಟಿವಿಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಕನ್ನಡದ ಬಹುನಿರೀಕ್ಷಿತ ಚಿತ್ರವೇ 'ಪೌಡರ್​​'. ಈ ಸಿನಿಮಾದಲ್ಲಿ ಧನ್ಯಾ ರಾಮ್​​ಕುಮಾರ್ ಯಾವ ರೀತಿಯ ಪಾತ್ರ ನಿರ್ವಹಿಸಿದ್ದಾರೆ? ಧನ್ಯಾ ಸಿನಿಮಾಗಳ ಕಥೆಯನ್ನು ಮೊದಲು ಯಾರು ಕೇಳ್ತಾರೆ? ಹೀಗೆ ಸಾಕಷ್ಟು ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ನಟಿ ಹಂಚಿಕೊಂಡಿದ್ದಾರೆ.

ಪೌಡರ್ ಅಂದಾಕ್ಷಣ ಧನ್ಯಾರಿಗೆ ತಮ್ಮ ಸ್ಕೂಲ್ ಲೈಫ್​​ನ ಚಾಕೋ ಪೌಡರ್ ನೆನಪಾಗುತ್ತದೆ. ಹಾಗೇ ಜಾನ್ಸನ್ ಬೇಬಿ ಪೌಡರ್ ಕೂಡಾ ನೆನಪಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. "ಚಿತ್ರದಲ್ಲಿ ನನ್ನ ಪಾತ್ರದ ಹೆಸರು ನಿತ್ಯಾ. ನರ್ಸ್ ಕ್ಯಾರೆಕ್ಟರ್ ನಿಭಾಯಿಸಿದ್ದೇನೆ. ಸಿನಿಮಾದಲ್ಲಿ ದಿಗಂತ್ ಹಾಗೂ ದುಡ್ಡಂದ್ರೆ ಇಷ್ಟ. ದುರಾಸೆ ಜೊತೆಗೆ ಕಾಮಿಡಿಯೂ ಇರುವ ಪಾತ್ರ ನನ್ನದು. ಮೊದಲು ಕಾಮಿಡಿ ಮಾಡಲು ನನ್ನಿಂದ ಆಗುತ್ತಾ ಅನ್ನೋ ಭಯವಿತ್ತು. ಆದ್ರೆ ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ ಅವರು ಉತ್ಸಾಹ ತುಂಬಿ ನನ್ನ ಕಡೆಯಿಂದ ಕಾಮಿಡಿ ಮಾಡಿಸಿದ್ದಾರೆ. ಸೀನ್​ಗಳು ಸಖತ್ತಾಗಿ ಮೂಡಿ ಬಂದಿವೆ. ತುಂಬಾ ಇಷ್ಟಪಟ್ಟು ನನ್ನ ಪಾತ್ರ ನಿರ್ವಹಿಸಿದ್ದೇನೆ" ಎಂದು ತಿಳಿಸಿದರು.

"ಒಳ್ಳೆ ಚಿತ್ರತಂಡದೊಂದಿಗೆ ಕೆಲಸ ಮಾಡಬೇಕೆಂದು ಕಾಯುತ್ತಿದ್ದೆ. ಆಗ ಬಂದ ಅವಕಾಶವೇ 'ಪೌಡರ್'. ಚಿತ್ರದಲ್ಲಿ ಹಿರಿಯ ನಟ ರಂಗಾಯಣ ರಘು, ದಿಗಂತ್ ಮಂಚಾಲೆ, ಶರ್ಮಿಳಾ ಮಾಂಡ್ರೆ, ಗೋಪಾಲ ಕೃಷ್ಣ ದೇಶಪಾಂಡೆ ಅವರುಗಳ ಜೊತೆ ಕೆಲಸ ಮಾಡಿದ್ದೇನೆ. ಕೆಆರ್​ಜಿ ಸಂಸ್ಥೆ ಮೇಲೆ ನಂಬಿಕೆಯಿದೆ. ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಹೆಚ್ಚಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ನಮ್ಮ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಹೆಮ್ಮೆ ಇದೆ. ಶರ್ಮಿಳಾ ಮಾಂಡ್ರೆ ಅವರ ಜೊತೆ ಕೆಲಸ ಮಾಡಿದ್ದು ಸಖತ್ ಖುಷಿ ಕೊಟ್ಟಿದೆ. ನಾವು ಆತ್ಮೀಯ ಸ್ನೇಹಿತೆಯರಾಗಿದ್ದೇವೆ. ಕಾಮಿಡಿ ಮಾಡುತ್ತಲೇ ನಾವು ಈ ಸಿನಿಮಾದ ಶೂಟಿಂಗ್ ಮುಗಿಸಿದೆವು" ಎಂದು ತಿಳಿಸಿದರು.

