ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತನ್ನದೇ ಆದ ಅಭಿನಯ ಶೈಲಿಯಿಂದ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್. ಸದ್ಯ 'ರಾನಿ' ಸಿನಿಮಾ ಜಪ ಮಾಡುತ್ತಿದ್ದಾರೆ. ಕಿರಣ್ ರಾಜ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡು, ಮಾಸ್ ಆ್ಯಂಡ್ ಕ್ಲಾಸ್ ಲುಕ್ನಲ್ಲಿ ಮಿಂಚಿದ್ದಾರೆ.
ರಾನಿ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಟ್ರೇಲರ್ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಿರಣ್ ರಾಜ್ ಅವರ ಆ್ಯಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಅವರ ಸಂಭಾಷಣೆ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ ಬಿ ಕೋಲಾರ ಅವರ ಕ್ಯಾಮರಾ ವರ್ಕ್ ಎಲ್ಲವೂ ಚೆನ್ನಾಗಿದೆ. ಸಿನಿಮಾದ ಕ್ವಾಲಿಟಿ ಟ್ರೇಲರ್ನಲ್ಲಿ ಎದ್ದು ಕಾಣುತ್ತಿದೆ. ಪ್ರತಿ ಬಾರಿ ಚಿತ್ರತಂಡ ನಮ್ಮದು ಫ್ಯಾಮಿಲಿ ಆಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದ್ದು, ಟ್ರೇಲರ್ನಲ್ಲೂ ಆ ಅಂಶ ಕಂಡುಬರುತ್ತಿದೆ.
ಗುರುತೇಜ್ ಶೆಟ್ಟಿ ನಿರ್ದೇಶನದ ರಾನಿ ಚಿತ್ರ ಗ್ಯಾಂಗ್ಸ್ಟರ್ ಕಥೆಯಾಗಿದೆ. ಈ ಚಿತ್ರದಲ್ಲಿ ಕಿರಣ್ ರಾಜ್ ಅವರಿಗೆ ಸಮೀಕ್ಷ, ಅಪೂರ್ವ ಹಾಗೂ ರಾಧ್ಯಾ ಮೂವರು ನಾಯಕಿಯರಿದ್ದು, ಪೋಷಕ ಪಾತ್ರದಲ್ಲಿ ರವಿಶಂಕರ್, ಮಂಜು, ಉಗ್ರಂ ರವಿ, ಗಿರೀಶ್ ಹೆಗಡೆ, ಬೇಡ ಸುರೇಶ, ಮೈಕೋ ನಾಗರಾಜ್, ಸುಜಯ್ ಶಾಸ್ತ್ರಿ, ಲಕ್ಷ್ಮೀ ಸಿದ್ದಯ್ಯ, ಅನಿಲ್ ಯಾದವ್, ಶ್ರೀಧರ್, ಮಂಡ್ಯ ರಮೇಶ್ ಹೀಗೆ ದೊಡ್ಡ ತಾರಾಬಳಗವಿದೆ.
ರಾಘವೇಂದ್ರ ಬೇಡ ಕೋಲಾರ ಛಾಯಾಗ್ರಾಹಣ, ಉಮೇಶ್ ಸಂಕಲನ ಸತೀಶ್ ಕಲಾ ನಿರ್ದೇಶನ ಧನಂಜಯ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದ್ದು, ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೈಲರ್ ನಿಂದ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರ ಸೆಪ್ಟೆಂಬರ್ 12ರಂದು ತೆರೆಗೆ ಬರಲಿದೆ.