ETV Bharat / entertainment

ಹೀನಾ ಖಾನ್​ಗೆ ಸ್ತನ ಕ್ಯಾನ್ಸರ್: ಬ್ರೆಸ್ಟ್​​ ಕ್ಯಾನ್ಸರ್​ ವಿರುದ್ಧ ಹೋರಾಡಿದ ನಟಿಮಣಿಯರಿವರು - Breast Cancer

author img

By ETV Bharat Karnataka Team

Published : Jun 29, 2024, 12:11 PM IST

ನಟಿ ಹೀನಾ ಖಾನ್ ಮೂರನೇ ಹಂತದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಇವರಂತೆ ಇನ್ನಷ್ಟು ಚಿತ್ರನಟಿಯರು ಈ ರೋಗದಿಂದ ಸಮಸ್ಯೆ ಅನುಭವಿಸಿದ್ದಾರೆ. ಚಿತ್ರರಂಗದ ಕೆಲ ಖ್ಯಾತನಾಮರು ಈ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಕೂಡಾ ಬಂದಿದ್ದಾರೆ. ಆ ಬಗ್ಗೆ ಇಲ್ಲಿದೆ ಕೊಂಚ ಮಾಹಿತಿ.

Hina Khan
ನಟಿ ಹೀನಾ ಖಾನ್ (ANI)

ಜನಪ್ರಿಯ ಕಿರುತೆರೆ ತಾರೆ ಹೀನಾ ಖಾನ್ ಮೂರನೇ ಹಂತದ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪ್ರಾರಂಭವಾಗಿದ್ದು, ಉತ್ತಮವಾಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಸವಾಲನ್ನು ಜಯಿಸುವ ಸಂಕಲ್ಪ ತೊಟ್ಟಿದ್ದು, ಅಭಿಮಾನಿಗಳಿಂದ ಪ್ರಾರ್ಥನೆ ಮತ್ತು ಬೆಂಬಲವನ್ನು ಅಪೇಕ್ಷಿಸಿದ್ದಾರೆ.

ತಾಹಿರಾ ಕಶ್ಯಪ್: 2018ರಲ್ಲಿ ಬಾಲಿವುಡ್​​ ನಟ ಆಯುಷ್ಮಾನ್ ಖುರಾನಾ ಅವರ ಬಾಳ ಸಂಗಾತಿ, ಲೇಖಕಿ - ನಿರ್ದೇಶಕಿ ತಾಹಿರಾ ಕಶ್ಯಪ್ ಸ್ತನ ಕ್ಯಾನ್ಸರ್‌ನಿಂದ ಬಳಲಿದ್ದರು. ಆದರೀಗ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೆ ತಮ್ಮ ಈ ಕಠಿಣ ಹೋರಾಟವನ್ನು ಪ್ರಪಂಚದಿಂದ ಮರೆಮಾಚಲಿಲ್ಲ. ಬದಲಾಗಿ ಎಲ್ಲರೊಂದಿಗೂ ಹಂಚಿಕೊಳ್ಳುವ ಮೂಲಕ, ಮಹಿಳೆಯರಲ್ಲಿ ಧೈರ್ಯ ತುಂಬಿದರು. ಬೋಳು ತಲೆಯ ಚಿತ್ರಗಳಿಂದ ಹಿಡಿದು ಕ್ಯಾನ್ಸರ್​ನ ಕಠಿಣ ಕ್ಷಣಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು, ಈ ಕಾಯಿಲೆ ವಿರುದ್ಧ ಹೋರಾಡುತ್ತಿರುವ ಇತರ ಮಹಿಳೆಯರಲ್ಲಿ ಗುಣಮುಖರಾಗುವ ಭರವಸೆ ಮೂಡಿಸಿದ್ದರು. 2019ರಲ್ಲಿ ಚಿಕಿತ್ಸೆ ಪೂರ್ಣಗೊಂಡು, ಕ್ಯಾನ್ಸರ್ ಮುಕ್ತರಾದರು. ಮೈ-ಎಕ್ಸ್ ಬ್ರೆಸ್ಟ್ ಎಂಬ ಪಾಡ್​​ಕಾಸ್ಟ್ ಮೂಲಕ ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟದ ದಿನಗಳ ಬಗ್ಗೆ ಮತ್ತು ಅವರ ಮಾನಸಿಕ ಯೋಗಕ್ಷೇಮ ಮತ್ತು ಕುಟುಂಬದ ಮೇಲೆ ಪರಿಣಾಮ ಬೀರುವ ಬಗ್ಗೆ ಮಾತನಾಡಿದ್ದರು.

