ETV Bharat / entertainment

'ದೃಶ್ಯಂ ಅಜಯ್​ ದೇವ್​ಗನ್​ ಸಿನಿಮಾ': ರೊಚ್ಚಿಗೆದ್ದ ಮೋಹನ್​ಲಾಲ್​ ಫ್ಯಾನ್ಸ್ - ಅಜಯ್​ ದೇವ್​ಗನ್

ದೃಶ್ಯಂ ಅನ್ನು ಅಜಯ್​ ದೇವ್​ಗನ್​ ಸಿನಿಮಾ ಎಂದು ಉಲ್ಲೇಖಿಸಿದ ವರದಿಗಳ ಬಗ್ಗೆ ಮೂಲ ಚಿತ್ರದ ನಾಯಕ ಮೋಹನ್​ಲಾಲ್ ಅವರ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ದೃಶ್ಯಂ ಹಾಲಿವುಡ್​ ರೀಮೇಕ್​​
Drishyam Hollywood Remake
author img

By ETV Bharat Karnataka Team

Published : Mar 1, 2024, 8:23 PM IST

ಮಲಯಾಳಂನಲ್ಲಿ ಮೊದಲು ಬಿಡುಗಡೆಯಾದ 'ದೃಶ್ಯಂ' ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿಯೂ ತೆರೆಕಂಡು ಯಶಸ್ವಿಯಾಗಿದೆ. ಈ ಚಿತ್ರ ಹಾಲಿವುಡ್​​ನಲ್ಲೂ ಮರುನಿರ್ಮಾಣವಾಗಲಿದೆ. ಮಲಯಾಳಂನಲ್ಲಿ ಮೊದಲು ತೆರೆಕಂಡಿದ್ದು ಸೂಪರ್​ ಸ್ಟಾರ್ ಮೋಹನ್​ಲಾಲ್​ ಮುಖ್ಯಭೂಮಿಕೆಯಲ್ಲಿದ್ದರು. ಹಿಂದಿಯಲ್ಲೂ ಬಿಡುಗಡೆ ಆಗಿದ್ದು, ಅಜಯ್​ ದೇವ್​ಗನ್​​ ನಟಿಸಿದ್ದಾರೆ. ಕೆಲ ನೆಟ್ಟಿಗರು, ವರದಿಗಳು ಇದನ್ನು 'ಅಜಯ್​ ದೇವ್​ಗನ್​ ಸಿನಿಮಾ' ಎಂದು ಉಲ್ಲೇಖಿಸಿದ ಹಿನ್ನೆಲೆ ಮೋಹನ್​ಲಾಲ್​ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.

ಅಜಯ್ ದೇವಗನ್ ಅವರ ಚಿತ್ರ ದೃಶ್ಯಂ ಹಾಲಿವುಡ್​ನಲ್ಲಿ ರೀಮೇಕ್​​ ಆಗಲಿದೆ ಎಂದು ಉಲ್ಲೇಖಿಸಿರುವ ವರದಿಗಳಿಂದಾಗಿ ಮೋಹನ್ ಲಾಲ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಲಿವುಡ್ ರೀಮೇಕ್ ಘೋಷಣೆ ಹೊರಬಿದ್ದ ಬೆನ್ನಲ್ಲೇ, ಫ್ಯಾನ್ಸ್ ವಾರ್ ಶುರುವಾಗಿದೆ.

2013ರಲ್ಲಿ ಮೊದಲ ಬಾರಿ ಮಲಯಾಳಂನಲ್ಲಿ ದೃಶ್ಯಂ ಸಿನಿಮಾ ಬಂತು. ಮೋಹನ್‌ಲಾಲ್ ಮತ್ತು ಮೀನಾ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. 2015ರಲ್ಲಿ ಅಜಯ್ ದೇವ್​​​ಗನ್ ಮತ್ತು ಟಬು ಮುಖ್ಯಭೂಮಿಕೆಯಲ್ಲಿ ಹಿಂದಿ ರಿಮೇಕ್​ ತೆರೆಗಪ್ಪಳಿಸಿತ್ತು. ಹಿಂದಿ ದೃಶ್ಯಂ ಯಶ ಕಂಡು 2022ರಲ್ಲಿ ಸೀಕ್ವೆಲ್ ಬಂತು. ಈ ಚಿತ್ರ ಪ್ರಪಂಚದಾದ್ಯಂತ 356 ಕೋಟಿ ರೂ. ಕಲೆಕ್ಷನ್​​ ಮಾಡಿತ್ತು.

ಇದನ್ನೂ ಓದಿ: ಬಾಬಿ ಡಿಯೋಲ್​​ಗೆ ಧನ್ಯವಾದ ಅರ್ಪಿಸಿದ ಸೂರ್ಯ ನಟನೆಯ 'ಕಂಗುವ' ನಿರ್ಮಾಪಕರು

ಜೀತು ಜೋಸೆಫ್ ನಿರ್ದೇಶನದ ಮತ್ತು ಮೋಹನ್ ಲಾಲ್ ಅಭಿನಯದ ಮೂಲ ಮಲಯಾಳಂ 'ದೃಶ್ಯಂ' ಚಿತ್ರ ಅಭಿಮಾನಿಗಳು ಹಾಲಿವುಡ್ ರಿಮೇಕ್ ಅನ್ನು ಅಜಯ್ ದೇವಗನ್ ಅವರ ಚಿತ್ರ ಎಂದು ಉಲ್ಲೇಖಿಸಿರುವ ವರದಿಗಳಿಂದ ಅಸಮಾಧಾನಗೊಂಡಿದ್ದಾರೆ. ಎಕ್ಸ್​ ಸೇರಿದಂತೆ ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ನಲ್ಲಿ ತಮ್ಮ ಅಸಮಧಾನ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಚಿತ್ರರಂಗದಲ್ಲಿ 'ನೆಪೋಟಿಸಂ': ಕಂಗನಾಗೆ ಸಿಕ್ತು ತೃಪ್ತಿಕರ ಉತ್ತರ; ಯಾರು, ಏನಂದ್ರು?

ಸೋಷಿಯಲ್​​ ಮೀಡಿಯಾ ಬಳಕೆದಾರರೊಬ್ಬರು ಟ್ವೀಟ್​ ಮಾಡಿದ್ದು, "ದೃಶ್ಯಂ ಅನ್ನು ಅಜಯ್ ದೇವಗನ್ ಅವರ ಸಿನಿಮಾ ಎಂದು ಉಲ್ಲೇಖಿಸಿರುವುದು ಶೇಮ್​ಲೆಸ್​, ಇಗ್ನೋರೆನ್ಸ್. ಇದು ನಟ ಮೋಹನ್‌ಲಾಲ್ ಅಭಿನಯದ, ಜೀತು ಜೋಸೆಫ್ ಅವರ ಚಿತ್ರವಾಗಿದೆ" ಎಂದು ಬರೆದಿದ್ದಾರೆ. ಮತ್ತೋರ್ವರು ಕಾಮೆಂಟ್​ ಮಾಡಿ, ಇದು "ಜೀತು ಜೋಸೆಫ್ ಮತ್ತು ಮೋಹನ್‌ಲಾಲ್​​ ಅವರ ದೃಶ್ಯಂ" ಎಂಬುದನ್ನು ಒಪ್ಪಿಕೊಳ್ಳುವಂತೆ ನೆಟ್ಟಿಗರನ್ನು ಒತ್ತಾಯಿಸಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್​ಗಳು ಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.