ETV Bharat / entertainment

ರಾಮೋಜಿ ರಾವ್ ನಿಧನಕ್ಕೆ ಲಹರಿ ಆಡಿಯೋ‌ ಸಂಸ್ಥೆ ಮಾಲೀಕ ಲಹರಿ ವೇಲು ಸಂತಾಪ - Lahari Velu condolences Ramoji Rao demise - LAHARI VELU CONDOLENCES RAMOJI RAO DEMISE

ಪತ್ರಿಕಾ ರಂಗದಲ್ಲಿ ರಾಮೋಜಿ ರಾವ್ ಅವರು ಮಾಡಿರುವ ಹೆಸರು ಇಡೀ ದೇಶದಲ್ಲೇ ಯಾರು ಮಾಡಿಲ್ಲ ಎಂದು ಲಹರಿ ಆಡಿಯೋ‌ ಸಂಸ್ಥೆ ಮಾಲೀಕ ಲಹರಿ ವೇಲು ಕೊಂಡಾಡಿದರು.

ಲಹರಿ ವೇಲು
ಲಹರಿ ವೇಲು (ETV Bharat)
author img

By ETV Bharat Karnataka Team

Published : Jun 8, 2024, 3:35 PM IST

Updated : Jun 8, 2024, 3:56 PM IST

ಲಹರಿ ವೇಲು (ETV Bharat)

ಬೆಂಗಳೂರು: ಮಾಧ್ಯಮ ಲೋಕದ ಭೀಷ್ಮ ರಾಮೋಜಿ ರಾವ್ ನಿಧನಕ್ಕೆ ಲಹರಿ ಆಡಿಯೋ‌ ಸಂಸ್ಥೆ ಮಾಲೀಕ ಲಹರಿ ವೇಲು ಕಂಬನಿ ಮಿಡಿದಿದ್ದಾರೆ.

ಕುರಿತು ಭಾವುಕ ನುಡಿಗಳನ್ನಾಡಿರುವ ಅವರು, ಪತ್ರಿಕಾ ರಂಗದ ದಿಗ್ಗಜರಾದ ರಾಮೋಜಿ ರಾವ್​ ಇನ್ನಿಲ್ಲ ಎಂಬ ಸುದ್ದಿ ತಿಳಿದು ಆಘಾತವಾಗಿದೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಈಟಿವಿ, ಈನಾಡು, ರಾಮೋಜಿ ಫಿಲ್ಮ್ ಸಿಟಿ ಎಂಬ ಸಾಮ್ರಾಜ್ಯವನ್ನೇ ಕಟ್ಟಿ, ಸಾವಿರಾರು ಜನರಿಗೆ ಅನ್ನದಾತರಾಗಿದ್ದಾರೆ. ಪತ್ರಿಕಾ ರಂಗದಲ್ಲಿ ಅವರು ಮಾಡಿರುವ ಹೆಸರು ಇಡೀ ದೇಶದಲ್ಲೇ ಯಾರೂ ಮಾಡಿಲ್ಲ. ಅವರು ಇನ್ನಿಲ್ಲ ಎಂಬುದು ದಕ್ಷಿಣ ಭಾರತದ ಪ್ರತಿಯೊಬ್ಬರಿಗೂ ನೋವಾಗಿದೆ. ಅಂದುಕೊಂಡಿದ್ದನ್ನು ಮಾಡಿದಂತಹ ಮಾಹಾನ್​ ವ್ಯಕ್ತಿ ಅವರು. ಅವರ ಇಡೀ ಸಾಮ್ರಾಜ್ಯವನ್ನು ನಡೆಸಲು ಕುಟುಂಬಸ್ಥರಿಗೆ ಶಕ್ತಿ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.

ಇನ್ನು ರಾಮೋಜಿ ರಾವ್ ನಿಧನಕ್ಕೆ ಕನ್ನಡ ಚಿತ್ರರಂಗದ ಕೆಲ ನಟ, ನಟಿಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ರಾಮೋಜಿ ರಾವ್​ ನಿಧನಕ್ಕೆ ಪ್ರಧಾನಿ, ಚಂದ್ರಬಾಬು ನಾಯ್ಡು ಸೇರಿ ಸಿನಿ ಗಣ್ಯರಿಂದ ಸಂತಾಪ - Narendra modi condolences Ramoji Rao demise

Last Updated : Jun 8, 2024, 3:56 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.