ETV Bharat / entertainment

ಆರ್​ ಮಾಧವನ್​​ ಜೊತೆ ಮೇಘಾ ಶೆಟ್ಟಿ: ಬಹುಭಾಷಾ ಸಿನಿಮಾಗೆ ಸಜ್ಜಾದ್ರಾ ಜೊತೆ ಜೊತೆಯಲಿ ನಟಿ? - Megha Shetty with R Madhavan - MEGHA SHETTY WITH R MADHAVAN

ಬಹುಭಾಷಾ ನಟ ಆರ್ ಮಾಧವನ್ ಜೊತೆ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದು, ಹೊಸ ಚಿತ್ರದ ಊಹಾಪೋಹಗಳಿಗೆ ಕಾರಣವಾಗಿದೆ.

Megha Shetty with R Madhavan
ಮೇಘಾ ಶೆಟ್ಟಿ, ಆರ್​ ಮಾಧವನ್​​ (ETV Bharat)
author img

By ETV Bharat Karnataka Team

Published : Jun 7, 2024, 12:57 PM IST

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮಾತಾದವರು ಮೇಘಾ ಶೆಟ್ಟಿ. ಕನ್ನಡ ಕಿರುತೆರೆಯ ಮೂಲಕ ಜನಪ್ರಿಯರಾದ ಈ ಅನು ಸಿರಿಮನೆ, ಆ ನಂತರ ಬೆಳ್ಳಿತೆರೆ ಪ್ರವೇಶಿಸಿದರು. ತ್ರಿಬಲ್ ರೈಡಿಂಗ್, ದಿಲ್ ಪಸಂದ್, ಕೈವ ಸಿನಿಮಾಗಳಲ್ಲಿ ಅಭಿಯಿಸುವ ಮೂಲಕ ಬಿಗ್ ಸ್ಕ್ರೀನ್​ನಲ್ಲೂ ತಮ್ಮ ಸ್ಥಾನ ಗಿಟ್ಟಿಸಿಕೊಂಡರು. ಆದ್ರೆ ನಿರೀಕ್ಷಿತ ಮಟ್ಟಕ್ಕೆ ಇನ್ನೂ ತಲುಪಿಲ್ಲ ಅನ್ನೋದು ಅನೇಕರ ಅಭಿಪ್ರಾಯ.

ಹೌದು, ಕಿರುತೆರೆಯಲ್ಲಿ ಸಿಕ್ಕ ಪ್ರೇಕ್ಷಕರ ಪ್ರೀತಿ ಇವರಿಗೆ ಹಿರಿತೆರೆಯಲ್ಲಿನ್ನೂ ಸಿಕ್ಕಿಲ್ಲ. ದೊಡ್ಡದೊಂದು ಗೆಲುವು ಮೇಘಾ ಶೆಟ್ಟಿ ಅವರಿಗೆ ದಕ್ಕಬೇಕೆನ್ನುವುದು ಅಭಿಮಾನಿಗಳ ಆಶಯ. ಹೀಗಿರುವಾಗ ಮೇಘಾ ಶೆಟ್ಟಿ ಕೂಡ ಪರಭಾಷೆ ಸಿನಿಮಾ ಇಂಡಸ್ಟ್ರಿಯ ಪಾಲಾಗುತ್ತಾರೆ ಎನ್ನುವ ಚಿಂತೆ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು, ಬಹುಭಾಷಾ ನಟ ಆರ್ ಮಾಧವನ್ ಜೊತೆ ಮೇಘಾ ಶೆಟ್ಟಿ ಕ್ಲಿಕ್ಕಿಸಿಕೊಂಡ ಸೆಲ್ಫಿ.

ನಟ ಆರ್ ಮಾಧವನ್ ತಮ್ಮ ಅತ್ಯುತ್ತಮ ಸಿನಿಮಾಗಳ ಮೂಲಕ ನಾರ್ತ್, ಸೌತ್​​ ಎರಡರಲ್ಲೂ ಫೇಮಸ್ ಆಗಿದ್ದಾರೆ. ಹಿಂದಿ ಹಾಗೂ ತಮಿಳಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಆರ್ ಮಾಧವನ್ ಜೊತೆ ಕನ್ನಡದ ನಟಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮಹೇಶ್ ಬಾಬು - ರಾಜಮೌಳಿ ಸಿನಿಮಾ 2027ಕ್ಕೆ ರಿಲೀಸ್​​​ - SSMB29

ಸ್ವತಃ ನಟಿ ಮೇಘಾ ಶೆಟ್ಟಿ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಮಾಧವನ್ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಸಾಧಾರಣ ನಟನೊಂದಿಗೆ ಉತ್ತಮ ಸಮಯ ಕಳೆದೆ. ನಿಜವಾಗಿಯೂ ಇದೊಂದು ಉತ್ತಮ ಕಲಿಕೆಯ ಅನುಭವ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಸರ್ಕಾರ ಸುಗಮವಾಗಿ ಸಾಗಲಿದೆಯೇ?' ಚುನಾವಣೆ ಫಲಿತಾಂಶದ ಬಗ್ಗೆ 'ರಾಮಾಯಣ'ದ ಲಕ್ಷ್ಮಣ ಪಾತ್ರಧಾರಿ ಬೇಸರ - Ramayana Actor on Election Results

ಮಾಧವನ್ ಜೊತೆಗಿರುವ ಮೇಘಾ ಶೆಟ್ಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋಗಳಿಗೆ ಅಭಿಮಾನಿಗಳು ಲೈಕ್​​ಗಳ ಸುರಿಮಳೆಗೈದಿದ್ದಾರೆ. ಜೊತೆಗೆ ಕನ್ನಡದ ಬ್ಯೂಟಿ ಮೇಘಾ ಶೆಟ್ಟಿ ಬಾಲಿವುಡ್​ಗೆ ಹೋಗ್ತಾರಾ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.