How To Speed Up Slow Android Phone: ಇತ್ತೀಚಿನ ದಿನಗಳಲ್ಲಿ ಕಿರಿಯರು, ಹಿರಿಯರೆಂಬ ಭೇದವಿಲ್ಲದೇ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ಗಳಿವೆ. ಬಹುತೇಕರು ಆ್ಯಂಡ್ರಾಯ್ಡ್ ಮೊಬೈಲ್ ಬಳಸುತ್ತಿದ್ದಾರೆ. ಸದ್ಯ ಮೊಬೈಲ್ ಇಲ್ಲದೆ ಹೊರಗೆ ಕಾಲಿಡುವುದು ಅಸಾಧ್ಯ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ನಿಮ್ಮ ಕೈಯಲ್ಲಿ ಫೋನ್ ಇರಲೇಬೇಕು. ಫೋನ್ ಮೇಲೆ ಹೆಚ್ಚು ಅವಲಂಬಿತವಾಗಿದ್ದಾಗ ಫೋನ್ ಸ್ಲೋ ಆಗಿದ್ದರೆ ಮತ್ತು ಸರಿಯಾಗಿ ಕೆಲಸ ಮಾಡದಿದ್ದರೆ ನಿಮಗೆ ತುಂಬಾ ಕಿರಿಕಿರಿ ಅನಿಸುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು, ಮೊಬೈಲ್ ಫೋನ್ ಸ್ಪೀಡ್ ಆಗಿ ಕಾರ್ಯ ನಿರ್ವಹಿಸಲು ಮಾರ್ಗಗಳೇನು ಎಂದು ಯೋಚಿಸುತ್ತೀರಾ. ಅದಕ್ಕಾಗಿ ಈ ಸಿಂಪಲ್ ಟಿಪ್ಸ್ ಅನುಸರಿಸಿದರೆ ಮೊಬೈಲ್ ಹೊಸದಷ್ಟೇ ವೇಗವಾಗಿ ಕೆಲಸ ಮಾಡುತ್ತದೆ.
ಫೋನ್ ರಿಸ್ಟಾರ್ಟ್: ಫೋನ್‌ನ ಅತಿಯಾದ ಬಳಕೆ ಸ್ಲೋ ಆಗುವುದು ಸಾಮಾನ್ಯ. ಇದರಿಂದ ಹಲವು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಫೋನ್ ರಿಸ್ಟಾರ್ಟ್ ಮಾಡಬೇಕು. ಇದರಿಂದಾಗಿ RAM ಕ್ಲಿಯರ್ ಆಗುತ್ತದೆ. ಇದಲ್ಲದೇ ಮೊಬೈಲ್ನಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಆಟೋಮ್ಯಾಟಿಕ್ ಆಗಿ ನಿವಾರಣೆ ಆಗುತ್ತದೆ.
ಬೇಡವಾದ ಆ್ಯಪ್ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ: ಪದೇ ಪದೇ ಹೊಸ ಆ್ಯಪ್ಗಳನ್ನು ಅಳವಡಿಸುವುದರಿಂದ ಮೊಬೈಲ್ ಸ್ಲೋ ಆಗುವುದು ಸಾಮಾನ್ಯ. ಆದ್ದರಿಂದ ನಿಮ್ಮ ಫೋನ್‌ನಲ್ಲಿ ಉಪಯುಕ್ತ ಅಪ್ಲಿಕೇಶನ್‌ಗಳನ್ನು ಮಾತ್ರ ಇರಿಸಿ ಮತ್ತು ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಸೂಕ್ತ. ಇದಲ್ಲದೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಅಪ್ಲಿಕೇಶನ್‌ಗಳ ಲೈಟ್ ಆವೃತ್ತಿಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಫೋನ್‌ನ ವೇಗವನ್ನು ಸುಧಾರಿಸಬಹುದು.
ಸಾಫ್ಟ್‌ವೇರ್ ಅಪ್‌ಡೇಟ್: ಸ್ಮಾರ್ಟ್‌ಫೋನ್‌ನಲ್ಲಿರುವ ಸಾಫ್ಟ್‌ವೇರ್ ಅಪ್‌ಡೇಟ್ ಮಾಡದಿರುವುದೂ ಸಹ ಮೊಬೈಲ್ ಅನ್ನು ನಿಧಾನಗೊಳಿಸುತ್ತದೆ. ಅದಕ್ಕಾಗಿಯೇ ಸಾಫ್ಟ್‌ವೇರ್ ಅನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳುವುದು ಸೂಕ್ತ ಎನ್ನುತ್ತಾರೆ ವಿಶ್ಲೇಷಕರು. ನೀವು ಈ ರೀತಿ ಮಾಡುವುದರಿಂದ ನಿಮ್ಮ ಫೋನ್ ಹೊಸ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.
ಅನಿಮೇಷನ್ ಅಡ್ಜೆಸ್ಟ್ಮೆಂಟ್: ಸ್ಮಾರ್ಟ್‌ಫೋನ್‌ನಲ್ಲಿ ಅನಿಮೇಷನ್‌ಗಳನ್ನು ಕಡಿಮೆ ಮಾಡುವುದು ಅಥವಾ ಸ್ಟಾಪ್ ಮಾಡುವುದರಿಂದ ಫೋನ್ ವೇಗವನ್ನು ಸುಧಾರಿಸಬಹುದು. ಫೋನ್ ವೇಗವಾಗಿ ಕೆಲಸ ಮಾಡಲು 'Animator Duration Scale', 'Transition Animation Scale', 'Window Animation Scale' ಸೆಟ್ಟಿಂಗ್‌ಗಳನ್ನು '5X' ಅಥವಾ 'ಆಫ್' ಮೋಡ್‌ಗೆ ಬದಲಾಯಿಸುವುದು ಸೂಕ್ತ. ಹೀಗೆ ಈ ರೀತಿಯ ಸ್ಟೆಟ್ಟಿಂಗ್ ಅಳವಡಿಸುವುದರಿಂದ ನಿಮ್ಮ ಫೋನ್ ವೇಗಗೊಳಿಸಬಹುದು.
ಇದನ್ನೂ ಓದಿ: ಬಿಡುಗಡೆಗೆ ಸಿದ್ಧವಾಗಿದೆ ವಿಶ್ವದ ಮೊದಲ ಟ್ರೈ-ಫೋಲ್ಡಬಲ್ ಸ್ಮಾರ್ಟ್‌ಫೋನ್! - Tri Fold Smartphone