ಬಾರ್ಬರಾ ಮೋರಿ: ತಮ್ಮ ಚೊಚ್ಚಲ ಚಿತ್ರ ಕೈಟ್ಸ್‌ನಲ್ಲಿ ಹೃತಿಕ್ ರೋಷನ್ ಜೊತೆ ತೆರೆಹಂಚಿಕೊಂಡು ಗಮನ ಸೆಳೆದ ಮೆಕ್ಸಿಕನ್ ನಟಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ತಮ್ಮ 29ನೇ ವಯಸ್ಸಿನಲ್ಲಿ, ವೃತ್ತಿಜೀವನದ ಆರಂಭದಲ್ಲಿಯೇ ಸ್ತನ ಕ್ಯಾನ್ಸರ್​ಗೆ ಇವರು ತುತ್ತಾಗಿದ್ದರು. ಆರಂಭಿಕ ಹಂತದಲ್ಲೇ ಪತ್ತೆಯಾದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗಿದೆ. ಅಂದಿನಿಂದ, ತಮ್ಮ ಬಗ್ಗೆ ಸರಿಯಾದ ಕಾಳಜಿ ವಹಿಸಲು ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ ಇವರು ಸಕ್ರಿಯರಾಗಿದ್ದಾರೆ.

"1 ಎ ಮಿನಿಟ್" (1 a minute) ಎಂಬ ಸಾಕ್ಷ್ಯಚಿತ್ರದ ಭಾಗವಾಗಿದ್ದಾರೆ. ಭಾರತೀಯ - ಅಮೇರಿಕನ್ ನಟಿ ನಮ್ರತಾ ಸಿಂಗ್ ಗುಜ್ರಾಲ್​ ನಿರ್ದೇಶಿಸಿದ ಅಮೆರಿಕನ್​ ಡಾಕ್ಯುಡ್ರಾಮಾ ಚಿತ್ರವಾಗಿದ್ದು, ಇದು ಸಾಮಾನ್ಯ ಸ್ತನ ಕ್ಯಾನ್ಸರ್ ರೋಗಿಯ ಜೀವನ, ರೋಗನಿರ್ಣಯದಿಂದ ಹಿಡಿದು ಚಿಕಿತ್ಸೆವರೆಗಿನ ಅನೇಕ ಸಂದರ್ಭಗಳ ಸುತ್ತ ಸುತ್ತುತ್ತದೆ.

ಮುಮ್ತಾಜ್: ಹಿರಿಯ ನಟಿ ಮುಮ್ತಾಜ್ ಅಸ್ಕರಿ ಮಾಧ್ವಾನಿ 2002ರಲ್ಲಿ ತಮ್ಮ 54ರ ಹರೆಯದಲ್ಲಿ ಸ್ತನ ಕ್ಯಾನ್ಸರ್​ಗೆ ಒಳಗಾಗಿದ್ದರು. 6 ಕಿಮೊಥೆರಪಿಗಳು ಮತ್ತು 35 ರೇಡಿಯೇಶನ್​ ಚಿಕಿತ್ಸೆಗಳ ನಂತರ ಸ್ತನ ಕ್ಯಾನ್ಸರ್​ನಿಂದ ಇವರು ಮುಕ್ತರಾಗಿದ್ದರು. ಮುಮ್ತಾಜ್ ಜನಪ್ರಿಯ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ತಾನು ಹೋರಾಟಗಾರ್ತಿ ಮತ್ತು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಉಲ್ಲೇಖಿಸಿದ್ದರು. ಚಿಕಿತ್ಸೆ ನಂತರ, ಸೂಕ್ತ ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿದ್ದರು. 2010ರ ಸಾಕ್ಷ್ಯಚಿತ್ರ 1 ಎ ಮಿನಿಟ್‌ನಲ್ಲಿ ಸ್ತನ ಕ್ಯಾನ್ಸರ್​ ವಿರುದ್ಧ ಹೊರಾಡಿ ಬದುಕುಳಿದ ಇತರೆ ನಟಿಯರೊಂದಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಿಎಂಕೆ ಸರ್ಕಾರದ ವಿರುದ್ಧ ದಳಪತಿ ವಿಜಯ್​ ವಾಗ್ದಾಳಿ.. ಯಾವ ಕಾರಣಕ್ಕೆ ಟೀಕೆ ಗೊತ್ತಾ? - Vijay Slams DMK govt

ಛವಿ ಮಿತ್ತಲ್: 2022ರಲ್ಲಿ ಸ್ತನ ಕ್ಯಾನ್ಸರ್​ಗೊಳಗಾದ ನಟಿ-ನಿರ್ಮಾಪಕಿ ಛವಿ ಮಿತ್ತಲ್, ಲಂಪೆಕ್ಟಮಿ ಚಿಕಿತ್ಸೆ ನಂತರ ಕ್ಯಾನ್ಸರ್​ ಮುಕ್ತರಾದರು. ಸೋಷಿಯಲ್​ ಮೀಡಿಯಾ ಮೂಲಕ ಇತರರಿಗೂ ಸ್ಫೂರ್ತಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.