ETV Bharat / state

ಆರೋಗ್ಯ ವಿಮೆ ಮೇಲಿನ ಶೇ.18 ರಷ್ಟು ಜಿಎಸ್​ಟಿ ಮರುಪರಿಶೀಲಿಸುವಂತೆ ಪ್ರಧಾನಿಗೆ ದಿನೇಶ್​ ಗುಂಡೂರಾವ್​ ಪತ್ರ - Letter to Prime Minister - LETTER TO PRIME MINISTER

ಆರೋಗ್ಯ ವಿಮೆ ಮೇಲೂ ಶೇ.18 ರಷ್ಟು ಜಿಎಸ್​ಟಿ ಹಾಕುವುದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಮರುಪರಿಶೀಲಿಸುವಂತೆ ಶಿಫಾರಸು ಮಾಡಲು ಮನವಿ ಸಲ್ಲಿಸುವಂತೆ ಪ್ರಧಾನಿ ಮೋದಿಗೆ ರಾಜ್ಯ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಪತ್ರ ಬರೆದಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Sep 6, 2024, 3:36 PM IST

ಬೆಂಗಳೂರು: ಆರೋಗ್ಯ ವಿಮೆಯ ಮೇಲಿನ ಶೇ.18 ರಷ್ಟು ಜಿಎಸ್​ಟಿಯನ್ನು ಮರು ಪರಿಶೀಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಆರೋಗ್ಯ ಸಚಿವರು, ಸೆಪ್ಟೆಂಬರ್ 9 ರಂದು ಸಭೆ ಸೇರಲಿರುವ ಜಿಎಸ್​ಟಿ ಕೌನ್ಸಿಲ್‌ಗೆ, ಮಧ್ಯಮ ಮತ್ತು ಕಡಿಮೆ ಆದಾಯದ ಪಾಲಿಸಿದಾರರಿಗೆ ಆರೋಗ್ಯ ವಿಮೆಯ ಮೇಲಿನ ಶೇ 18ರಷ್ಟು ವಿಧಿಸಿರುವ ತೆರಿಗೆ ಮರು ಪರಿಶೀಲಿಸುವಂತೆ ಶಿಫಾರಸು ಮಾಡಲು ಮನವಿ ಮಾಡಿದ್ದಾರೆ.

letter-to-prime-minister-to-review-18-percent-gst-on-health-insurance-by-dinesh-gundurao
ಆರೋಗ್ಯ ವಿಮೆ ಮೇಲಿನ ಶೇ.18 ರಷ್ಟು ಜಿಎಸ್​ಟಿ ಮರುಪರಿಶೀಲಿಸುವಂತೆ ಪ್ರಧಾನಿಗೆ ದಿನೇಶ್​ ಗುಂಡೂರಾವ್​ ಪತ್ರ (ETV Bharat)

ಆರೋಗ್ಯ ವಿಮೆ ಮೇಲೂ ಶೇ.18 ರಷ್ಟು ಜಿಎಸ್​ಟಿ ಹಾಕುವುದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೆಚ್ಚಿನ ತೆರಿಗೆಯಿಂದಾಗಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿಲ್ಲ. ಬಹುತೇಕ ಮಧ್ಯಮ ವರ್ಗದವರು ಇಂದು ಆರೋಗ್ಯ ವಿಮೆಗಳಿಂದ ದೂರವೇ ಉಳಿಯುತ್ತಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ಆರೋಗ್ಯ ವಿಮೆಯ ರಕ್ಷಣೆ ಸಿಗದೇ ಇಡೀ ಕುಟುಂಬ ವರ್ಗವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ನಾವು ಕಾಣುತ್ತಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಸರ್ಕಾರಗಳು ಸತತ ಪ್ರಯತ್ನಗಳನ್ನು ಮುಂದುವರಿಸಿವೆ.‌ ದೇಶದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಬರುವ ಮೊದಲೇ ಕರ್ನಾಟಕದಲ್ಲಿ ನಾವು 2018ರಲ್ಲೇ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದ್ದೆವು. ಕೇಂದ್ರ ಸರ್ಕಾರವು 2047ರ ವೇಳೆಗೆ ಸಾರ್ವತ್ರಿಕ ವಿಮಾ ಕವರೇಜ್ ಗುರಿಯೊಂದಿಗೆ ರಾಷ್ಟ್ರವ್ಯಾಪಿ ಮಿಷನ್ ಪ್ರಾರಂಭಿಸಿದೆ. ಆರೋಗ್ಯ ವಿಮೆಯನ್ನು ಸಂಪೂರ್ಣವಾಗಿ ನಿರಾಕರಿಸುವಷ್ಟು ಹೆಚ್ಚಿನ ದರದಲ್ಲಿ ತೆರಿಗೆ ವಿಧಿಸುವುದು ವಿಪರ್ಯಾಸ" ಎಂದು ಸಚಿವರು ಹೇಳಿದ್ದಾರೆ.‌

"2017 ರಿಂದಲೂ ಆರೋಗ್ಯ ವಿಮೆಯ ಮೇಲೆ ಶೇ.18ರಷ್ಟು ಜಿಎಸ್​ಟಿ ಹೇರಲಾಗಿದೆ. ಜಿಎಸ್​ಟಿಯ ಹೆಚ್ಚಿನ ದರವು ಪ್ರೀಮಿಯಂಗಳ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತದೆ. ಪರಿಣಾಮ ಆರೋಗ್ಯ ವಿಮೆಯು ಈಗ ಹೆಚ್ಚು ದುಬಾರಿಯಾಗಿದೆ. ಹೆಚ್ಚುತ್ತಿರುವ ವೆಚ್ಚವು ಆರ್ಥಿಕ ದುರ್ಬಲ ವರ್ಗಗಳ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಅವರಿಗೆ ಪ್ರೀಮಿಯಂನಲ್ಲಿ ಸ್ವಲ್ಪ ಹೆಚ್ಚಳವಾದರೂ ಅದನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯ ವಿಮೆಗಳನ್ನು ಜನರು ತಿರಸ್ಕರಿಸುತ್ತಿದ್ದಾರೆ. ವಿಮಾ ರಕ್ಷಣೆಯಿಂದ ವಂಚಿತರಾಗುತ್ತಿದ್ದಾರೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಆರೋಗ್ಯ ವಿಚಾರಗಳಲ್ಲಿ ತೆರಿಗೆ ನೀತಿಗಳು ಜನಪರವಾಗಿರಬೇಕು. ತೆರಿಗೆ ಪ್ರಮಾಣವನ್ನು ಕಡಿತಗೊಳಿಸುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಆರೋಗ್ಯ ವಿಮೆಯ ರಕ್ಷಣೆ ಪಡೆಯುವಂತೆ ಪ್ರೋತ್ಸಾಹಿಸಬಹುದು. ಇದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಆರ್ಥಿಕ ಸ್ಥಿತಿಯನ್ನು ಕಾಪಾಡಬಹುದಾಗಿದೆ. 2047ರ ವೇಳೆಗೆ ಯುನಿವರ್ಸಲ್ ಇನ್ಶೂರೆನ್ಸ್ ಎಂಬ ಆಶಯವನ್ನು ಸಾಧಿಸುವತ್ತ ಧನಾತ್ಮಕ ಹೆಜ್ಜೆ ಇಡಬೇಕು" ಎಂದು ಪತ್ರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ! - Postal Life Insurance

ETV Bharat Logo

Copyright © 2024 Ushodaya Enterprises Pvt. Ltd., All Rights Reserved.