ಬೆಂಗಳೂರು: ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ವಶಪಡಿಸಿಕೊಂಡ 38.11 ಕೋಟಿ ರೂ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನ ಬೆಂಗಳೂರು ಪೊಲೀಸರು ನಾಶಪಡಿಸಿದ್ದಾರೆ.
27 ಜೂನ್ 2024ರಿಂದ 10 ಜನವರಿ 2025ರ ವರೆಗೆ ನಗರದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 745.769 ಕೆಜಿ ವಿವಿಧ ಮಾದಕ ಪದಾರ್ಥಗಳನ್ನ ದಾಬಸ್‌ಪೇಟೆಯ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್ ಡಿವಿಷನ್ ಆಫ್ ರಿ-ಸಸ್ಟೇನಬೆಲಿಟಿ ಲಿಮಿಟೆಡ್‌ನಲ್ಲಿ ನಾಶಪಡಿಸಲಾಗಿದೆ. ನ್ಯಾಯಾಲಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಮಾದಕ ವಿಲೇವಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಡ್ರಗ್ಸ್ ನಾಶಪಡಿಸಲಾಗಿದೆ.
ನಾಶಪಡಿಸಲಾದ ಮಾದಕ ವಸ್ತುಗಳ ವಿವರ : 699.29 ಕೆಜಿ ಗಾಂಜಾ, 1.970 ಕೆಜಿ ಹ್ಯಾಶಿಶ್ ಆಯಿಲ್, 702 ಗ್ರಾಂ ಚರಸ್, 163 ಗ್ರಾಂ ಕೊಕೇನ್, 19.557 ಕೆಜಿ ಎಕ್ಸ್‌ಟಸಿ ಪುಡಿ/ಹರಳುಗಳು, 287 ಎಕ್ಸ್‌ಟಸಿ ಮಾತ್ರೆಗಳು, 38 ಗ್ರಾಂ ಎಕ್ಸ್‌ಟಸಿ ಯಾಬಾ, 12.450 ಕೆಜಿ ಎಂಎಸ್ಎಂ, 842 ಟಪೆಂಟಾಡೋಲ್ ಮಾತ್ರೆಗಳು, 5.100 ಕೆಜಿ ಪವರ್ ಮುನಕ್ಕಾವತಿ, 60 ಟೈಡಾಲ್ ಮಾತ್ರೆಗಳು, 260 ಬಾಟಲ್ ಎಸ್ಕಫ್ ಸಿರಪ್, 4.900 ಕೆಜಿ ಸೋಡಿಯಂ ಹೈಡ್ರಾಕ್ಸೈಡ್.
ಇದನ್ನೂ ಓದಿ: ವಿದೇಶಿ ಡ್ರಗ್ಸ್ ಪೆಡ್ಲರ್ಗಳ ದಂಧೆಗೆ ಕಡಿವಾಣ ಹಾಕಿದ ಬೆಂಗಳೂರು ನಗರ ಪೊಲೀಸರು
ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವರ್ಷ ಡ್ರಗ್ಸ್ ಘಾಟು ಕೊಂಚ ಇಳಿಸಿದ ಪೊಲೀಸರು: ₹95 ಕೋಟಿ ಮೌಲ್ಯದ ತರಹೇವಾರಿ ಡ್ರಗ್ಸ್ ಜಪ್ತಿ