"ಇನ್ನೂ ನನ್ನ ಸಿನಿಮಾಗಳ ಕಥೆಯನ್ನು ಮೊದಲು ನನ್ನ ಅಮ್ಮ ಕೇಳ್ತಾರೆ. ಅವರಿಗೆ ಇಷ್ಟ ಆದ್ರೆ ನನ್ನ ಜೊತೆ ಚರ್ಚೆ ಮಾಡ್ತಾರೆ. ಆಮೇಲೆ ನಾನು ಕೂಡ ಕಥೆ ಕೇಳಿ ನಮ್ಮ ಅಪ್ಪ, ಅಣ್ಣ ಹಾಗೂ ನಮ್ಮ ಆಂಟಿಯವರ ಜೊತೆ ಚರ್ಚೆ ಮಾಡಿದ ಬಳಿಕ ಆ ಸಿನಿಮಾ ಒಪ್ಪಿಕೊಳ್ಳುತ್ತೇನೆ" ಎಂದು ಮಾಹಿತಿ ನೀಡಿದ್ರು.

"ಈ ಸಂದರ್ಭ ಅಪ್ಪು ಮಾಮನನ್ನು ನೆನಪಿಸಿಕೊಳ್ಳುತ್ತೇನೆ. ಅಪ್ಪು ಮಾಮ ನನ್ನ ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ಕನ್ನಡ ಸಿನಿಮಾಗಳ ಬೆಳವಣಿಗೆ ಕಡೆ ಗಮನ ಹರಿಸುತ್ತಿದ್ದರು. ಹೊಸಬರ ಸಿನಿಮಾಗಳನ್ನು ಪ್ರೋತ್ಸಾಹ ಮಾಡುತ್ತಿದ್ದರು. ಅವರೀಗ ನಮ್ಮೊಂದಿಗಿಲ್ಲ ಎಂದು ನಾನು ಅಂದುಕೊಂಡಿಲ್ಲ. ಅವರ ಪವರ್ ನನ್ನಲ್ಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಮತ್ತು ನನ್ನ ಪತ್ನಿಯೊಂದಿಗೆ ನಟಿಸುವ ಆಸೆ​​: 'ಪೌಡರ್​' ನಟ ದಿಗಂತ್​​ ಸಂದರ್ಶನ - Diganth Manchale Interview

"ನನ್ನ ಮೊದಲ ಸಿನಿಮಾದಲ್ಲಿ ನಾನು ಡಬ್ಬಿಂಗ್ ಮಾಡಿರೋದನ್ನು ಗಮನಿಸಿ ನಿನ್ನ ವಾಯ್ಸ್ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ಹಾಗೇ, ಅವರು ತಾತನ ಹುಟ್ಟುಹಬ್ಬಕ್ಕೆ ಹಾಡುಗಳನ್ನು ಹಾಡಿ ತಾತನ ನೆನಪಿಸಿಕೊಳ್ಳುತ್ತಿದ್ದರು. ಮುಂದಿನ ದಿನಗಳಲ್ಲಿ ಅಪ್ಪು ಮಾಮನಂತೆ ಇಬ್ಬರ (ಪುನೀತ್​​ ಮತ್ತು ರಾಜ್​​ಕುಮಾರ್) ಹುಟ್ಟುಹಬ್ಬಕ್ಕೂ ಒಂದೊಂದು ಹಾಡನ್ನು ಹಾಡಿ ವಿಡಿಯೋ ಮೂಲಕ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: 'ಆಫ್ಟರ್​ ಆಪರೇಷನ್ ಲಂಡನ್ ಕೆಫೆ': ನಕ್ಸಲಿಸಂ ಕಥೆ ಹೇಳಲಿದ್ದಾರೆ ಕವೀಶ್, ಮೇಘಾ ಶೆಟ್ಟಿ- ಟೀಸರ್​ ನೋಡಿದ್ರಾ? - After Operation London Cafe

ಸದ್ಯ ಪೌಡರ್ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿರುವ ಧನ್ಯಾ ರಾಮ್​​ಕುಮಾರ್ ಅವರು ಪೃಥ್ವಿ ಅಂಬಾರ್ ಜೊತೆ ಚೌಕಿದಾರ್ ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಒಟ್ಟಾರೆ ಟ್ರೇಲರ್​​ನಿಂದಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ ಪೌಡರ್ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿದ್ದು, ಕಾರ್ತಿಕ್ ಗೌಡ, ಯೋಗಿ ಜಿ.ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಾಳೆ ಚಿತ್ರಮಂದಿರಗಳು 'ಪೌಡರ್'​​​ನಿಂದ ಘಮಘಮಿಸಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.