ETV Bharat / entertainment

ಸಿನಿಮಾ ಆಗ್ತಿದೆ ಹೈದರಾಬಾದ್ ಅತ್ಯಾಚಾರ, ಕೊಲೆ ಪ್ರಕರಣ; ಪ್ರಮುಖ ಪಾತ್ರದಲ್ಲಿ ಕರೀನಾ - Kareena Kapoor Khan - KAREENA KAPOOR KHAN

ಹೈದರಾಬಾದ್‌ನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಧರಿಸಿದ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಅಭಿನಯಿಸಲಿದ್ದಾರೆ.

Kareena Kapoor Khan
ಕರೀನಾ ಕಪೂರ್ ಖಾನ್ (ANI)
author img

By ETV Bharat Karnataka Team

Published : Jun 19, 2024, 6:17 PM IST

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಮತ್ತೊಮ್ಮೆ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷಗಳನ್ನು ಪೂರೈಸಿರುವ ಚೆಂದುಳ್ಳಿ ಚೆಲುವೆಯ ಕೊನೆಯ 'ಕ್ಯ್ರೂ' ಸಿನಿಮಾ ಸೂಪರ್ ಹಿಟ್ ಆಗಿದ್ದು, ಮುಂದಿನ ಸಿನಿಮಾ ನಟಿಯ ವೃತ್ತಿಜೀವನದಲ್ಲಿ ಪ್ರಮುಖ ಸಿನಿಮಾ ಆಗಲಿದೆ ಎಂಬ ಭರವಸೆ ಮೂಡಿಸಿದೆ.

ಕರೀನಾ ನಟನೆಯ ಮುಂದಿನ ಚಿತ್ರದ ಶೀರ್ಷಿಕೆ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಚಿತ್ರಕಥೆ ಹೈದರಾಬಾದ್‌ನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಆಧರಿಸಿದೆ. 'ಛಪಾಕ್' ಮತ್ತು 'ರಾಝಿ'ಯಂತಹ ಚಿತ್ರಗಳ ನಿರೂಪಣಾ ಶೈಲಿಗೆ ಹೆಸರುವಾಸಿಯಾಗಿರುವ ಮೇಘನಾ ಗುಲ್ಜಾರ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

ಇದನ್ನೂ ಓದಿ: 'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ - Hamare Baarah Movie

ನಟ ಆಯುಷ್ಮಾನ್ ಖುರಾನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಕರೀನಾ ಕಪೂರ್ ಖಾನ್ ಅವರ ಮತ್ತೊಂದು ಅದ್ಭುತ ಪಾತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.