How to Fry Papad Without Oil: ಸಂಜೆ ಏನಾದರೂ ತಿಂಡಿ ತಿನ್ನಬೇಕು ಎನಿಸುತ್ತದೆ. ಆಗ ಪಾಪಡ್ ಮತ್ತು ಚಿಪ್ಸ್ ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಇವು ತುಂಬಾ ರುಚಿಕರ ಆಗಿರುತ್ತವೆ. ಆದರೆ, ಇವುಗಳನ್ನು ಎಣ್ಣೆಯಲ್ಲಿ ಕರಿಯುವುದರಿಂದ ಅನೇಕರಿಗೆ ಆರೋಗ್ಯದ ಸಮಸ್ಯೆಗಳ ಭಯವಿರುತ್ತದೆ. ಅದಕ್ಕಾಗಿ ನಿಮಗಾಗಿಯೇ ಸೂಪರ್ ಟಿಪ್ಸ್ ತಂದಿದ್ದೇವೆ. ಇವುಗಳನ್ನು ಪಾಲಿಸಿದರೆ, ಚಿಪ್ಸ್ ಮತ್ತು ಪಾಪಡ್ ಅನ್ನು ಒಂದು ಹನಿ ಎಣ್ಣೆಯಿಲ್ಲದೆಯೂ ಹುರಿಯಬಹುದು. ಹಾಗಾದ್ರೆ ಸಂಪೂರ್ಣ ವಿವರಗಳನ್ನು ತಿಳಿಯೋಣ.
ಪುಲ್ಕಾ ಗ್ರಿಲ್ಡ್ ಸ್ಟ್ಯಾಂಡ್ ಮೂಲಕ ಬೇಯಿಸಿ: ಉದ್ದಿನ ಬೇಳೆ ಮತ್ತು ಅಕ್ಕಿ ಹಿಟ್ಟಿನಿಂದ ಮಾಡಿದ ಪಾಪಡ್ಗಳನ್ನು ಒಂದು ಹನಿ ಎಣ್ಣೆ ಇಲ್ಲದೆಯೇ ಕರಿದು ತಿನ್ನಬಹುದು ಎನ್ನುತ್ತಾರೆ ತಜ್ಞರು. ಅದಕ್ಕಾಗಿ ಮೊದಲು ಒಲೆಯ ಮೇಲೆ ಪುಲ್ಕಾ ಗ್ರಿಲ್ಡ್ ಸ್ಟ್ಯಾಂಡ್ ಇಡಬೇಕು. ನಂತರ ಅದರ ಮೇಲೆ ಪಾಪಡ್ ಹಾಕಿ ಬೇಯಿಸಿ. ಹೀಗೆ ಬೇಯುವ ಪಾಪಡ್ನ ಮೇಲೆ ತರಕಾರಿ ತುಂಡುಗಳು, ಸ್ವಲ್ಪ ಉಪ್ಪು, ಮೆಣಸಿನಕಾಯಿ, ನಿಂಬೆರಸ ಉದುರಿಸಿದರೆ ಸಾಕು. ಈ ಮಸಾಲಾ ಪಾಪಡ್ ರುಚಿ ಅದ್ಭುತವಾಗಿರುತ್ತದೆ.
ತವೆಯಲ್ಲಿ ಹಾಗೆ ಬೇಯಿಸಿ: ಒಲೆಯ ಮೇಲೆ ತವ ಇಟ್ಟು ಅದರಲ್ಲಿ ಪಾಪಡ್ಗಳನ್ನೂ ಎಣ್ಣೆ ಹಾಕದೆ ಬೇಯಿಸಬಹುದು. ಇದಕ್ಕಾಗಿ.. ಒಲೆಯ ಉರಿಯನ್ನು ಹೆಚ್ಚಿನದಾಗಿ ಇಟ್ಟು ಅದರಲ್ಲಿ ಬೇಯಿಸಿ. ಒಂದು ಪಾಪಡ್ ರೆಡಿಯಾಗಲು 10 ರಿಂದ 12 ಸೆಕೆಂಡ್ಗಳ ನಂತರ ಹೊರತೆಗೆದರೆ ನಿಮ್ಮ ಮುಂದೆ ಕುರುಕಲು ಪಾಪಡ್ ರೆಡಿಯಾಗುತ್ತದೆ. ಆದರೆ, ಹೆಚ್ಚು ಹೊತ್ತು ಹಾಗೆ ಬಿಟ್ಟರೆ ಸೀದಿಹೋಗುತ್ತದೆ. ಇದರಿಂದಾಗಿ ಸ್ವಲ್ವ ಕೆಂಬಣ್ಣ ಬಂದರೆ ಸಾಕು, ತವದಿಂದ ಪಾಪಡ್ ಹೊರತೆ ತೆಗೆಯಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಆಹಾರ ತಜ್ಞರು.
ಏರ್ ಫ್ರೈಯರ್: ಪ್ರಸ್ತುತ, ಮಾರುಕಟ್ಟೆಯಲ್ಲಿ ವಿವಿಧ ಏರ್ ಫ್ರೈಯರ್‌ಗಳು ಲಭ್ಯ ಇವೆ. ನೀವು ಅದನ್ನು ಖರೀದಿಸಲು ಶಕ್ತರಾಗಿದ್ದರೆ ಖಂಡಿತವಾಗಿಯೂ ತೆಗೆದುಕೊಳ್ಳಿ. ಏಕೆಂದರೆ, ಇದರ ಸಹಾಯದಿಂದ ಬಹುತೇಕ ಎಲ್ಲವನ್ನೂ ತಯಾರಿಸಬಹುದು ಎನ್ನುತ್ತಾರೆ ತಜ್ಞರು. ಆಲೂಗೆಡ್ಡೆ, ಬೆಂಡೆಕಾಯಿ, ಫ್ರೈಸ್, ಚಿಪ್ಸ್, ಕಬಾಬ್, ಕರಿ ಇತ್ಯಾದಿ ತರಕಾರಿಗಳನ್ನು ಎಣ್ಣೆ ಇಲ್ಲದೆ ತಯಾರಿಸಬಹುದು.
ಎಣ್ಣೆಯಲ್ಲಿ ಕರಿಯುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೃದ್ರೋಗದಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಆದ್ದರಿಂದಲೇ ಪಾಪಡ್ ಅನ್ನು ಎಣ್ಣೆ ಹಾಕದೆಯೇ ಕರಿದು ತಿನ್ನಬಹುದು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ನೀವೂ ಈ ಎಣ್ಣೆರಹಿತ ಪಾಪಡ್ಗಳನ್ನು ಟ್ರೈ ಮಾಡಿ ನೋಡಿ. ನಿಮಗೆ ಇಷ್ಟವಾದರೆ, ಮುಂದುವರೆಯಿರಿ..