ETV Bharat / entertainment

ಸೈಫ್​ ಪುತ್ರ ಇಬ್ರಾಹಿಂ ಸಿನಿಮಾ ಘೋಷಿಸಿದ ಕರಣ್​ ಜೋಹರ್​: ಮತ್ತೋರ್ವ ಸ್ಟಾರ್​ ಕಿಡ್​ಗೆ ಛಾನ್ಸ್‌ - IBRAHIM ALI KHAN

ಬಾಲಿವುಡ್​ನ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರು ಇಂದು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್​ ಅವರ ಚೊಚ್ಚಲ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

Ibrahim Ali Khan, Karan Johar
ಇಬ್ರಾಹಿಂ ಅಲಿ ಖಾನ್​, ಕರಣ್​ ಜೋಹರ್ (Photo: IANS, ANI)
author img

By ETV Bharat Entertainment Team

Published : Jan 29, 2025, 2:13 PM IST

ಬಾಲಿವುಡ್‌ನ ವಿಚ್ಛೇದಿತ ತಾರಾ ದಂಪತಿ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ಬಾಲಿವುಡ್​ನ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅಧಿಕೃತವಾಗಿ ಘೋಷಿಸಿದ್ದಾರೆ. ಇಬ್ರಾಹಿಂ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸುತ್ತಿರುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಾ, ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​ಗಳಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.

ತಮ್ಮ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಇಬ್ರಾಹಿಂ ಅಲಿ ಖಾನ್​ ಅವರ ಕ್ಯಾಂಡಿಡ್​​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಇಬ್ರಾಹಿಂ ಕುಟುಂಬದೊಂದಿಗಿನ ಬಾಂಧವ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೇವಲ 12 ವರ್ಷದವನಿದ್ದಾಗ ಅಮೃತಾ ಸಿಂಗ್ ಅವರನ್ನು ಕರಣ್​ ಭೇಟಿಯಾಗಿದ್ದರು. ಇದೀಗ ತಮ್ಮ ಮೊದಲ ಭೇಟಿಯನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

"ನಾನು ಕೇವಲ 12 ವರ್ಷದವನಿದ್ದಾಗ ಅಮೃತಾ/ಡಿಂಗಿ ಅವರನ್ನು ಭೇಟಿಯಾಗಿದ್ದೆ. ಪ್ರೀತಿಪಾತ್ರರು ಅವರನ್ನು ಈ ರೀತಿ ಕರೆಯಲು ಇಷ್ಟಪಡುತ್ತಾರೆ. ನನ್ನ ತಂದೆಯೊಂದಿಗೆ ದುನಿಯಾ ಎಂಬ ಸಿನಿಮಾ ಮಾಡಿದ್ರು. ಅವರು ಹೊಂದಿದ್ದ ಕ್ಯಾಮರಾ ಮೇಲಿನಗ್ರೇಸ್​, ಎನರ್ಜಿ ಮತ್ತು ಕಮಾಡೆಂಟ್​​ ಅನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.

ಅಮೃತಾ ಮತ್ತು ಅವರ ಕೇಶ ವಿನ್ಯಾಸಕಿ ಜೊತೆಗಿನ ಮೊದಲ ಭೇಟಿಯ ನಂತರದ ಕ್ಷಣಗಳನ್ನೂ ನೆನಪಿಸಿಕೊಂಡಿದ್ದಾರೆ. "ಅವರು ಮತ್ತು ಅವರ ಕೇಶ ವಿನ್ಯಾಸಕಿ ಜೊತೆಗಿನ ಭೇಟಿ ನಂತರ ಚೈನೀಸ್ ಡಿನ್ನರ್​​ನ ಕ್ಷಣವನ್ನು ನಾನು ಹೆಚ್ಚಾಗಿ ನೆನಪಿಸಿಕೊಳ್ಳುತ್ತೇನೆ.​ ನಮ್ಮ ಎರಡನೇ ಭೇಟಿಯಲ್ಲಿ ಅವರು ನನ್ನನ್ನು ತಮ್ಮವರಂತೆ ನೋಡಿಕೊಂಡರು. ಆ ಶಕ್ತಿ ಅವರ ಮತ್ತು ಅವರ ಮಕ್ಕಳ ಮೂಲಕ ಜೀವಿಸುತ್ತದೆ" ಎಂದು ತಿಳಿಸಿದರು.

