ETV Bharat / entertainment

ಬ್ರೆಸ್ಟ್ ಕ್ಯಾನ್ಸರ್ ವಿರುದ್ಧ ಹೀನಾ ಖಾನ್​ ಹೋರಾಟ: ಕಿಕ್‌ಬಾಕ್ಸಿಂಗ್ ವಿಡಿಯೋ ಹಂಚಿಕೊಂಡ ನಟಿ - Hina Khan

author img

By ETV Bharat Karnataka Team

Published : Jul 20, 2024, 6:30 PM IST

ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ನಟಿ ಹೀನಾ ಖಾನ್, ಸೋಷಿಯಲ್​​ ಮೀಡಿಯಾದಲ್ಲಿ ತಮ್ಮ ಕಿಕ್‌ಬಾಕ್ಸಿಂಗ್ ಸೆಷನ್‌ನ ವಿಡಿಯೋ ಹಂಚಿಕೊಂಡಿದ್ದಾರೆ.

actress Hina Khan
ನಟಿ ಹೀನಾ ಖಾನ್​​​ (ANI)

ಮೂರನೇ ಹಂತದ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಹಿಂದಿ ಕಿರುತೆರೆ ನಟಿ ಹೀನಾ ಖಾನ್ ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳ ಮೂಲಕ ತಮ್ಮ ಹೆಲ್ತ್​​ ಅಪ್ಡೇಟ್ಸ್ ನೀಡುತ್ತಿದ್ದಾರೆ. ಜೊತೆಗೆ, ತಮ್ಮ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಈ ಸವಾಲಿನ ಸಂದರ್ಭ ತಮ್ಮ ದಿನನಿತ್ಯದ ಜೀವನ ಹೇಗಿದೆ ಎಂಬುದರ ಮಾಹಿತಿ ಒದಗಿಸುತ್ತಿದ್ದಾರೆ. ಅದರಂತೆ ಇಂದು ಅಧಿಕೃತ ಸೋಷಿಯಲ್​​ ಮೀಡಿಯಾದಲ್ಲಿ ತಮ್ಮ ಕಿಕ್‌ಬಾಕ್ಸಿಂಗ್ ಸೆಷನ್‌ನ ವಿಡಿಯೋ ಶೇರ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಹೀನಾ, "ಗೆಲ್ಲಲು ಮುನ್ನುಗ್ಗಿ, ಒಂದು ಸಲಕ್ಕೆ ಒಂದು ಹೆಜ್ಜೆ. ನಾನು ನನಗೆ ಅನಿಸಿದ್ದನ್ನು ಮಾಡುತ್ತಿದ್ದೇನೆ. ಹೌದು, ನಾನು ಹೇಳಿದಂತೆ ನೀವು ಒಳ್ಳೆಯ ದಿನಗಳನ್ನು ಕಂಡುಕೊಳ್ಳಬಹುದು. ಒಳ್ಳೆಯ ದಿನಗಳು ಕಡಿಮೆಯಿದ್ದರೆ, ಹೆಚ್ಚು ಮಾಡಿಕೊಳ್ಳಬಹುದು. ಈ ಪ್ರಯಾಣದಲ್ಲಿ ನಾನೇನು ಮಾಡಿದ್ದೇನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಬರೆದುಕೊಂಡಿದ್ದಾರೆ. ನಟಿಯ ಮಾತುಗಳು, ಕಠಿಣ ಪರಿಸ್ಥಿತಿಯ ನಡುವೆಯೂ ಸಕಾರಾತ್ಮಕ ಅನುಭವಗಳ ಮೇಲೆ ಗಮನ ಕೇಂದ್ರೀಕರಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಧೈರ್ಯದ ಮಾತುಗಳನ್ನಾಡಿದ ಹೀನಾ ಆ ದೇವರಿಗೆ ತಮ್ಮ ಕೃತಜ್ಞತೆಯನ್ನೂ ಅರ್ಪಿಸಿದ್ದಾರೆ. "ನನಗೆ ಶಕ್ತಿ ನೀಡಿದ್ದಕ್ಕಾಗಿ ಅಲ್ಲಾನಿಗೆ ಧನ್ಯವಾದಗಳು. ನಿಮ್ಮ ನಿರಂತರ ಬೆಂಬಲ ಮತ್ತು ನನ್ನ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ಹೆಚ್ಚು ಕಡಿಮೆ ಇದೇ ರೀತಿಯ ಹೋರಾಟಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಗೌರವ, ಪ್ರಾರ್ಥನೆಗಳಿವೆ. ನಿಮ್ಮನ್ನು ನೀವು ಅರಿಯಿರಿ, ನಿಮ್ಮ ಸ್ವಂತ ಮಾರ್ಗ ಕಂಡುಕೊಳ್ಳಿ ಮತ್ತು ನಿಮ್ಮ ದೇಹವನ್ನು ಆಲಿಸಿ" ಎಂದು ಬರೆದುಕೊಂಡಿದ್ದಾರೆ.

ನಟಿ ಹೀನಾ ಖಾನ್ ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಜನಪ್ರಿಯ ಶೋಗಳಾದ 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ', 'ನಾಗಿನ್ 5' ಮತ್ತು 'ಕಸೌತಿ ಜಿಂದಗಿ ಕಿ'ಯ ಎರಡನೇ ಸೀಸನ್‌ನಲ್ಲಿನ ಪಾತ್ರಗಳಿಂದ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಖತ್ರೋನ್ ಕೆ ಖಿಲಾಡಿ ಸೀಸನ್ 8 ಮತ್ತು ಬಿಗ್ ಬಾಸ್ 11 ಅಂತಹ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಡ್ಯಾಮೇಜ್ಡ್ 2 ಎಂಬ ವೆಬ್ ಸರಣಿಯ ಎರಡನೇ ಸೀಸನ್​ನಲ್ಲೂ ಕಾಣಿಸಿಕೊಂಡರು. ಅಲ್ಲದೇ ಹ್ಯಾಕ್ಡ್, ಸ್ಮಾರ್ಟ್‌ಫೋನ್, ಲೈನ್ಸ್, ವಿಶ್‌ಲಿಸ್ಟ್ ಮತ್ತು ಅನ್‌ಲಾಕ್‌ನಂತಹ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ನೀನಾಸಂ ಸತೀಶ್​​ ನಟನೆಯ 'ಅಶೋಕ ಬ್ಲೇಡ್' ನಿರ್ದೇಶಿಸುತ್ತಿದ್ದ ವಿನೋದ್ ದೋಂಡಾಲೆ ಆತ್ಮಹತ್ಯೆ - Director Vinod Dondale Suicide

ಜೂನ್​ ತಿಂಗಳ ಕೊನೆಯಲ್ಲಿ ನಟಿ ತಮ್ಮ ಅನಾರೋಗ್ಯದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಂದಿನಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು, ನೆಟ್ಟಿಗರು ನಟಿಗೆ ಬೆಂಬಲವಾಗಿ ನಿಂತಿದ್ದಾರೆ. ಹೀನಾ ಅವರೂ ಕೂಡ ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳ ಮೂಲಕ ನೆಟ್ಟಿಗರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಕ್ಯಾನ್ಸರ್​ನಂತಹ ತೀವ್ರ ಅನಾರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವವರಿಗೆ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ: Video: ಜೈನ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ: ಕ್ಷಮೆಯಾಚಿಸಿದ ನಾದಬ್ರಹ್ಮ ಹಂಸಲೇಖ - Hamsalekha Apology

ETV Bharat Logo

Copyright © 2024 Ushodaya Enterprises Pvt. Ltd., All Rights Reserved.