ETV Bharat / technology

ಆಮದಿನಲ್ಲಿ ಹಿಂದಕ್ಕೆ ಬಿದ್ದ ಮರ್ಸಿಡಿಸ್ - ಬೆಂಜ್​​: ಮುನ್ನಡೆ ಕಾಯ್ದುಕೊಂಡ ಬಿಎಂಡಬ್ಲ್ಯು! - BMW leads car market

author img

By ETV Bharat Tech Team

Published : Sep 6, 2024, 3:44 PM IST

ಇಲ್ಲಿಯವರಗೆ ದಕ್ಷಿಣ ಕೊರಿಯಾದಲ್ಲಿ ಮರ್ಸಿಡಿಸ್ - ಬೆಂಜ್​​ ವಿರುದ್ಧ ಟೀಕೆಗಳು ಕೇಳಿ ಬಂದ ಹಿನ್ನೆಲೆ ಆಮದಿನಲ್ಲಿ ಬಿಎಂಡಬ್ಲ್ಯು ಮುನ್ನಡೆ ಕಾಯ್ದುಕೊಂಡಿದೆ.

BMW LEADS IMPORTED CAR MARKET  MERCEDES BENZ FALTERS  BMW CAR SALES
ಬಿಎಂಡಬ್ಲ್ಯು (IANS)

ಸಿಯೋಲ್: ಈ ವರ್ಷ ಇಲ್ಲಿಯವರೆಗೆ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡ ವಾಹನ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಮುನ್ನಡೆ ಕಾಯ್ದುಕೊಂಡಿದೆ ಎಂದು ಉದ್ಯಮದ ಅಂಕಿ - ಅಂಶಗಳ ಮೂಲಕ ತಿಳಿದು ಬಂದಿದೆ. ಏಕೆಂದರೆ ಬಿಎಂಡಬ್ಲ್ಯುಗೆ ಪ್ರಮುಖ ಪ್ರತಿಸ್ಪರ್ಧಿ ಮರ್ಸಿಡಿಸ್-ಬೆಂಜ್​​ ಎಲೆಕ್ಟ್ರಿಕ್ ವಾಹನಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆ ತನ್ನ ಬ್ರ್ಯಾಂಡ್ ಖ್ಯಾತಿಗೆ ಹಿನ್ನಡೆ ಎದುರಿಸುತ್ತಿದೆ.

ಕೊರಿಯಾ ಆಟೋಮೊಬೈಲ್ ಆಮದುದಾರರು ಮತ್ತು ವಿತರಕರ ಸಂಘದ (KAIDA) ಪ್ರಕಾರ, BMW ಜನವರಿಯಿಂದ ಆಗಸ್ಟ್‌ವರೆಗೆ ದೇಶದಲ್ಲಿ ಆಮದು ಮಾಡಲಾದ ಕಾರು ಬ್ರಾಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು 47,390 ಯುನಿಟ್‌ಗಳ ಸಂಚಿತ ಮಾರಾಟವಾಗಿದೆ. 39,666 ಯುನಿಟ್‌ಗಳೊಂದಿಗೆ ಮರ್ಸಿಡಿಸ್ - ಬೆಂಜ್​​ ಎರಡನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.

ಅತಿ ಹೆಚ್ಚು ಮಾರಾಟವಾದ ಮಾಡೆಲ್​ ಯಾವುದು ಗೊತ್ತಾ?: BMW ಕೊರಿಯಾದ 5 ಸೀರಿಸ್​ ಲೈನ್ ಮಾರಾಟಗಳನ್ನು ಕಂಪನಿ ಮುನ್ನಡೆಸಿತು. ಇದು 27.2 ಶೇಕಡಾದಷ್ಟು ಹೊಂದಿದೆ. ಜರ್ಮನ್ ವಾಹನ ತಯಾರಕರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪರಿಷ್ಕೃತ ಎಂಟನೇ ತಲೆಮಾರಿನ 5 ಸೀರಿಸ್​ ಲೈನ್​ ಅನ್ನು ಅನಾವರಣಗೊಳಿಸಿದರು. ವರ್ಷದ ಮೊದಲಾರ್ಧದಲ್ಲಿ BMW 5 ಲೈನ್​ ಸರಣಿಯು ಅತಿ ಹೆಚ್ಚು ಮಾರಾಟವಾದ ಆಮದು ಮಾಡೆಲ್ ಆಗಿದೆ. 10,156 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಟೆಸ್ಲಾದ ಮಾಡೆಲ್ ವೈ 10,041 ಯುನಿಟ್‌ಗಳು ಮಾರಾಟವಾಗಿದೆ.

