ETV Bharat / entertainment

ಕಲ್ಕಿ ಚಿತ್ರದ ಬಹು ನಿರೀಕ್ಷಿತ ಫಸ್ಟ್​ ಸಿಂಗಲ್ ಭೈರವ ಆಂಥಮ್​ ರಿಲೀಸ್​ - Kalki 2898 AD First Single - KALKI 2898 AD FIRST SINGLE

Kalki 2898 AD First Single Bhairav Anthem : ಕಲ್ಕಿ ಚಿತ್ರದ ಬಹು ನಿರೀಕ್ಷಿತ ಫಸ್ಟ್​ ಸಿಂಗಲ್ ಭೈರವ ಆಂಥಮ್​ ಬಿಡುಗಡೆಯಾಗಿದೆ.

KALKI 2898 AD FIRST SINGLE  KALKI FIRST SONG  BHAIRAVA ANTHEM FILL VIDEO  Full Video Is out
ಕಲ್ಕಿ ಚಿತ್ರದ ಬಹು ನಿರೀಕ್ಷಿತ ಫಸ್ಟ್​ ಸಿಂಗಲ್ ಭೈರವ ಆಂಥಮ್​ ರಿಲೀಸ್​ (Kalki 2898 AD Instagram)
author img

By ETV Bharat Karnataka Team

Published : Jun 17, 2024, 5:07 PM IST

ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದು, ಹೈಪ್ ಹೆಚ್ಚಾಗುತ್ತಿದೆ. ಟ್ರೇಲರ್ ನಂತರ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಆದರೆ ಈ ಚಿತ್ರದ ಮೊದಲ ಹಾಡುಗಾಗಿ ಅಭಿಮಾನಿಗಳು ಕಾಯುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ (ಜೂನ್ 15) ಭೈರವ ಗೀತೆ ಶೀರ್ಷಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಿದ ಮೇಕರ್ಸ್, ಇದೀಗ ಪೂರ್ಣ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಹಾಡು ತೆಲುಗು, ಹಿಂದಿ ಭಾಷೆಗಳಲ್ಲಿ ಮೂಡಿಬಂದಿದೆ. ಹಾಡಿನ ಸಾಹಿತ್ಯ ಆಕರ್ಷಕವಾಗಿದ್ದು, ರಾಮಜೋಗಯ್ಯ ಶಾಸ್ತ್ರಿ ಮತ್ತು ಕುಮಾರ್ ಹಾಡನ್ನು ಬರೆದರೆ, ದಿಲ್ಜಿತ್ ದೋಸಾಂಜ್ ಮತ್ತು ದೀಪಕ್ ಬ್ಲೂ ಹಾಡಿದರು. ಸಂತೋಷ್ ನಾರಾಯಣನ್ ಸಂಯೋಜಿಸಿದ್ದಾರೆ.

ಈ ಹಾಡನ್ನು ಪಂಜಾಬಿ ಶೈಲಿಯಲ್ಲಿ ಹಾಡಲಾಗಿದೆ. ಇದರಲ್ಲಿ ಪಂಜಾಬಿ ಸಾಹಿತ್ಯವೂ ಇದೆ. ಅಲ್ಲದೇ ಈ ಹಾಡಿನಲ್ಲಿ ಪ್ರಭಾಸ್ ಜೊತೆಗೆ ದಿಲ್ಜಿತ್ ಕೂಡ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಉತ್ತಮವಾದ ಬೀಟ್‌ನೊಂದಿಗೆ ಹಾಡು ಆಕರ್ಷಕವಾಗಿ ಮೂಡಿಬಂದಿದೆ. ಸಂತೋಷ್ ನಾರಾಯಣ್ ಈ ಹಾಡಿಗೆ ಉತ್ತಮವಾದ ಟ್ರೆಂಡಿ ಫಾಸ್ಟ್ ಬೀಟ್ ನೀಡಿದ್ದಾರೆ.

ಬಿಗ್ ಬಿ ಅಮಿತಾಬ್ ಬಚ್ಚನ್, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್​ಗಳು ಹಾಗೂ ಟೀಸರ್​ ಅಭಿಮಾನಿಗಳನ್ನು ತುಂಬಾ ಇಂಪ್ರೆಸ್ ಮಾಡಿರುವುದು ಗೊತ್ತೇ ಇದೆ. ಇದು ಮಹಾಭಾರತದಿಂದ ಆರಂಭವಾಗಿ ಕ್ರಿ.ಶ.2898ರಲ್ಲಿ ಕೊನೆಗೊಳ್ಳುವ ಕಥೆ. ವೈಜಯಂತಿ ಮೂವೀಸ್ ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಚಿತ್ರ ಇದೇ ಜೂನ್ 27 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಓದಿ: ಜೂ.23ಕ್ಕೆ 'ಕಲ್ಕಿ ಎಡಿ 2898' ಎರಡನೇ ಟ್ರೇಲರ್ ರಿಲೀಸ್? - Kalki AD Second Trailer

ETV Bharat Logo

Copyright © 2025 Ushodaya Enterprises Pvt. Ltd., All Rights Reserved.