ETV Bharat / entertainment

ಸೊಸೆ, ಪತ್ನಿ ಜೊತೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಬಿಗ್​ ಬಿ; ಏಕಾಂಗಿಯಾಗಿ ಕಾಣಿಸಿಕೊಂಡ ರಣಬೀರ್​ - Amitabh Aishwarya Rai Voting

ಭಾರತದ ಮೆಗಾ​ ಸ್ಟಾರ್​ ಅಮಿತಾಭ್​ ಬಚ್ಚನ್​​​, ಪತ್ನಿ ಜಯಾ ಬಚ್ಚನ್​, ಸೊಸೆ ಐಶ್ವರ್ಯ ರೈ ಜತೆ ಆಗಮಿಸಿ ಮತದಾನ ಮಾಡಿದರು.

author img

By ETV Bharat Karnataka Team

Published : May 20, 2024, 8:29 PM IST

Amitabh Bachchan, Jaya Bachchan Cast Vote, Aishwarya Rai Spotted with Arm Sling, Ranbir Kapoor Gets His Finger Inked - Watch
ಸೊಸೆ, ಪತ್ನಿ ಜೊತೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಬಿಗ್​ ಬಿ.. ಮತಗಟ್ಟೆಯಲ್ಲಿ ಏಕಾಂಗಿಯಾಗಿ ಕಾಣಿಸಿಕೊಂಡ ರಣಬೀರ್​ (ETV Bharat)

ಹೈದರಾಬಾದ್: ಬೇಸಿಗೆಯ ಪ್ರಖರತೆಯ ನಡುವೆ ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಸೋಮವಾರ ಮುಂಬೈನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬಿಗ್​ ಬಿ ಅವರೊಂದಿಗೆ ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಕೂಡ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಇನ್ನು ರಣಬೀರ್ ಕಪೂರ್ ಸಹ ಮತಗಟ್ಟೆಯಲ್ಲಿ ಕಾಣಿಸಿಕೊಂಡರು.

ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಅವರ ಪತ್ನಿ ಜಯಾ ಬಚ್ಚನ್ ಅವರೊಂದಿಗೆ ಮತಗಟ್ಟೆಗೆ ಬಂದು ವೋಟ್​ ಹಾಕಿದರು. ಐಶ್ವರ್ಯಾ ರೈ ಬಚ್ಚನ್, ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ 2024 ನಲ್ಲಿ ಕಾಣಿಸಿಕೊಂಡ ಬಳಿಕ ನಗುಮೊಗದೊಂದಿಗೆ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಮತದಾನದ ಬಳಿಕ ಶಾಯಿ ಹಚ್ಚಿದ ಬೆರಳನ್ನು ಹೆಮ್ಮೆಯಿಂದ ಪ್ರದರ್ಶಿಸಿದರು.

ಬಿಗ್​ ಫ್ಯಾಮಿಲಿ ಹೊರತಾಗಿ ಹಿರಿಯ ನಟಿ ರೇಖಾ ಬಿಳಿ ಉಡುಪಿನೊಂದಿಗೆ ಮತಗಟ್ಟೆಯಲ್ಲಿ ಕಂಗೊಳಿಸಿದರು. ಏತನ್ಮಧ್ಯೆ, ಮುಂಬೈನಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ರಣಬೀರ್ ಕಪೂರ್ ಏಕಾಂಗಿಯಾಗಿ ಬಂದು ಮತ ಚಲಾಯಿಸಿದರು. ಅವರ ಪತ್ನಿ ಆಲಿಯಾ ಭಟ್ ಅನುಪಸ್ಥಿತಿಯಲ್ಲಿ ಮತಗಟ್ಟೆಯಲ್ಲಿ ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುವ ಮೂಲಕ ತಮ್ಮ ಉತ್ಸಾಹವನ್ನು ತೋರಿಸಿದರು.

ಏಳು ಹಂತಗಳಲ್ಲಿ ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಇಂದಿನದ್ದು ಸೇರಿ ಏಳು ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಎರಡು ಹಂತಗಳ ಮತದಾನ ಪ್ರಕ್ರಿಯೆ ಬಾಕಿಯಿದ್ದು, ಜೂನ್ 4 ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.

ಇನ್ನುಳಿದಂತೆ ಮುಂಬೈನ ವಿವಿಧ ಮತಗಟ್ಟೆಗಳಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಪರೇಶ್ ರಾವಲ್, ರೇಖಾ, ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಸೇರಿದಂತೆ ಅನೇಕ ಬಾಲಿವುಡ್ ದಿಗ್ಗಜರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಇದನ್ನು ಓದಿ: ನಟ ಅಮೀರ್​ ಖಾನ್​, ಗೋವಿಂದ, ಧರ್ಮೇಂದ್ರ, ಹೇಮಾ ಮಾಲಿನಿ ಸೇರಿ ಹಲವು ಸಿನಿ ತಾರೆಯರಿಂದ ಮತದಾನ - Lok Sabha Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.