ಕಳೆದ ವರ್ಷ BMW ಕೊರಿಯಾ ವಾಹನ ಮರ್ಸಿಡಿಸ್ - ಬೆಂಜ್​​​ ಕೊರಿಯಾ ಹಿಂದಿಕ್ಕಿ ಪ್ರಮುಖ ವಿದೇಶಿ ಆಟೋಮೊಬೈಲ್ ಕಂಪನಿಯಾಗಿ ಹೊರಹೊಮ್ಮಿತು. 2023 ರಲ್ಲಿ ದೇಶದಲ್ಲಿ ಮಾರಾಟವಾದ ಒಟ್ಟು 271,034 ವಿದೇಶಿ ವಾಹನಗಳಲ್ಲಿ 77,395 ಯುನಿಟ್‌ಗಳನ್ನು ಹೊಂದಿದೆ. ಈ ಹಿಂದೆ, ಮರ್ಸಿಡಿಸ್ - ಬೆಂಜ್​​ 2015-2022 ರಿಂದ ವಿದೇಶಿ ಆಟೋಮೊಬೈಲ್ ಮಾರಾಟ ಮಾರುಕಟ್ಟೆ ಮುನ್ನಡೆಸಿರುವುದು ಗಮನಾರ್ಹ.

ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುತ್ತಿರುವ ಬಿಎಂಡಬ್ಲ್ಯೂ: ಅನೇಕ ಉದ್ಯಮ ವೀಕ್ಷಕರು BMW ತನ್ನ ಮಾರುಕಟ್ಟೆಯ ಮುನ್ನಡೆಯನ್ನು 2024 ರಲ್ಲಿ ಎರಡನೇ ವರ್ಷಕ್ಕೆ ವಿಸ್ತರಿಸುತ್ತದೆ ಎಂದು ಊಹಿಸುತ್ತಿದ್ದಾರೆ. ವಿಶೇಷವಾಗಿ ಮಾರುಕಟ್ಟೆ ವೀಕ್ಷಕರು ಮತ್ತು ಗ್ರಾಹಕರಿಂದ ಮರ್ಸಿಡಿಸ್ - ಬೆಂಜ್​​​​ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಬಿಎಂಡಬ್ಲ್ಯು ಕೊರಿಯನ್ ಮಾರುಕಟ್ಟೆಯೊಂದಿಗೆ ಗಮನಾರ್ಹವಾದ ವಿಶ್ವಾಸ ಹೆಚ್ಚಿಸುವ ಪ್ರಯತ್ನಗಳನ್ನು ಮಾಡಿದೆ. ಮೇ ತಿಂಗಳಲ್ಲಿ 2024 ರ ಬುಸಾನ್ ಇಂಟರ್​ ನ್ಯಾಷನಲ್​​ ಮೊಬಿಲಿಟಿ ಶೋನಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ವಿದೇಶಿ ಕಾರ್ ಬ್ರ್ಯಾಂಡ್ ಆಗಿ ಭಾಗವಹಿಸಿದೆ.

ಕಳೆದ ತಿಂಗಳು ತನ್ನ EV ಗಳಲ್ಲಿ ಬ್ಯಾಟರಿ ಸೆಲ್‌ಗಳ ಪೂರೈಕೆದಾರರನ್ನು ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸಲು BMW ಮೊದಲ ಆಮದು ಮಾಡಿದ ಕಾರ್ ಬ್ರ್ಯಾಂಡ್ ಆಗಿರುವ ಬಗ್ಗೆ ಅನೇಕ ಉದ್ಯಮ ವೀಕ್ಷಕರು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಿದ್ದಾರೆ. ಹೆಚ್ಚಿನ ಮಾದರಿಗಳು ಸ್ಯಾಮ್‌ಸಂಗ್ ಎಸ್‌ಡಿಐನಿಂದ ಉತ್ಪಾದಿಸಲ್ಪಟ್ಟ ದಕ್ಷಿಣ ಕೊರಿಯಾದ -ನಿರ್ಮಿತ ಬ್ಯಾಟರಿ ಸೆಲ್‌ಗಳೊಂದಿಗೆ ಸಜ್ಜುಗೊಂಡಿರುವುದು ಕಂಡು ಬಂದಿದೆ.

BMW ಕೊರಿಯಾ ಪ್ರಸ್ತುತ ತನ್ನ EV ಚಾರ್ಜಿಂಗ್ ಮೂಲಸೌಕರ್ಯವನ್ನು ದೇಶದಲ್ಲಿ ವಿಸ್ತರಿಸುತ್ತಿದೆ. ಕಳೆದ ವರ್ಷದ ಅಂತ್ಯದ ವೇಳೆಗೆ, ಕಂಪನಿಯ ಚಾರ್ಜಿಂಗ್ ನೆಟ್‌ವರ್ಕ್ ಸುಮಾರು 1,000 ಕೇಂದ್ರಗಳನ್ನು ಒಳಗೊಂಡಿದೆ. ಆದರೆ, ಕಂಪನಿಯು ಈ ವರ್ಷದ ಅಂತ್ಯದ ವೇಳೆಗೆ ಇದನ್ನು 2,100 ನಿಲ್ದಾಣಗಳಿಗೆ ಹೆಚ್ಚಿಸಲು ಯೋಜಿಸಿದೆ.

ಓದಿ: 'ಬಯೋಗ್ಯಾಸ್'ನಲ್ಲಿ ಚಲಿಸುವ ಮಹೀಂದ್ರಾ CBG ಟ್ರಾಕ್ಟರ್: ರೈತರಿಗೆ ಲಾಭವೋ ಲಾಭ! - Mahindra Biogas CBG Tractor

ETV Bharat Logo

Copyright © 2024 Ushodaya Enterprises Pvt. Ltd., All Rights Reserved.