ಆನಂದ್ ಮಹೇಂದ್ರು ಅವರ ಆಫೀಸ್​​ನಲ್ಲಿ ನಟ ಸೈಫ್ ಅಲಿ ಖಾನ್ ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡ ಕರಣ್​​, ಸೈಫ್ ಅವರನ್ನು "ಯುವ, ಸೌಮ್ಯ, ಆಕರ್ಷಕ" ಎಂದು ಬಣ್ಣಿಸಿದರು. ಆ ಕ್ಷಣಕ್ಕೂ ಮತ್ತು ಮಗ ಇಬ್ರಾಹಿಂ ಅವರೊಂದಿಗಿನ ತಮ್ಮ ಮೊದಲ ಭೇಟಿಯೂ ಬಹುತೇಕ ಒಂದೇ ರೀತಿಯಿತ್ತು ಎಂದು ತಿಳಿಸಿದ್ದಾರೆ.

ಸೈಫ್ ಮತ್ತು ಅಮೃತಾ ಅವರೊಂದಿಗೆ ದುನಿಯಾ, ಕಲ್ ಹೋ ನಾ ಹೋ ಮತ್ತು ಕುರುಬಾನ್​​ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಕರಣ್​ ಕೆಲಸ ಮಾಡಿದ್ದಾರೆ. ಜೊತೆಗೆ, ಅವರ ಮಗಳು ಸಾರಾ ಅಲಿ ಖಾನ್ ಅವರೊಂದಿಗೆ 'ಸಿಂಬಾ'ದಲ್ಲಿ ಕೆಲಸ ಮಾಡಿರುವ ಕರಣ್ ಜೋಹರ್ ಕುಟುಂಬದೊಂದಿಗಿನ ತಮ್ಮ ದೀರ್ಘಕಾಲದ ಬಾಂಧವ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಸವಾಲಿಗೆ ಸಿದ್ಧ': ವಿರಾಟ್ ಕೊಹ್ಲಿ ಬಯೋಪಿಕ್​ನಲ್ಲಿ ನಟಿಸುವ ಪ್ರಶ್ನೆಗೆ ವೀರ್ ಉತ್ತರ ಹೀಗಿದೆ

"ಈ ಸ್ನೇಹ ನಮ್ಮ ಪೀಳಿಗೆಯಿಂದ ನಮ್ಮ ಮಕ್ಕಳವರೆಗೆ ಮುಂದುವರಿಯುತ್ತಿದೆ. ನಾನು ಈ ಕುಟುಂಬವನ್ನು 40 ವರ್ಷಗಳಿಂದ ಬಲ್ಲೆ. ಅವರೊಂದಿಗೆ ವಿವಿಧ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ - ಅಮೃತಾ ಜೊತೆ ದುನಿಯಾ, ಸೈಫ್​ ಜೊತೆ ಕಲ್ ಹೋ ನಾ ಹೋ, ಕುರುಬಾನ್​​ ಮತ್ತು ಸಾರಾ ಜೊತೆ ಸಿಂಬಾ, ಇನ್ನೂ ಅನೇಕ (ಮುಂದಿನ ದಿನಗಳಲ್ಲಿ ಬರಲಿದೆ). ಈ ಕುಟುಂಬವನ್ನು ನಾನು ಬಲ್ಲೆ. ಸಿನಿಮಾ ಎಂಬುದು ಅವರ ರಕ್ತದಲ್ಲಿ, ಅವರ ಜೀನ್‌ಗಳಲ್ಲಿ ಮತ್ತು ಅವರ ಉತ್ಸಾಹದಲ್ಲಿ ತುಂಬಿದೆ. ನಾವು ಪ್ರತಿಭೆಯ ಹೊಸ ಅಲೆಗೆ ದಾರಿ ಮಾಡಿಕೊಡುತ್ತಿದ್ದೇವೆ. ಅದನ್ನು ಜಗತ್ತು ನೋಡಲು ಹೆಚ್ಚು ಕಾಯಲು ನನ್ನಿಂದ ಸಾಧ್ಯವಿಲ್ಲ. ಇಬ್ರಾಹಿಂ ನಿಮ್ಮ ಹೃದಯಗಳನ್ನು ಶೀಘ್ರದಲ್ಲೇ ತಲುಪಲಿದ್ದಾನೆ. ಪರದೆ ಪ್ರವೇಶಿಸಲಿದ್ದು, ನಮ್ಮೊಂದಿಗೆ ಇರಿ!" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀತಿ ಖಚಿತಪಡಿಸಿದ ರಶ್ಮಿಕಾ ಮಂದಣ್ಣ : ತಾವು ಆಕರ್ಷಿತರಾಗುವ ಗುಣ ಬಹಿರಂಗಪಡಿಸಿದ ನಟಿ

ಇಬ್ರಾಹಿಂ ಅಲಿ ಖಾನ್, ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದು ಏಳು ವರ್ಷಗಳ ವಿರಾಮದ ನಂತರ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ. ಇಬ್ರಾಹಿಂ ನಟನೆಯ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.